Advertisement
“ಅರೇಬಿಯನ್ ಸಮುದ್ರದಿಂದ ದಕ್ಷಿಣ ಭಾರತದ ಕರಾವಳಿ ಭಾಗದ ಕಡೆಗೆ ಬಲವಾದ ಮಾರುತಗಳು ಬೀಸುತ್ತಿದ್ದು, ಕರ್ನಾಟಕದ ಕರಾವಳಿ ಭಾಗ, ಕೇರಳ, ತಮಿಳುನಾಡು ಮತ್ತು ಮಹೆ ಪ್ರದೇಶಗಳಲ್ಲಿ ಮೇ 16ರವರೆಗೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ’ ಎಂದು ಭಾನುವಾರ ಐಎಂಡಿ ಎಚ್ಚರಿಸಿದೆ. ಈ ಪ್ರದೇಶಗಳಲ್ಲಿ 64 ಮಿ.ಮೀ.ನಿಂದ 204.4ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅದೇ ಹಿನ್ನೆಲೆ ಎರ್ನಾಕುಲಂ, ಇಡುಕ್ಕಿ, ತ್ರಿಸೂರು, ಕೋಚಿಕೋಡ್ ಮತ್ತು ಕಣ್ಣೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
Related Articles
Advertisement
ಶೇ.43 ಹೆಚ್ಚುವರಿ ಮಳೆ: ಭಾರತದ ದಕ್ಷಿಣ ಭಾಗದಲ್ಲಿ ಮಾ.1ರಿಂದ ಮೇ 14ರವರೆಗೆ 109 ಮಿ.ಮೀ. ಮಳೆಯಾಗಿದೆ. ಇದು ಅಂದಾಜು ಮಳೆಗಿಂತ ಶೇ.43 ಹೆಚ್ಚಿದೆ. ಈ ಅವಧಿಯಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮೊದಲೇ ಅಂದಾಜಿಸಿದ್ದ ಪೂರ್ವ ಮುಂಗಾರು ಮಳೆ ಪ್ರಮಾಣದಲ್ಲಿ ಈಗಾಗಲೇ ಕರ್ನಾಟಕವು ಶೇ.82 ಮಳೆ ಕಂಡಿದೆ. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಶೇ.79, ಕೇರಳದಲ್ಲಿ ಶೇ.73, ಪುದುಚೆರಿಯಲ್ಲಿ ಶೇ.59, ಲಕ್ಷದ್ವೀಪದಲ್ಲಿ ಶೇ.39 ಮತ್ತು ತಮಿಳುನಾಡಿನಲ್ಲಿ ಶೇ.21 ಪೂರ್ವ ಮುಂಗಾರಿನ ಮಳೆಯಾಗಿದೆ. ಅಂಡಮಾನ್ ನಿಕೋಬಾರ್‌ಗೆ ಮುಂಗಾರು ಎಂಟ್ರಿ.
ಪ್ರತಿ ವರ್ಷಕ್ಕಿಂತ ಈ ವರ್ಷ ಬಹುಬೇಗನೆ ಆಗಮಿಸಿರುವ ಮುಂಗಾರು ಭಾನುವಾರವೇ ಅಂಡಮಾನ್ ನಿಕೋಬಾರ್ ದ್ವೀಪ ಮತ್ತು ಆಗ್ನೇಯ ಬಂಗಾಳ ಕೊಲ್ಲಿಗೆ ಕಾಲಿಟ್ಟಿದೆ. ದಿನಕಳೆದಂತೆ ಮುಂಗಾರು ಬಿರುಸಾಗಲಿದ್ದು, ಈ ಪ್ರದೇಶಗಳಲ್ಲಿ ಮುಂದಿನ 5 ದಿನಗಳ ಕಾಲ 64.55ಮಿ.ಮೀ.ನಿಂದ 115.4ಮಿ.ಮೀ. ಮಳೆಯಾಗಲಿದೆ ಎಂದು ಐಎಂಡಿ ಭಾನುವಾರ ಎಚ್ಚರಿಸಿದೆ. ಅಸ್ಸಾಂನಲ್ಲಿ ಭೂಕುಸಿತ,
ರೈಲು ಸೇವೆ ಸ್ಥಗಿತ
ಅಸ್ಸಾಂನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದೆ. ದಿಮಾ ಹಸಾವೋ ಜಿಲ್ಲೆಯಲ್ಲಿ ಭಾನುವಾರ ಉಂಟಾದ ಭೂಕುಸಿತದಿಂದಾಗಿ ಬರಾಕ್ ಕಣಿವೆ ಪ್ರದೇಶ ರೈಲು ಮತ್ತು ವಾಹನ ಸಂಚಾರ ಸ್ಥಗಿತ ಗೊಂಡಿತ್ತು. 76ಕಿ.ಮೀ ರೈಲು ಹಳಿಗೆ 26 ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದ್ದರಿಂದಾಗಿ 17 ರೈಲುಗಳ ಸಂಚಾರ ನಿಷೇಧಿಸಲಾಗಿತ್ತು. ಅದಾಗಲೇ ಹಳಿಗಿಳಿದಿದ್ದ ಎರಡು ರೈಲುಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದ್ದು, ಅದರಲ್ಲಿದ್ದ 2,645 ಜನರನ್ನು ಬೇರೆ ಬಸ್ಸು, ಹೆಲಿಕಾಪ್ಟರ್‌ಗಳನ್ನು ಬಳಸಿ ಸ್ಥಳಾಂತರ ಮಾಡಲಾಗಿದೆ.