ನ್ಯೂಯಾರ್ಕ್: ಇಂದು ಫೋಟೋಶೂಟ್ ಎಂಬುದು ಬಹಳ ಟ್ರೆಂಡ್ ಸೃಷ್ಟಿಸಿದೆ. ಪ್ರೀ ವೆಡ್ಡಿಂಗ್, ಪೋಸ್ಟ್ ವೆಟ್ಟಿಂಗ್, ಮೆಹಂದಿ, ಮೆಟರ್ನಿಟಿ ಸೇರಿಂದತೆ ಹಲವು ಫೋಟೋಶೂಟ್ ಗಳು ಜನಪ್ರಿಯತೆ ಪಡೆದಿದೆ. ಇಲ್ಲೊಂದು ವಧು-ವರರು 1,900 ಅಡಿ ಎತ್ತರದಲ್ಲಿ ಪೋಟೋಶೂಟ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅಚ್ಚರಿ ಏನಂತೀರಾ ? ಮುಂದೆ ಓದಿ
ಸಾಹಸಮಯ ಮನೋಭಾವ ಹೊಂದಿರುವ ರಯಾನ್ ಮೈರ್ಸ್ (30) ಮತ್ತು ಸ್ಕೈ (28) ನವಜೋಡಿಗಳು 1,900 ಅಡಿ ಎತ್ತರದಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಇವರು ಅಮೆರಿಕದ ಅರ್ಕಾನ್ಸಾಸ್ ಮೂಲದವರು. ಅದ್ಧೂರಿಯಾಗಿ ಮದುವೆ ಆಗಬೇಕೆಂದು ಕನಸು ಕಟ್ಟಿಕೊಂಡಿದ್ದ ಅವರಿಗೆ ಕೋವಿಡ್ ತಣ್ಣೀರೆರಚಿತು.
ಅದಾಗ್ಯೂ ಸರಳವಾಗಿ ಮದುವೆಯಾದ ನವಜೋಡಿ ಅರ್ಕಾನ್ಸಾಸ್ನಲ್ಲಿರುವ ಪ್ರಖ್ಯಾತ ಟ್ರೆಕ್ಕಿಂಗ್ ಪ್ರದೇಶವಾದ ಹಾಕ್ಸ್ಬಿಲ್ ಕ್ರ್ಯಾಗ್ ನಲ್ಲಿ ಫೋಟೋಶೂಟ್ ಮಾಡಿಕೊಳ್ಳಲು ನಿರ್ಧರಿಸಿದರು. ಇದು ತುಂಬಾ ಅಪಾಯಕಾರಿ ಜಾಗವಾಗಿದ್ದು. ಆಳವಾದ ಪ್ರಪಾತವನ್ನು ಹೊಂದಿದೆ.
ಪರ್ವತದ ತುತ್ತ ತುದಿಯಲ್ಲಿ ಪೋಟೋಶೂಟ್ ಮಾಡುವ ವೇಳೆ ವಧುವು -ವರನ ಕೈಯಿಂದ ಪ್ರಪಾತಕ್ಕೆ ಜಾರಿದ್ದಾಳೆ. ಆದರೇ ಇದು ಫೋಟೋಗ್ರಾಫರ್ ಮಾಸನ್ ಗಾರ್ಡನರ್ ಎಂಬುವರ ತಂತ್ರವಾಗಿದ್ದು ರೋಪ್ ಬಳಸಿ ಪೋಟೋ ಶೂಟ್ ಮಾಡಲಾಗಿತ್ತು. ಇದೀಗ ಈ ರೋಮಾಂಚನಕಾರಿ ಫೋಟೋ ಭಾರಿ ವೈರಲ್ ಆಗಿದೆ. ಫೋಟೋ ನೋಡಿದವರು ವಧು ಪ್ರಪಾತಕ್ಕೆ ಬಿದ್ದೇ ಹೋದಳೇನು ಎಂದು ಭಾವಿಸುವಂತಿದೆ.
ಆದರೆ ವಧುವಿನ ರಕ್ಷಣೆಗೆ ರೋಪ್ ಬಳಸಿರುವುದು ಮತ್ತೊಂದು ಫೋಟೋದಲ್ಲಿ ಕಾಣಸಿಗುತ್ತದೆ. ದುರ್ಬಲ ಹೃದಯದವರು ಈ ರೀತಿಯ ದುಸ್ಸಾಹಸಕ್ಕೆ ಕೈಹಾಕಬಾರದು ಎಂಬುದು ನವಜೋಡಿಯ ಮನವಿಯೂ ಮಾಡಿದ್ದಾರೆ. ಇದೀಗ ಈ ಫೋಟೋಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆದರೇ ಈ ರೀತಿಯ ಪೋಟೋಶೂಟ್ ಅನ್ನು ಪರಿಣಿತರ ಮಾರ್ಗದರ್ಶನದಲ್ಲಿ ಮಾತ್ರ ಮಾಡಬೇಕೆಂದು ಫೋಟೋಗ್ರಾಫರ್ ಮಾಸನ್ ಗಾರ್ಡನರ್ ತಿಳಿಸಿದ್ದಾರೆ.