ಕಾಪು : ಕಾಪು ಪರಿಸರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಿವಿಧೆಡೆ ಬೆಳೆ ಹಾನಿಯುಂಟಾಗಿದೆ.
ಅಕಾಲಿಕ ಮಳೆಯಿಂದಾಗಿ ಹೊಳೆ ತೀರದ ಗದ್ದೆಗಳು, ತಗ್ಗು ಪ್ರದೇಶದ ಗದ್ದೆಗಳಲ್ಲಿ ನೀರು ನಿಂತಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಕಾಪು ಪುರಸಭೆ ವ್ಯಾಪ್ತಿಯ ಕೈಪುಂಜಾಲು, ಉಳಿಯಾರಗೋಳಿ, ಕೋತಲಕಟ್ಟೆ ಹಾಗೂ ಪಾಂಗಾಳ ಪರಿಸರದಲ್ಲಿ ತರಕಾರಿ, ಮಟ್ಟುಗುಳ್ಳ, ಉದ್ದು ಮತ್ತು ಜೋಳ ಸಹಿತವಾಗಿ ವಾಣಿಜ್ಯ ಬೆಳೆಗಳಿಗೆ ಹಾನಿಯುಂಟಾಗಿದೆ.
ಕೈಪುಂಜಾಲು ವ್ಯಾಪ್ತಿಯಲ್ಲಿ ನೆರೆ ಬಂದು ಕೃಷಿಗೆ ಹಾನಿಯಾಗಿರುವ ಪ್ರದೇಶಕ್ಕೆ ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಕಂದಾಯ ಪರಿವೀಕ್ಷಕ ಸುಧೀರ್ ಶೆಟ್ಟಿ, ಗ್ರಾಮ ಕರಣಿಕ ಮಥಾಯಿ, ಇಂಜಿನಿಯರ್ ಪ್ರತಿಮಾ, ಯೋಜನಾ ಪ್ರಾಧಿಕಾರದ ಸದಸ್ಯ ರಮೇಶ್ ಪೂಜಾರಿ. ಹರೀಶ್ ಪೂಜಾರಿ, ದೀಲಿಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕೊಯಂಬತ್ತೂರಿನಲ್ಲಿ ಖ್ಯಾತ ಫ್ಯಾಶನ್ ಡಿಸೈನರ್ ಸತ್ಯ ಪೌಲ್ ವಿಧಿವಶ