ಶಿರಸಿ: ತೋಟಗಾರಿಕಾ ಜಿಲ್ಲೆಯವೈವಿಧ್ಯಮಯ ಬೆಳೆಗಾರರಿಗೆ ಸಲಹೆಹಾಗೂ ಮಾರ್ಗದರ್ಶನ ನೀಡುವಹಾರ್ಟಿಕ್ಲಿನಿಕ್ ಕೇಂದ್ರ ಮತ್ತೆ ಬಾಗಿಲುಹಾಕಿದೆ. ಇಡೀ ರಾಜ್ಯದಲ್ಲೇ ಉತ್ತಮವಾಗಿಕಾರ್ಯನಿರ್ವಹಿಸುವ ಕ್ಲಿನಿಕ್‌ಗಳಲ್ಲಿಒಂದಾಗಿದ್ದ ಶಿರಸಿ ಜಿಲ್ಲಾ ತೋಟಗಾರಿಕಾಕಚೇರಿ ಆವಾರದಲ್ಲಿ ಇರುವ ಹಾರ್ಟಿಕ್ಲಿನಿಕ್ ಅಕ್ಷರಶಃ ಮರಳಿ ಅತಂತ್ರವಾಗಿದೆ.ತೋಟಗಾರಿಕಾ ಇಲಾಖೆ ಮತ್ತು ರೈತರನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ಕೇಂದ್ರ ಅನುದಾನ ಕೊರತೆಯಿಂದ ಬಾಗಿಲುಮುಚ್ಚಿಕೊಂಡಿದೆ.
ಕಳೆದ ವರ್ಷದ ಮಾರ್ಚ್ ವೇಳೆಯಲ್ಲೂಮುಂದುವರಿಕೆ ಆಗದೇ ಸಮಸ್ಯೆ ಆಗಿತ್ತು.ಈ ಬಾರಿ ಕೂಡ ಅತಿ ಮಳೆ, ಕೋವಿಡ್‌ಏಟುಗಳ ನಡುವೆ ಬೆಳೆ ಉಳಿವಿನ ಬಗ್ಗೆ ಏನುಮಾಡಬೇಕು ಎಂಬ ಸಲಹೆ ನೀಡಬೇಕಿದ್ದಹಾರ್ಟಿ ಕ್ಲಿನಿಕ್‌ನ್ನು ಏಕಾಏಕಿ ಸರಕಾರಮುಂದುವರಿಕೆ ಆದೇಶ ನೀಡದೆ ಸುಮ್ಮನೆಕುಳಿತಿದೆ.ತೋಟಗಾರಿಕಾ ಬೆಳೆಗಾರರಿಗೆನಿರಂತರವಾಗಿ ಬೆಳೆಯ ರಕ್ಷಣೆ, ಪೋಷಣೆಗೆಸಲಹೆ ನೀಡುವ ತೋಟಗಾರಿಕಾ ಹಾರ್ಟಿಕ್ಲಿನಿಕ್ ಈಗ ಕಳೆದ ಎರಡು ತಿಂಗಳಿಂದ ಏನುಮಾಡಬೇಕು ಎಂದು ತಿಳಿಯದಂತಾಗಿದೆ.
ವಿಷಯ ತಜ್ಞ ವಿ.ಎಂ. ಹೆಗಡೆ ಶಿಂಗನಮನೆಆದರೂ ಕೇಳಿದ ರೈತರಿಗೆ ರೈತಾಪಿಮಾರ್ಗದರ್ಶನ ಮುಂದುವರಿಸಿದ್ದಾರೆ.ತೋಟಗಾರಿಕಾ ಜಿಲ್ಲೆಯಾಗಿರುವ ಉತ್ತರಕನ್ನಡದ ಬೆಳೆಗಾರರು ಎದುರಾಗುವಸಮಸ್ಯೆ ಸವಾಲುಗಳ ಬಗ್ಗೆ ಸಲಹೆ,ಮಾರ್ಗದರ್ಶನ ಪಡೆದು ತೋಟಗಾರಿಕೆಮಾಡುತ್ತಾರೆ.
ಆದರೆ ಈ ಕೇಂದ್ರಪ್ರತಿವರ್ಷವೂ ಅನುದಾನ ಕೊರತೆಯಿಂದಬಾಗಿಲು ಎಳೆದುಕೊಳ್ಳುವಂತಾಗುತ್ತಿದೆ.ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಬೆಳೆಗಾರರಿಗೆ ಸಲಹೆ ದೊರಕಿಸಲು2010-11ನೇ ಸಾಲಿನಲ್ಲಿ ರಾಜ್ಯದ ಎಲ್ಲಜಿಲ್ಲೆಗಳ ತೋಟಗಾರಿಕಾ ಇಲಾಖೆ ಪ್ರಧಾನಕಚೇರಿ ಆವಾರದಲ್ಲಿ ಹಾರ್ಟಿಕ್ಲಿನಿಕ್‌ವಿಭಾಗ ತೆರೆಯಲಾಗಿತ್ತು. ಇದರಲ್ಲಿಕೃಷಿ ಪದವಿ ಓದಿದ ವಿಷಯ ತಜ್ಞರನ್ನುನಿಯೋಜಿಸಿಕೊಳ್ಳಲಾಗುತ್ತಿತ್ತು. ಈ ಮೂಲಕಬೆಳೆಗಾರರಿಗೆ ಆಯಾ ಕಾಲಕ್ಕೆ ಬೇಕಾದಮಾರ್ಗದರ್ಶನ ಪಡೆಯಲು ಅವಕಾಶಕಲ್ಪಿಸಲಾಗಿತ್ತು. ಅಡಕೆ, ಕಾಳುಮೆಣಸು,ತೆಂಗು, ಮಾವು, ಬಾಳೆ, ಕೊಕ್ಕೊ ಮುಂತಾದಬೆಳೆಗಳಿಗೆ ರೋಗ ಬಂದಾಗ ಯಾವ ಔಷಧಸಿಂಪಡಿಸಬೇಕು,
ಯಾವ ಕಾಲಕ್ಕೆ ಯಾವಗೊಬ್ಬರ ಹಾಕಬೇಕು ಸೂಕ್ತ ಮಾರ್ಗದರ್ಶನನೀಡಲಾಗುತ್ತಿತ್ತು.ಇಡೀ ಜಿಲ್ಲೆಯ ಮಟ್ಟಿಗೆ ಈ ಕೇಂದ್ರಸಕ್ರೀಯವಾಗಿತ್ತು. ಅಡಕೆ, ಕಾಳುಮೆಣಸು,ಅನಾನಸ್, ಶುಂಠಿ ಬೆಳೆಗಾರರಪಾಲಿಗೆ ಆಪದಾºಂಧವನಂತಾಗಿತ್ತು.ಸಮಸ್ಯೆಗೆ ಪರಿಹಾರದ ದಾರಿಯನ್ನುಇಲಾಖೆ ಅಧಿಕಾರಿಗಳ ಜೊತೆ ಸೇರಿಹುಡುಕಲಾಗುತ್ತಿತ್ತು. ಇದೀಗ ಹಾರ್ಟಿಕ್ಲಿನಿಕ್‌ಗೆà ಗುಲ್ಕೋಸ್ ನೀಡಬೇಕಾಗಿದೆ!
ರಾಘವೇಂದ್ರ ಬೆಟ್ಟಕೊಪ್ಪ