ನಮ್ಮ ದೇಶ ಎಷ್ಟೇ ಮುಂದುವರೆದರೂ ದೇಶದೊಳಗಿರುವ ಅದೆಷ್ಟೋ ಹಳ್ಳಿಗಳು ಮಾತ್ರ ಇನ್ನೂ ಶತಮಾನಗಳಷ್ಟು ಹಿಂದಿದೆ ಎಂಬಂತೆ ಭಾವಿಸುತ್ತದೆ, ಯಾಕೆಂದರೆ ಇಲ್ಲಿನ ವ್ಯವಸ್ಥೆ ನೋಡಿದರೆ ಹಾಗೆ ಅನಿಸದೆ ಇರದು, ಇಲ್ಲಿನ ಜನರು ತಮ್ಮ ಅಗತ್ಯ ಸೇವೆಗಳಿಗೆ ಮನೆಯಿಂದ ಹೊರಗೆ ಹೋಗ ಬೇಕಾದರೆ ತಮ್ಮ ಜೀವ ಕೈಯಲ್ಲಿ ಹಿಡಿದು ಹೋಗಬೇಕಾಗಿದೆ ಅದಕ್ಕೆ ಸ್ಪಷ್ಟ ನಿದರ್ಶನವೇ ಇಲ್ಲಿ ವೈರಲ್ ಆಗಿರುವ ವಿಡಿಯೋ…
ಇದು ಆಂಧ್ರದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಅಡ್ಡತೀಗಾಲ ಮಂಡಲದ ಪಿಂಜಾರ ಕೊಂಡ ತಾಂಡಾದ ಕಥೆ, ಈ ತಾಂಡಾದ ಜನರಿಗೆ ಯಾವುದೇ ಅರೋಗ್ಯ ಸಮಸ್ಯೆ ಅಥವಾ ಯಾವುದೇ ಅಗತ್ಯ ಕೆಲಸಕ್ಕೆ ಬರಬೇಕಾದರೆ ತುಂಬಿ ಹರಿಯುವ ಹೊಳೆಯನ್ನು ದಾಟಿ ಬರಬೇಕು ಯಾಕೆಂದರೆ ದೇಶ ಇಷ್ಟು ಮುಂದುವರೆದರೂ ಇಂಥಹಾ ಹಳ್ಳಿಗಳು ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿವೆ ಈ ಹಳ್ಳಿಗಳಿಗೆ ಸರಿಯಾದ ರಸ್ತೆ ವ್ಯವಸ್ಥೆಯಾಗಲಿ, ನದಿಗಳಿಗೆ ಸೇತುವೆಯಾಗಲಿ ಇಲ್ಲ, ಮಳೆಗಾಲದಲ್ಲಿ ಏನೇ ತೊಂದರೆ ಬಂದರೂ ಉಕ್ಕಿ ಹರಿಯುವ ಹೊಳೆಯನ್ನೇ ದಾಟಿ ಹೋಗಬೇಕು ಅದಕ್ಕೆ ಪುಷ್ಟಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿರುವುದು.
ಪಿಂಜಾರಕೊಂಡ ಗ್ರಾಮದ ಬುಡಕಟ್ಟು ಮಹಿಳೆ ವೆಲುಗುಳ ಜ್ಯೋತಿಕಾ ರೆಡ್ಡಿ ಮೂರು ದಿನಗಳ ಹಿಂದೆಯಷ್ಟೇ ಕಾಕಿನಾಡ ಜಿಲ್ಲೆಯ ಯಲೇಶ್ವರಂ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ, ಮಗು ಮತ್ತು ತಾಯಿ ಆರೋಗ್ಯವಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಆದರೆ ಇಲ್ಲಿ ಕಳೆದ ಮೂರೂ ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಕಾರಣ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ ಅದರಂತೆ ಕುಟುಂಬ ಸದಸ್ಯರು ಮಹಿಳೆಯನ್ನು ಉಕ್ಕಿ ಹರಿಯುವ ಹೊಳೆಯಲ್ಲೇ ಹೊತ್ತು ಮನೆಗೆ ಸಾಗಿದ್ದಾರೆ, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರ ಎದೆ ಒಮ್ಮೆ ಝಲ್ ಎನಿಸದೆ ಇರದು. ಇಲ್ಲಿ ಬಾಣಂತಿ ಮಹಿಳೆಯನ್ನು ಓರ್ವ ವ್ಯಕ್ತಿ ತನ್ನ ಹೆಗಲ ಮೇಲೆ ಹೊತ್ತು ಹೊಳೆ ದಾಟಿದರೆ, ಇನ್ನೋರ್ವ ಮಗುವನ್ನು ಹೊತ್ತು ಹೊಳೆ ದಾಟುತ್ತಿರುವುದು ಕಾಣಬಹುದು.
ಇದನ್ನೂ ಓದಿ: Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