ಹೊಸದಿಲ್ಲಿ: ಪ್ರಸಕ್ತ ವರ್ಷದ ಆಗಸ್ಟ್ ತಿಂಗಳೊಂದರಲ್ಲಿ ದೇಶವು 44 ವರ್ಷಗಳಲ್ಲೇ ಅತ್ಯಧಿಕ ಮಳೆಯನ್ನು ಕಂಡಿದೆ. ಈ ತಿಂಗಳಲ್ಲಿ 296 ಮಿ.ಮೀ. ಮಳೆಯಾಗಿದ್ದು, ಶೇ.25 ಹೆಚ್ಚುವರಿ ಮಳೆ ಬಿದ್ದಂತಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಆಗಸ್ಟ್‌ನಲ್ಲಿ ಇಷ್ಟೊಂದು ಮಳೆ ಬಿದ್ದಿರುವುದು 1976ರ ಬಳಿಕ ಇದೇ ಮೊದಲು ಎಂದು ಇಲಾಖೆ ಹೇಳಿದೆ. ಜುಲೈ ತಿಂಗಳಲ್ಲಿ ಸರಾಸರಿಗಿಂತ ಶೇ.10ರಷ್ಟು ಕಡಿಮೆ ಮಳೆಯಾ ಗಿತ್ತು. ಆದರೆ, ಆಗಸ್ಟ್‌ನಲ್ಲಿ ದೇಶಾದ್ಯಂತ ಉತ್ತಮ ಮಳೆಯಾದ ಕಾರಣ, ಈ ದಾಖಲೆ ಸೃಷ್ಟಿಯಾಗಿದೆ. ಸೆಪ್ಟಂಬರ್‌ನಲ್ಲಿ ವರುಣನ ಅಬ್ಬರ ತಗ್ಗಲಿದೆ ಎಂದೂ ಇಲಾಖೆ ಹೇಳಿದೆ.
ಪ್ರಸಕ್ತ ಮುಂಗಾರಿನಲ್ಲಿ ಇಲಾಖೆ ನೀಡಿರುವ ಮುನ್ಸೂಚನೆಯು ನಿಖರವಾಗಿತ್ತು. ದೇಶ ಪೂರ್ತಿ ಮಳೆಯ ಹಂಚಿಕೆಯೂ ಉತ್ತಮವಾ ಗಿತ್ತು. ಸೆಪ್ಟಂಬರ್‌ನಲ್ಲಿ ಮಳೆಯ ತೀವ್ರತೆ ಕಡಿಮೆ ಯಾಗಲಿದ್ದು, ಎಲ್ಲೆಲ್ಲಿ ಕಡಿಮೆ ಮಳೆ ಯಾಗಿದೆಯೋ, ಅಂಥ ಪ್ರದೇಶಗಳಲ್ಲಿ ಹೆಚ್ಚು ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಇಲಾಖೆ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ತಿಳಿಸಿದ್ದಾರೆ.
ಶೇ.25 ಹೆಚ್ಚುವರಿ ಮಳೆ: ಆ.1ರಿಂದ 28ರ ವರೆಗೆ ದೇಶವು 296.2 ಮಿ.ಮೀ. ಮಳೆ ಯನ್ನು ಕಂಡಿದೆ. ವಾಡಿಕೆಯಂತೆ ಈ ಅವಧಿ ಯಲ್ಲಿ ಪ್ರತಿ ವರ್ಷ 237.2 ಮಿ.ಮೀ. ಮಳೆ ಯಾಗುತ್ತದೆ. ಹಾಗಾಗಿ, ಈ ವರ್ಷ ಶೇ.25 ರಷ್ಟು ಹೆಚ್ಚು ಮಳೆ ಬಿದ್ದಂತಾಗಿದೆ. 1976ರ ಆಗಸ್ಟ್‌ನಲ್ಲಿ ಸಾಮಾನ್ಯಕ್ಕಿಂತ ಶೇ.28.4 ರಷ್ಟು ಹೆಚ್ಚುವರಿ ಮಳೆ ಸುರಿದು ದಾಖಲೆ ಸೃಷ್ಟಿಯಾಗಿತ್ತು. ಆಗಸ್ಟ್‌ನಲ್ಲಿ ಅತ್ಯಧಿಕ ಮಳೆಯಾದ ವರ್ಷವೆಂದರೆ 1926. ಆಗ ಸರಾಸರಿಗಿಂತ ಶೇ.33ರಷ್ಟು ಹೆಚ್ಚು ಮಳೆಯಾಗಿತ್ತು ಎಂದು ಇಲಾಖೆ ಹೇಳಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆ
ಈ ನಡುವೆ, ಶನಿವಾರ ಮಹಾರಾಷ್ಟ್ರದ ಮುಂಬಯಿ, ಥಾಣೆ, ಪಾಲ^ರ್ ಹಾಗೂ ರಾಯಗಢ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ರವಿವಾರವೂ ಇಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಛತ್ತೀಸ್‌ಗಢದಲ್ಲಿ ಪ್ರವಾಹ ಸ್ಥಿತಿ
ಕಳೆದ 2 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಛತ್ತೀಸ್‌ಗಢದ 4 ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾನದಿ ಸೇರಿದಂತೆ ಹಲವು ನದಿಗಳು ಅಪಾ ಯದ ಮಟ್ಟ ಮೀರಿ ಹರಿಯಲಾ ರಂಭಿಸಿವೆ. 12 ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿ ಯಾಗಿವೆ, ಸಾವಿರಾರು ಮಂದಿಯನ್ನು ಪರಿ ಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.