Advertisement

ಹೃದಯ ಚಿಕಿತ್ಸೆ: ಸಹಕರಿಸುತ್ತಿರುವ “ಗಿಫ್ಟ್‌  ಎ ಲೈಫ್‌’

05:03 PM Jun 07, 2017 | Team Udayavani |

ಮುಂಬಯಿ: ಕ್ರೌಡ್‌ ಫಂಡಿಂಗ್‌ ಮೊಬೈಲ್‌ ಆ್ಯಪ್‌ನ್ನು  ಬಳಸಿಕೊಂಡು ಹುತಾತ್ಮರ ಕುಟುಂಬಗಳಿಗೆ ಹಣ ಸಂಗ್ರಹಿಸುವ ಬಗ್ಗೆ ಇತ್ತೀಚೆಗೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರು ಮಾತನಾಡಿದ ವೀಡಿಯೊ ವೈರಲ್‌ ಆದರೆ, ಇನ್ನೊಂದೆಡೆ ಅದೇ ಕಾಲಕ್ಕೆ ಖ್ಯಾತ ಹೃದಯ ಶಸ್ತ್ರ ಚಿಕಿತ್ಸಕ ಡಾ| ದೇವಿ ಪ್ರಸಾದ್‌ ಶೆಟ್ಟಿ ಅವರು ಹೃದಯ ಸರ್ಜರಿಯ ಅಗತ್ಯವಿರುವ ಪ್ರತಿ ಮಕ್ಕಳಿಗೆ 80,000 ರೂ. ವೆಚ್ಚ ತಗಲುವ ಬಗ್ಗೆ ಮಾತನಾಡಿದ ವೀಡಿಯೊ ಕೂಡ ವೈರಲ್‌ ಆಗಿತ್ತು. ವಿಶೇಷವೆಂದರೆ ಈ ವೀಡಿಯೊಗಳಿಂದ ಸ್ಫೂ³ರ್ತಿ ಪಡೆದ ಐಟಿ ವಾಣಿಜ್ಯೋದ್ಯಮಿ ಹಾಗೂ ದಾನಿ ಕಿರಣ್‌ ಕುಮಾರ್‌ ಅವರು  ಬಡಮಕ್ಕಳ ಹೃದಯ ಚಿಕಿತ್ಸೆಗಾಗಿ ಹಣ ಕೂಡಿಸಲು ಪರಿಕಲ್ಪನೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.

Advertisement

ಅದರ ಫಲವಾಗಿ ಸ್ಥಾಪನೆಗೊಂಡ “ಗಿಫ್ಟ್‌ ಎ ಲೈಫ್‌’ ಎಂಬ ಆ್ಯಪ್‌ಆಗಿದೆ.  ಇದು ಆ್ಯಂಡ್ರಾಯಿಡ್‌ ಮತ್ತು ಆ್ಯಪ್‌ ಸ್ಟೋರ್‌ಗಳಲ್ಲಿ ದೊರೆಯುತ್ತದೆ. ಕಿರಣ್‌  ಕುಮಾರ್‌ ಅವರು  ತಮ್ಮ ಗೆಳೆಯ ಹೊಟೇಲ್‌ ಉದ್ಯಮಿ ಪಿ. ಎಂ. ನಾಣಯ್ಯ ಹಾಗೂ ಅವರ ಪತ್ನಿ ಖ್ಯಾತ ಒಡಿಸ್ಸಿ ನೃತ್ಯಗಾರ್ತಿಯಾಗಿರುವ ಸಿಂಧು ಕಿರಣ… ಅವರೊಂದಿಗೆ ಸೇರಿ  “ಗಿಫ್ಟ್‌ ಎ ಲೈಫ್‌  ಫೌಂಡೇಶನ್‌ ಟ್ರಸ್ಟ್‌’ನ್ನೂ ಆರಂಭಿಸಿದ್ದಾರೆ.  ಈ ಯೋಜನೆಗೆ ಮೊದಲ ಪ್ರಕರಣ ಎಂಬಂತೆ ಬೆಂಗಳೂರಿನ ನಾರಾಯಣ ಹೃದಯಾಲಯದಿಂದ ಬಂದಿದೆ. ಈ ಆ್ಯಪ್‌ ಎರಡೇ ದಿನಗಳಲ್ಲಿ 300ಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿರುವುದು ವಿಶೇಷತೆಯಾಗಿದೆ.

