Advertisement

ಹೃದಯ ಶ್ರೀಮಂತಿಕೆಯ ಸ್ವಾಮೀಜಿಗಳು ಬೇಕು

03:20 PM Apr 19, 2017 | Team Udayavani |

ವಾಡಿ: ಜಾತಿ ಬೇಧ ತೋರದೆ, ಬಡವ ಶ್ರೀಮಂತರೆನ್ನದೆ ಎಲ್ಲ ವರ್ಗದ ಜನರನ್ನು ಅಪ್ಪಿಕೊಳ್ಳುವ ಹೃದಯ ಶ್ರೀಮಂತಿಕೆಯುಳ್ಳ ಸ್ವಾಮೀಜಿಗಳು ಸಮಾಜಕ್ಕೆ ಬೇಕಿದೆ ಎಂದು ವೆೃದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. 

Advertisement

ರಾಜ್ಯದಲ್ಲಿಯೇ ಮೊದಲ ಪೀಠ ಎನ್ನಿಸಿಕೊಂಡಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕು ಕೊಂಚೂರು ಶ್ರೀ ಸವಿತಾ ಮಹರ್ಷಿ ಪೀಠದ ಧರ್ಮಾಧಿಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಅವರ ಪೀಠಾರೋಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಸವಿತಾ ಸಮಾಜಕ್ಕೆ ಒಬ್ಬ ಕುಲಗುರುವಿನ ಹಂಬಲವಿತ್ತು. ಧ್ವನಿಯಿಲ್ಲದ ಸವಿತಾ ಸಮಾಜವನ್ನು ಧಾರ್ಮಿಕ ಚಿಂತನೆಯಡಿ ಸಂಘಟಿಸಬಲ್ಲ ಶಕ್ತಿ ಅಗತ್ಯವಿತ್ತು. ಅದೀಗ ಈಡೇರಿದಂತಾಗಿದೆ. ನಿಸ್ವಾರ್ಥತೆಯಿಂದ ಜನಹಿತ ಕಾಪಾಡಬೇಕು ಎಂದು ಹೇಳಿದರು. ಸವಿತಾ ಸಮಾಜಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ.

ಅಗತ್ಯಬಿದ್ದರೆ ಇನ್ನಷ್ಟು ಅನುದಾನ ನೀಡಲು ತಾವು ಸಿದ್ಧ. ಹಿಂದುಳಿದ ವರ್ಗದ ಸವಿತಾ ಪೀಠ ಅತ್ಯಂತ ಎತ್ತರಕ್ಕೆ ಬೆಳೆಯಲಿ ಎಂದು ಹಾರೆೃಸಿದರು. ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ದೇಶದ ಮೇಲೆ ದಾಳಿ ನಡೆಸಿದ ಬ್ರಿಟಿಷರು ಮತ್ತು ಮೊಗಲರು ನಮ್ಮಲ್ಲಿದ್ದ ಸಂಪತ್ತು ಕೊಳ್ಳೆ ಹೊಡೆದರು.

ಆದರೆ ಶರಣರು ಸಂತರು ಇಲ್ಲಿ ಬಿತ್ತಿದ್ದ ಆಧ್ಯಾತ್ಮಿಕ ಸಂಪತ್ತನ್ನು ಕೊಳ್ಳೆ ಹೊಡೆಯಲು ಅವರಿಂದ ಸಾಧ್ಯವಾಗಲಿಲ್ಲ. ಧಾರ್ಮಿಕ ಚಿಂತನೆಗಳ ಬೇರುಗಳು ಗಟ್ಟಿಯಾಗಿವೆ. ಶ್ರೀಧರಾನಂದ ಸ್ವಾಮೀಜಿಯಿಂದ ಹಿಂದು ಧರ್ಮ ಸಂಸ್ಕೃತಿಯ ರಕ್ಷಣೆಯಾಗಲಿದೆ ಎಂದು ನುಡಿದರು. 

