Advertisement
ಕಳೆದ ವಾರದಿಂದ ಸುರಿಯುತ್ತಿರುವ ಈ ಮಳೆಯಿಂದಾಗಿ ಇದುವರೆಗೆ 12 ಮಂದಿ ಪ್ರಾಣ ಕಳೆದುಕೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಮಂದಿ ನಿರ್ವಸತಿಗರಾಗಿದ್ದಾರೆ ಎಂದು ತಮಿಳುನಾಡು ಸರಕಾರ ತಿಳಿಸಿದೆ.
Related Articles
Advertisement
ಶೇ.93ರಷ್ಟು ಹೆಚ್ಚು: ತಮಿಳುನಾಡಿನಲ್ಲಿ ಅ.1ರಿಂದ ನ.4ರ ವರೆಗಿನ ಅವಧಿಯಲ್ಲಿ ವಾಡಿಕೆಗಿಂತ ಶೇ.93ರಷ್ಟು ಹೆಚ್ಚು ಮಳೆ ಬಿದ್ದಿದೆ. ಜತೆಗೆ, ಬಂಗಾಲ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಮತ್ತು ಸುಳಿಗಾಳಿ ಎದ್ದಿದ್ದು, ರಾಜ್ಯದಲ್ಲಿ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಲಿದೆ. ಅ.31ರಿಂದ ಈವರೆಗೆ ಮಳೆ ಸಂಬಂಧಿ ಘಟನೆಗಳಿಂದ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ.10 ಸಾವಿರ ನಿರಾಶ್ರಿತರು: ಚೆನ್ನೈ ಸಹಿತ ತಮಿಳುನಾಡಿನ ಹಲವಾರು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 10 ಸಾವಿರ ಮಂದಿ ನಿರಾಶ್ರಿ ತರಾಗಿದ್ದಾರೆ. 115 ನಿರಾಶ್ರಿತ ಶಿಬಿರಗಳನ್ನು ವ್ಯವಸ್ಥೆ ಮಾಡಲಾಗಿದೆ. ಎಲ್ಲೆಲ್ಲಿ ಮಳೆ?: ಚೆನ್ನೈ, ಪುದುಚೇರಿ, ಕರೈಕಲ್, ಅರಿಯಲೂರು, ಕಡಲೂರು, ಕಾಂಚೀಪುರಂ, ನಾಗಪಟ್ಟಣಂ, ಪೆರಂಬಲೂರು, ಪುದುಕೊಟ್ಟೈ, ರಾಮನಾಥಪುರಂ, ಶಿವಗಂಗಾ, ತಂಜಾವೂರು, ತಿರುವೆಲ್ಲೂರು, ತೂತುಕೂಡಿ, ತಿರುಚಿನಾಪಳ್ಳಿ, ತಿರುವಣ್ಣಮಲೈ, ವೆಲ್ಲೂರು, ವೆಲ್ಲುಪುರಂ, ವಿರುಧುನಗರಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. 2015ರ ಕರಾಳ ನೆನಪು
ಎರಡು ವರ್ಷಗಳ ಹಿಂದಷ್ಟೇ ತಮಿಳುನಾಡಿನಲ್ಲಿ ಹಿಂಗಾರು ಮಳೆ ಅಬ್ಬರಿಸಿದ್ದು, ಸುಮಾರು 500 ಮಂದಿ ಸಾವನ್ನಪ್ಪಿದ್ದರು. ಕುಂಭದ್ರೋಣ ಮಳೆಯಿಂದಾಗಿ ಇಡೀ ನಗರ ನೀರಿನಲ್ಲಿ ಮುಚ್ಚಿಹೋಗಿತ್ತಲ್ಲದೇ ನಗರವನ್ನು ಮತ್ತೆ ಸಹಜ ಸ್ಥಿತಿಗೆ ತರಲು ತಿಂಗಳುಗಳೇ ಬೇಕಾಗಿದ್ದವು.