ಬೆಳಗಾವಿ: ಕುಂದಾನಗರಿಯಲ್ಲಿ ಮೈಕೊರೆಯುವ ಚಳಿ ಇನ್ನೂ ಕಡಿಮೆಯಾಗಿಲ್ಲ ಸತತ ಎರಡನೇ ದಿನವೂ ಗುರುವಾರ ಕನಿಷ್ಠ ತಾಪಮಾನ 8.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ದಿನದಿಂದ ದಿನಕ್ಕೆ ಬೆಳಗಾವಿಯಲ್ಲಿ ತಾಪಮಾನ ಇಳಿಕೆ ಆಗುತ್ತಿದ್ದು ಗುರುವಾರ ಚಳಿಯ ಪ್ರಮಾಣ ಹೆಚ್ಚಾಗಿರುವುದರಿಂದ ಜನರು ಜನರು ಚಳಿಗೆ ಹೆದರಿದ್ದಾರೆ. ಬುಧವಾರವಷ್ಟೇ 8.6 ಡಿಗ್ರಿ ಸೆಲ್ಸಿಯಸ್ ನಷ್ಟು ಇದ್ದ ಕನಿಷ್ಠ ತಾಪಮಾನ, ಗುರುವಾರ 8.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇತ್ತು.
ಇದನ್ನೂ ಓದಿ:ಸರ್ಕಾರ Vs ಕಾಂಗ್ರೆಸ್: ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ ಎಂದ ಡಿ ಕೆ ಸುರೇಶ್
ಹತ್ತು ವರ್ಷಗಳ ನಂತರ ಇಷ್ಟೊಂದು ಪ್ರಮಾಣದ ಚಳಿ ಈಗ ಕಂಡುಬಂದಿದೆ. ಜನರು ಚಳಿಯಿಂದ ತಪ್ಪಿಸಿಕೊಳ್ಳಲು ಗುರುವಾರ ಬೆಳಿಗ್ಗೆ ಬಿಸಿಲನ್ನು ಕಾಯಿಸಿ ಕೊಳ್ಳುತ್ತಿರುವ ದೃಶ್ಯ ಕಂಡು ಬಂತು. ಇನ್ನೂ ಮೂರ್ನಾಲ್ಕು ದಿನಗಳ ಕಾಲ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.