Advertisement

ಸೆಪ್ಟಂಬರ್‌ನಲ್ಲಿ ಮತ್ತೆ ಭಾರೀ ಮಳೆ? ದೇಶಾದ್ಯಂತ ಭರ್ಜರಿ ಮುಕ್ತಾಯ ಕಾಣಲಿರುವ ಮಳೆಗಾಲ

11:26 PM Sep 05, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಮುಂಗಾರು ಹಿಂದಕ್ಕೆ ಸರಿಯುವ ಸಮಯ ಸನ್ನಿಹಿತವಾಗಿದೆ. ಈ ವರ್ಷ ವಾಡಿಕೆಗಿಂತ ಸ್ವಲ್ಪ ಬೇಗನೆ ಆಗಮಿಸಿದ್ದರೂ ಮುಂಗಾರು ಆರಂಭದಲ್ಲಿ ಚುರುಕು ಕಂಡಿರಲಿಲ್ಲ. ಆ ಬಳಿಕ ನಿಧಾನವಾಗಿ ಉತ್ತಮ ಮಳೆ ಬೀಳಲು ಆರಂಭವಾಗಿತ್ತು. ನಿಗದಿತ ಸಮಯದಲ್ಲಿ ಅದು ದೇಶವನ್ನಿಡೀ ವ್ಯಾಪಿಸಿದ್ದರೂ ಏಕಪ್ರಕಾರವಾಗಿ ಸಮತೋಲನದಿಂದ ಸುರಿಯದೆ ಒಂದು ಭಾಗಕ್ಕೆ ಹೆಚ್ಚು, ಇನ್ನೊಂದು ಭಾಗಕ್ಕೆ ಕಡಿಮೆ ಎಂಬಂತೆ ಸುರಿದಿದೆ. ಕರಾವಳಿಯಲ್ಲಿ ಜೂನ್‌ ಮತ್ತು ಜುಲೈಯಲ್ಲಿ ಚೆನ್ನಾಗಿ ಮಳೆಯಾಗಿದೆ. ಆ ಬಳಿಕ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಕೊಡಗು- ಹೀಗೆ ಕೆಲವು ಕಡೆಗಳಲ್ಲಿ ದಿಢೀರನೆ ಒಮ್ಮೆಲೆ ಭಾರೀ ಮಳೆಯಾಗುವ ಪ್ರಕೃತಿ ವಿಕೋಪದಂತಹ ಬೆಳವಣಿಗೆ ಈ ವರ್ಷದ ಹೊಸ ವಿದ್ಯಮಾನ.

Advertisement

ಕಳೆದ ಕೆಲವು ವರ್ಷಗಳಂತೆ ಈ ವರ್ಷವೂ ಅಲ್ಲಲ್ಲಿ ಗುಡ್ಡ ಕುಸಿತ, ಭೂಕುಸಿತಗಳು ಸಂಭವಿಸಿವೆ. ಈ ವಿಕೋಪ ಕೇವಲ ಕರಾವಳಿಗೆ ಮಾತ್ರ ಸೀಮಿತವಾಗಿಲ್ಲ; ದೇಶದ ವಿವಿಧ ಭಾಗಗಳಲ್ಲಿಯೂ ಘಟಿಸಿದೆ. ಭಾರತದ ಮಟ್ಟಿಗೆ ಮಳೆಗಾಲ ಕೃಷಿ ಸಹಿತ ವಿವಿಧ ಕ್ಷೇತ್ರಗಳಿಗೆ ಚೈತನ್ಯ ಒದಗಿಸುತ್ತದೆ. ಒಟ್ಟಾರೆಯಾಗಿ ಈ ಬಾರಿಯ ಮಳೆಗಾಲ ಹೇಗಿತ್ತು ಎಂಬ ಪಕ್ಷಿನೋಟ ಇಲ್ಲಿದೆ.

ಆಗಸ್ಟ್‌ನಲ್ಲಿ ಎಷ್ಟು ಮಳೆ?
ವಾಡಿಕೆಗಿಂತ ಶೇ. 3.4 ಅಧಿಕ

ಎಲ್ಲಿ ಮಳೆ ಕಡಿಮೆ?
ಜುಲೈ ಮತ್ತು ಆಗಸ್ಟ್‌ನಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಳೆ ಕಡಿಮೆ.

ಸೆಪ್ಟಂಬರ್‌ನಲ್ಲಿ ಎಷ್ಟು ಮಳೆ?
ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಬಿಡುಗಡೆ ಮಾಡಿರುವ ಮುನ್ಸೂ ಚನೆಯ ಪ್ರಕಾರ 2022ರ ಸೆಪ್ಟಂಬರ್‌ನಲ್ಲಿ ಈ ತಿಂಗಳ ದೀರ್ಘಾವಧಿ ಸರಾಸರಿ ಗಿಂತ ಶೇ. 109ರಷ್ಟು ಹೆಚ್ಚು ವರಿ ಮಳೆಯಾಗಲಿದೆ.
ಸೆ. 9ರ ಬಳಿಕ ಮುಂಗಾರು ಮಾರುತ ಗಳು ಮತ್ತೆ ಚುರು ಕಾಗ ಲಿವೆ ಎಂದಿದ್ದಾರೆ ಮೊಹಾಪಾತ್ರ.

Advertisement

ಮಳೆಗಾಲ ಮುಕ್ತಾಯ:
ಐಎಂಡಿ ಮುನ್ಸೂಚನೆ ಏನು?
01.ಮಳೆಗಾಲ ಮುಕ್ತಾಯವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕೆಲವು ದಿನಗಳ ಹಿಂದೆ ಹೇಳಿತ್ತು. ಆದರೆ ಮುಂಗಾರು ಮಾರುತಗಳು ಈಗ ಮತ್ತೆ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಮಳೆಗಾಲ ಮುಕ್ತಾಯ ವಿಳಂಬವಾಗಬಹುದು ಎಂದಿದೆ.
02.ನೈಋತ್ಯ ಮುಂಗಾರು ಮಾರುತಗಳು ಸೆಪ್ಟಂಬರ್‌ನಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ ಸುರಿಸಲಿವೆ. ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ಮಾತ್ರ ಮಳೆ ಕಡಿಮೆ ಇರಲಿದೆ.
03.ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್‌, ಪ. ಬಂಗಾಲಗಳಲ್ಲಿ ಈವರೆಗೆ ಉತ್ತಮ ಮಳೆ ಸುರಿದಿಲ್ಲ. ಹೀಗಾಗಿ ಅಲ್ಲಿ ಭತ್ತ ಬಿತ್ತನೆ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಸೆಪ್ಟಂಬರ್‌ ಮಳೆಯೂ ಬೀಳದೆ ಇದ್ದರೆ ಇನ್ನಷ್ಟು ಹಿನ್ನಡೆಯಾಗಬಹುದು.
04.ಮಧ್ಯ, ಪಶ್ಚಿಮ, ದಕ್ಷಿಣ ಭಾರತದಲ್ಲಿ ಈಗಾಗಲೇ ಬಿತ್ತನೆ ಯಾ ಗಿದ್ದು, ಈಗ ಅಧಿಕ ಮಳೆಯಾದರೆ ಬೆಳೆಗಳಿಗೆ ತೊಂದರೆ.

 

Advertisement

Udayavani is now on Telegram. Click here to join our channel and stay updated with the latest news.

Next