Advertisement
ಹಿರಿಯಡದ ಪ್ರಮುಖ ಬೀದಿಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಹಿರಿಯಡ್ಕ ಠಾಣಾ ಅಂಜಾರು ಗ್ರಾಮದ ಕರಂಬಾಕ್ಯಾರು ಕೃಷ್ಣಪ್ಪ ಪೂಜಾರಿಯವರ ಮನೆ ಮೇಲೆ ಸಿಮೆಂಟ್ ಶೀಟ್ ಹಾರಿ ಹೋಗಿದ್ದು, ಅಡಿಕೆ ಮರಗಳು ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅಲ್ಲದೆ ಅಂಜಾರು ಗ್ರಾಮದ ಸುಜಾತಾ ನಾಯಕ್ ಅವರ ಮನೆ, ಕೊಟ್ಟಿಗೆಯ ಹಂಚು , ಸಿಮೆಂಟ್ ಶೀಟ್ ಗಾಳಿಗೆ ಹಾರಿ ಸಂಪೂರ್ಣ ಹಾನಿಗೊಂಡಿದೆ. ಈ ಪ್ರದೇಶಕ್ಕೆ ಬೊಮ್ಮರಬೆಟ್ಟು ಗ್ರಾಮ ಕರಣಿಕರು, ಹಿರಿಯಡ್ಕ ಠಾಣಾಧಿಕಾರಿ ಸತೀಶ್ ಬಲ್ಲಾಳ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement
ವರುಣನ ಆರ್ಭಟ: ವಿವಿಧೆಡೆ ಅಪಾರ ಹಾನಿ
12:43 AM Aug 07, 2019 | sudhir |
Advertisement
Udayavani is now on Telegram. Click here to join our channel and stay updated with the latest news.