Advertisement

ಆಸ್ಪತ್ರೆ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಿ : ಪ್ರಧಾನಿ ನರೇಂದ್ರ ಮೋದಿ

11:06 AM May 06, 2022 | Team Udayavani |

ಹೊಸದಿಲ್ಲಿ: ಬಿಸಿ ಹವೆ ಮತ್ತು ಮಳೆಯಿಂದ ಜೀವ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಮುಂಜಾಗರೂಕತೆಯ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

Advertisement

ಗುರುವಾರ ಹೊಸದಿಲ್ಲಿಯಲ್ಲಿ ಬಿಸಿಗಾಳಿ ಮತ್ತು ಮಳೆಗಾಲದಲ್ಲಿ ಉಂಟಾಗಬಹುದಾದ ಸವಾಲುಗಳನ್ನು ಎದುರಿಸಲು ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮ ಗಳ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಮಾರ್ಚ್‌ನಿಂದ ಇದುವರೆಗೆ ದಾಖಲಾಗಿರುವ ತಾಪಮಾನದ ವಿವರಗಳನ್ನು ಪ್ರಧಾನಿಯವರಿಗೆ ಹವಾಮಾನ ಇಲಾಖೆ ಅಧಿಕಾರಿಗಳು ವಿವರಿಸಿದರು.

ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಆಸ್ಪತ್ರೆಗಳಲ್ಲಿ ಇರುವ ಅಗ್ನಿಶಾಮಕ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಹಾಗೂ ಅವುಗಳು ಸುವ್ಯವಸ್ಥೆಯಲ್ಲಿ ಇರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ಉಂಟಾಗುವ ಬೆಂಕಿಯನ್ನೂ ತಡೆಯಬೇಕು. ಜತೆಗೆ ನೀರಿ ನಿಂದ ಹರಡುವ ರೋಗಗಳನ್ನು ತಡೆಯಲೂ ಕ್ರಮ ಕೈಗೊಳ್ಳ ಬೇಕು ಎಂದು ಸೂಚಿಸಿದ್ದಾರೆ ಪ್ರಧಾನಿ.

1,100 ರೈಲು ರದ್ದು: ದೇಶದ ವಿದ್ಯುತ್‌ ಉತ್ಪಾದನ ಘಟಕಗಳಿಗೆ ಕಲ್ಲಿದ್ದಲು ನಿರಂತರವಾಗಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಮೇ 24ರ ವರೆಗೆ ವಿವಿಧ ರೀತಿಯ 1,100 ರೈಲುಗಳನ್ನು ರದ್ದುಗೊಳಿಸಲಾಗಿದೆ. ಅವುಗಳು ಚಲಿಸುವ ಸಮಯ ಮತ್ತು ಮಾರ್ಗದಲ್ಲಿಯೇ ಕಲ್ಲಿ ದ್ದಲು ರೈಲುಗಳು ಸಂಚರಿಸಲಿವೆ. ಇದೇ ವೇಳೆ, ದಿಲ್ಲಿಯಲ್ಲಿ ಗುರುವಾರದ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಇದೇ ವೇಳೆ, ಟೊರೆಂಟ್‌ ಪವರ್‌ ಲಿಮಿಟೆಡ್‌ ಮತ್ತು ಭಾರತೀಯ ಅನಿಲ ನಿಗಮ ನಿಯಮಿತ ವಿದೇಶಗಳಿಂದ ದುಬಾರಿ ವೆಚ್ಚದಲ್ಲಿ ವಿದ್ಯುತ್‌ ಉತ್ಪಾದನೆಗೆ ಅನಿಲ ಖರೀದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next