Advertisement

ಸರಣಿ ರಜೆ: ದೇವಸ್ಥಾನಗಳಲ್ಲಿ ಭಕ್ತ ಜನಸಾಗರ

09:50 AM Mar 31, 2018 | Karthik A |

ಉಡುಪಿ/ಮಂಗಳೂರು: ನಾಡಿನ ವಿವಿಧ ದೇವಸ್ಥಾನಗಳಿಗೆ ಭೇಟಿ ಕೊಡುವ ಭಕ್ತರ ಸಂಖ್ಯೆ ಜಾಸ್ತಿಯಾಗಿದೆ. ಗುರುವಾರದಿಂದ ಮೊದಲ್ಗೊಂಡು ನಾಲ್ಕು ದಿನ ಸತತ ರಜೆಗಳು ಇರುವುದರಿಂದ ಮತ್ತು ಪಿಯುಸಿ ಪರೀಕ್ಷೆ ಮುಗಿದಿರುವುದರಿಂದ ಮಕ್ಕಳೊಂದಿಗೆ ಪೋಷಕರು ರಾಜ್ಯ ಮತ್ತು ಹೊರರಾಜ್ಯಗಳ ವಿವಿಧೆಡೆಗಳಿಂದ ಕೊಲ್ಲೂರು, ಉಡುಪಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು ಮೊದಲಾದದೇವಸ್ಥಾನಗಳಿಗೆ ಆಗಮಿಸಿದ್ದರು. ಎಲ್ಲ ಕಡೆ ದೇವರ ದರ್ಶನ ವ್ಯವಸ್ಥೆ ಮಾಡಲು ಆಡಳಿತದವರು, ಸಿಬಂದಿ, ಭದ್ರತಾ ಸಿಬಂದಿ ಪ್ರಯತ್ನ ಪಡಬೇಕಾಯಿತು. ಕೊಲ್ಲೂರಿನಲ್ಲಿ ಮುಂಜಾನೆ ಆರಂಭಗೊಂಡ ಸರತಿ ಸಾಲು ಆರ್‌.ಎನ್‌. ಶೆಟ್ಟಿ ಅತಿಥಿಗೃಹದವರೆಗೆ, ಉಡುಪಿಯಲ್ಲಿ ಗೀತಾ ಮಂದಿರದವರೆಗೆ ಸರತಿ ಸಾಲು ಬೆಳೆದಿತ್ತು.

Advertisement

ವಸತಿಗೃಹ ಭರ್ತಿ: ಕೊಲ್ಲೂರು ದೇಗುಲ ಅಧೀನದಲ್ಲಿರುವ ವಸತಿಗೃಹ ಸಹಿತ ಎಲ್ಲ ವಸತಿಗೃಹಗಳು ಭರ್ತಿಯಾಗಿದ್ದು, ಅನ್ಯ ರಾಜ್ಯಗಳಿಂದ ಆಗಮಿಸಿದ ಭಕ್ತರು ಕುಂದಾಪುರ ಪರಿಸರದ ವಸತಿಗೃಹಗಳಿಗೆ ತೆರಳಬೇಕಾದ ಪರಿಸ್ಥಿತಿ ಕಂಡುಬಂತು. ಕೆಲವೊಂದು ವಸತಿಗೃಹಗಳಲ್ಲಿ ದುಬಾರಿ ಬಾಡಿಗೆ ವಸೂಲಿ ಮಾಡುತ್ತಿರುವ ಬಗ್ಗೆ ಅನೇಕ ಭಕ್ತರು ಆರೋಪಿಸಿದ್ದಾರೆ. ಉಡುಪಿ ಮೊದಲಾದೆಡೆಯೂ ಅತಿಥಿಗೃಹಗಳು ತುಂಬಿ ಹೋಗಿವೆ. ಹಟ್ಟಿಯಂಗಡಿ, ಆನೆಗುಡ್ಡೆ, ಮಂದಾರ್ತಿ ಮೊದಲಾದ ದೇವಸ್ಥಾನಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಿಗೆ ಕಂಡುಬಂತು.

— ಚಿತ್ರ: ರಮೇಶ್‌ ಕೊಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next