ಹುಣಸೂರು : ರಾತ್ರಿ ಇಡೀ ಸುರಿದ ಮಳೆಗೆ ನಗರದ ಸಾಕೇತ, ಮಂಜುನಾಥ ಬಡಾವಣೆಯ ಕೆಲ ರಸ್ತೆಗಳು ಜಲಾವೃತವಾಗಿದ್ದು ಜನರು ಪರದಾಡುವಂತಾಗಿದೆ.
ಸಾಕೇತ ಬಡಾವಣೆಯ ಬೀದಿಗಳಲ್ಲಿ ರಸ್ತೆಯೂ ಇಲ್ಲ, ಚರಂಡೀಯೂ ಇಲ್ಲದೆ ನೀರು ಎಲ್ಲೆಂದರಲ್ಲಿ ಹರಿಯುತ್ತಿದ್ದು. ಗಲೀಜು ನೀರು ತಗ್ಗು ಪ್ರದೇಶದ ಮನೆಯೊಳಕ್ಕೂ ನುಗ್ಗಿದೆ. ಇದೇ ಬಡಾವಣೆ ಪಕ್ಕದ ವಳ್ಳಮ್ಮನಕಟ್ಟೆ ತುಂಬಿ ರಾಜ ಕಾಲುವೆಯಲ್ಲಿ ಹರಿಯಬೇಕಾಗಿದ್ದ ನೀರು ಬಡಾವಣೆ ನಿರ್ಮಿಸಿದವರು ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದರಿಂದಾಗಿ ನೀರಿನ ಹರಿವಿಗೆ ಸಮರ್ಪಕ ಕಾಲುವೆ ಇಲ್ಲದೆ ಬಡಾವಣೆಯ ಹಳ್ಳಗಳಲ್ಲಿ ನೀರು ತುಂಬಿಕೊಂಡಿದೆ.
ಈ ವರ್ಷದಲ್ಲಿ ಮೂರನೇ ಬಾರಿಗೆ ಬಡಾವಣೆ ಜಲಾವೃತವಾಗಿದೆ. ಬಡಾವಣೆ ನಿವಾಸಿಗಳಿಂದ ತೆರಿಗೆ ವಸೂಲಿ ಮಾಡುವ ನಗರಸಭೆ ಅಧಿಕಾರಿಗಳು ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.
ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಹಾಗೂ ಸಮರ್ಪಕ ರಸ್ತೆ, ಚರಂಡಿ ನಿರ್ಮಿಸಬೇಕೆಂದು ತಾಲೂಕು ಕ.ರ.ವೇ. ಅಧ್ಯಕ್ಷ ಪುರುಷೋತ್ತಮ್. ಬಡಾವಣೆ ನಿವಾಸಿಗಳಾದ ರವಿಶಂಕರ್, ನಾರಾಯಣ್, ವಾಸುಕಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ದೆಹಲಿಯಲ್ಲಿ ಭಾರಿ ಮಳೆ: ಕಟ್ಟಡ ಕುಸಿದು 3 ಮಂದಿ ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