Advertisement

ವಿಧಾನ ಪರಿಷತ್‌ ಸದಸ್ಯ ಕೆ.ಬಿ. ಶಾಣಪ್ಪ ಮಾತನಾಡಿ, ಶರಣ ಸಾಹಿತ್ಯ ಮತ್ತು ಶೆೃವ ಸಾಹಿತ್ಯ ಪ್ರಚಾರಕ್ಕೆ ಹೆೃದರಾಬಾದ ಕರ್ನಾಟಕ ಭಾಗದ ಜನರ ಕೊಡುಗೆ ಹೆಚ್ಚಿದೆ. ಸವಿತಾ ಮಹರ್ಷಿ ಪೀಠ ಎಂಬುದು ಒಂದು ವರ್ಗಕ್ಕೆ ಸೀಮಿತವಾಗದೆ ಎಲ್ಲ ವರ್ಗದವರನ್ನೊಳಗೊಂಡ ಅನುಭಾವ ಮಂಟಪವಾಗಿ ರೂಪುಗೊಳ್ಳಬೇಕು ಎಂದು ಹೇಳಿದರು. 

ಆಶೀರ್ವಚನ ನೀಡಿದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಕಷ್ಟಗಳ ಮಧ್ಯೆ ಸಮಾಜ ಕಟ್ಟುವ ಹಂಬಲ ನನ್ನದು. ಭಿûಾಟನೆ ಮಾಡಿಯಾದರೂ ಮಠ ಕಟ್ಟುತ್ತೇನೆ. ಸಮಾಜದ ಪ್ರಗತಿಗಾಗಿ ಶಿಕ್ಷಣ ಸಂಸ್ಥೆ ತೆರೆದು ಜ್ಞಾನ ದಾಸೋಹ ಮಾಡುತ್ತೇನೆ. ನನ್ನ ತಂದೆ ದಿ| ಎಚ್‌.ಆಂಜನೇಯ ಅವರು ನನ್ನನ್ನು ಧರ್ಮ ಸೇವೆಗೆ ಮೀಸಲಿಟ್ಟು ಕಣ್ಣುಮುಚ್ಚಿದ್ದಾರೆ. 

ಸಹಪಾಟಿಗಳು ನನ್ನ ಒಡಹುಟ್ಟಿದವರಂತೆ ಹೆಗಲಿಗೆ ಹೆಗಲು ಕೊಟ್ಟು ಮಠದ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ ಎಂದು ನೆನೆದು ಭಾವುಕರಾದರು. ಸೇರಿದ್ದ ಸಾವಿರಾರು ಜನರ ಕಣ್ಣುಗಳು ಸ್ವಾಮೀಜಿ ಅಂತರಾಳದ ನುಡಿಗಳಿಂದ ಒದ್ದೆಯಾಗಿದ್ದವು. 

ಚಿತ್ರದುರ್ಗ ಬಂಜಾರಾ ಗುರುಪೀಠದ ಶ್ರೀ ಸರ್ದಾರ ಸೇವಾಲಾಲ ಸ್ವಾಮೀಜಿ, ಸಂಗಮನಾಥ ಸ್ವಾಮೀಜಿ ಹುಬ್ಬಳ್ಳಿ, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಜಿಪಂ ಅಧ್ಯಕ್ಷೆ ಸುರ್ವಣ ಮಾಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ರಾಜಕುಮಾರ ಪಾಟೀಲ ತೇಲ್ಕೂರ, ಜಂಗಮ ಸಮಾಜದ ತಾಲೂಕು ಅಧ್ಯಕ್ಷ ನೀಲಯ್ಯಸ್ವಾಮಿ ಮಠಪತಿ, ಸವಿತಾ ಸಮಾಜದ ರಾಜ್ಯಾಧ್ಯಕ್ಷ ಯು. ಕೃಷ್ಣಮೂರ್ತಿ,

ಸವಿತಾ ಪೀಠದ ಕಾರ್ಯದರ್ಶಿ ಶರಣಪ್ಪ ಬಳ್ಳಾರಿ, ರಮೇಶ ಚಿನ್ನಾಕರ, ಸದಸ್ಯ ಪರಶುರಾಮ ನಸಲವಾಯಿ, ವೆಂಕಟೇಶ ವೆಲ್ಕೂರ ಸೇರಿದಂತೆ ಹುಬ್ಬಳ್ಳಿ, ಧಾರವಾಡ, ಹರಿಹರ, ತುಮಕೂರು, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ, ಮೆೃಸೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸವಿತಾ ಸಮಾಜದ ಪದಾಧಿಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next