Advertisement
ಈ ಕುರಿತು “ಉದಯವಾಣಿ’ಗೆ ಹಲವು ಮಂದಿ ಮಾಹಿತಿ ನೀಡಿದ್ದಾರೆ. “ಮಧ್ಯಾಹ್ನ 3 ಗಂಟೆ ವೇಳೆಗೆ ನಿಲ್ಲಿಸಿದ ಕಾರು, ಬೈಕ್‌ಗಳ ಮೇಲೆ ಕೆಸರು ನೀರು ಬಿದ್ದಿದೆ. ಅಂಗಳದಲ್ಲಿ ಪಾತ್ರೆ ಇಟ್ಟಾಗ ಅದಕ್ಕೂ ಕೆಸರು ನೀರು ಬಿದ್ದಿದೆ’ ಎಂದು ನಿಟ್ಟೂರಿನ ವೀಡಿಯೋಗ್ರಾಫರ್ ಸುಂದರ್ ತಿಳಿಸಿದ್ದಾರೆ. ಹಿರಿಯಡಕದ ಕೆಲವರೂ ಈ ಕುರಿತು ತಿಳಿಸಿದ್ದಾರೆ.
ಸ್ಕೂಟಿಯಲ್ಲಿ ಸಂಜೆ ಕಾಲೇಜಿನಿಂದ ಬಂದ ಅನಂತರ ಹೆಲ್ಮೆಟ್ ಗಮನಿಸಿದಾಗ ಅದರ ಮೇಲೆ ಕೂಡ ಬಿಳಿ ಬಣ್ಣದ ಚುಕ್ಕೆಗಳು ಮಸುಕಾಗಿ ಇರುವುದು ಗಮನಿಸಿದೆ. ಒಂದು ಬಾರಿ ಮಾತ್ರ ನನಗೆ ಮಳೆ ಸಿಕ್ಕಿತ್ತು ಎಂದು ಉಪನ್ಯಾಸಕಿಯೊಬ್ಬರು ತಿಳಿಸಿದ್ದಾರೆ.
Related Articles
ಕುಂದಾಪುರ, ಸಿದ್ದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಪಡುಬಿದ್ರಿ, ಶಿರ್ವ, ಕಾಪು ಪರಿಸರದಲ್ಲಿ ಸಾಧಾರಣ, ಪಡುಕೋಣೆ, ಮರವಂತೆ ಯಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಂಜೆ ವೇಳೆ ಮೋಡ ಮುಸುಕಿತ್ತು. ವೇಣೂರು, ಮಚ್ಚಿನ, ಮದ್ದಡ್ಕ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳದಲ್ಲಿ ಮಳೆಯಾಗಿದೆ.
Advertisement