Advertisement
ಸುಳ್ಯ ತಾಲೂಕಿನ ಕೊಲ್ಲಮೊಗ್ರು ಪರಿಸರದಲ್ಲಿ ಭಾರೀ ಮಳೆಗೆ ಕೊಲ್ಲಮೊಗ್ರು ಕಲ್ಮಕಾರು ರಸ್ತೆಯ ಶಾಲಾ ಬಳಿ ಇರುವ ಸೇತುವೆ ಮಳೆಗೆ ಜಲಾವೃತಗೊಂಡಿತು.
ಭಾರೀ ಮಳೆಯಿಂದಾಗಿ ಭತ್ತದ ಕೊಯ್ಲಿಗೆ ಬಹಳಷ್ಟು ತೊಂದರೆಯಾಗಿದೆ. ಮಾತ್ರವಲ್ಲದೇ ಅಡಿಕೆ ಸಹಿತ ಕೃಷಿ ತೋಟಗಳಿಗೆ ತೊಂದರೆಯಾಗಿದೆ. ಸುಳ್ಯ, ಪುತ್ತೂರು ಹೊರತುಪಡಿಸಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬುಧವಾರ ಮಳೆ ಪ್ರಮಾಣ ಕಡಿಮೆ ಇತ್ತು. ಉಡುಪಿ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣವಿತ್ತು.
Related Articles
Advertisement
ಕರಾವಳಿಯಲ್ಲಿ ಮಳೆ ಸಾಧ್ಯತೆಕೆಲವು ದಿನಗಳ ಹಿಂದೆ ಬಿರುಸುಗೊಂಡ ಮಳೆ ಕರಾವಳಿಯಲ್ಲಿ ಸದ್ಯ ತಗ್ಗಿದ್ದು, ಅ. 22ರಿಂದ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಅ. 22ರಿಂದ 24ರವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ತುಸು ಏರಿಕೆ ಕಂಡಿದ್ದು, ಸೆಕೆಯ ವಾತಾವರಣ ಇತ್ತು. ಮಂಗಳೂರಿನಲ್ಲಿ 30.8 ಡಿ.ಸೆ. ಗರಿಷ್ಠ ಉಷ್ಣಾಂಶ ಮತ್ತು 24.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.