ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ರವಿವಾರ ಗುಡುಗು, ಗಾಳಿ, ಮಿಂಚು ಸಹಿತ ಆಲಿಕಲ್ಲು ಮಳೆಯಾಗಿದೆ. ಮಧ್ಯಾಹ್ನ 2:45ರ ವೇಳೆ ಗುಡುಗು ಮಳೆ ಪ್ರಾರಂಭವಾಗಿ ಸುಮಾರು 3:15ರ ತನಕ ಸುರಿಯಿತು. ಕಾರ್ಕಳ ನಗರ, ಕುಕ್ಕುಂದೂರು, ಸಾಣೂರು, ಬಜಗೋಳಿ, ದುರ್ಗ, ಜೋಡುರಸ್ತೆ, ಜೋಡುಕಟ್ಟೆ, ಇರ್ವತ್ತೂರು ಭಾಗದಲ್ಲಿ ಅಧಿಕ ಮಳೆಯಾಗಿದೆ.
ವಿದ್ಯುತ್ ಕಂಬಕ್ಕೆ ಹಾನಿ
ಬೈಲೂರು ಭಾಗದಲ್ಲಿ ಬೀಸಿದ ಭಾರಿ ಗಾಳಿಗೆ ಸುಮಾರು 15 ವಿದ್ಯುತ್ ಕಂಬ ಹಾನಿಗೀಡಾಗಿದೆ. ಇದೇ ಪರಿಸರದ ಸುಮಾರು 10 ಮನೆಗಳಿಗೆ ಮರದ ಕೊಂಬೆ ಬಿದ್ದಿದೆ. ನಿಟ್ಟೆ, ಎರ್ಲಪ್ಪಾಡಿ, ಕೆರ್ವಾಶೆ, ಹೊಸ್ಮಾರು, ಬಜಗೋಳಿ ಭಾಗದಲ್ಲೂ ವಿದ್ಯುತ್ ತಂತಿಗೆ ಮರದ ಕೊಂಬೆ ಬಿದ್ದಿರುವ ಘಟನೆ ನಡೆದಿದೆ.
ಎರ್ಲಪ್ಪಾಡಿ ಗ್ರಾಮದ ರಾಧಾ, ಹಿರ್ಗಾನ ಗ್ರಾಮದ ಜಯಂತಿ, ಕುಕ್ಕುಂದೂರು ಗ್ರಾಮದ ಜಯಂತಿ, ಕಲ್ಯಾ ಗ್ರಾಮದ ಸುಮಿತಾ ಸಫಲಿಗ, ನೀರೆ ಗ್ರಾಮದ ಶಶಿಧರ ಪೂಜಾರಿ, ಹೆರ್ಮುಂಡೆ ಗ್ರಾಮದ ಸುನಂದ ಪೂಜಾರಿ ಎಂಬವರ ಮನೆಯ ಶೀಟ್ ಹಾನಿಗೀಡಾಗಿದೆ.
ಪುರಸಭಾ ವ್ಯಾಪ್ತಿಯ ತೆಳ್ಳಾರು 17ನೇ ಅಡ್ಡರಸ್ತೆ ಸಂಜೀವ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಪರಿಕರಗಳು ಹಾನಿಗೀಡಾಗಿದೆ.