ಈ ಪರಿಕಲ್ಪನೆ ಮುಖ್ಯವಾಗಿ ಸಾವಿರಾರು ರೂ. ಗಳು ದಾನ ನೀಡಲಾಗದ ಮಧ್ಯಮ ವರ್ಗದ ಜನರನ್ನು ತಲುಪುವ ಉದ್ದೇಶವನ್ನು  

ಹೊಂದಿದೆ. ಒಂದು ಮಗುವಿನ ಸರ್ಜರಿಗೆ 1,00,000 ರೂ. ಬೇಕಾದಲ್ಲಿ, 20 ದಾನಿಗಳಿಂದ  ತಲಾ 5,000 ರೂ. ಗಳನ್ನು ಪಡೆದು ಈ ಫೌಂಡೇಶನ್‌ 5,000 ಮಂದಿಯನ್ನು 20 ರೂ. ಗಳನ್ನು ನೀಡುವಂತೆ ಕೋರುತ್ತದೆ.  

ಒಬ್ಬ ವ್ಯಕ್ತಿ ಒಂದು ವಾರಕ್ಕೆ 20 ರೂ. ಗಳನ್ನು ನೀಡಿದಲ್ಲಿ, ಅವರು ಕೇವಲ 1,040 ರೂ. ಗಳನ್ನು ಖರ್ಚುಮಾಡುವ ಮೂಲಕ ಒಂದು ವರ್ಷಕ್ಕೆ 52 ಜೀವಗಳನ್ನು ಉಳಿಸಬಹುದಾಗಿದೆ.

Advertisement

ಪ್ರತಿಯೊಬ್ಬರೂ ಕೇವಲ 20 ರೂ. ಗಳನ್ನು ನೀಡುವುದರಿಂದ ಯಾರಿಗೂ ಇದು ಹೊರೆಯಾಗುವುದಿಲ್ಲ. ಈ ಪರಿಕಲ್ಪನೆ ಈಗಾಗಲೇ ಜನಮನ್ನಣೆ ಪಡೆದಿದ್ದರೂ ಆ್ಯಪ್‌ಗ್ಳನ್ನು  ತಮ್ಮ ಸ್ಮಾರ್ಟ್‌ ಫೋನ್‌ಗಳಲ್ಲಿ ಇಳಿಸಿಕೊಳ್ಳದಿದ್ದಲ್ಲಿ ವ್ಯಕ್ತಿಗತ ದಾನಿಗಳಿಂದ 20 ರೂ. ಗಳನ್ನು  ಸಂಗ್ರಹಿಸುವುದು ಸವಾಲಾಗಲಿದೆ.
ಈ ಯೋಜನೆಯ ವೈಶಿಷ್ಟ್ಯಗಳೆಂದರೆ ಒಂದು ಬಾರಿ ಒಂದು ಮಗುವಿಗೆ ಸಹಾಯ ಮಾಡಬಹುದು, ದಾನಿಗಳು ತಾವು ನೆರವಾಗುತ್ತಿರುವ ಮಗುವಿನ ಸಂಪೂರ್ಣ ವಿವರಗಳನ್ನು ಪಡೆಯಬಹುದು.

 ಪ್ರತಿಯೋರ್ವ ದಾನಿ ಯಾವ ಪ್ರಮಾಣದ ಹಣ ಸಹಾಯವನ್ನೇ ಮಾಡುತ್ತಿರಲಿ, ಟ್ರಸ್ಟ್‌ನ ಸಂಪೂರ್ಣ ಖಾತೆ ವಿವರಗಳನ್ನು   ಪಡೆಯಬಹುದು  ಹಾಗೂ ಇಂತಹ ಯೋಜನೆಗಳ ಆಡಳಿತ, ನಿರ್ವಹಣೆ ಹಾಗೂ ಹಣ ಸಂಗ್ರಹದ ಮೊತ್ತವು ಸಾಮಾನ್ಯವಾಗಿ ಶೇ.  10 ರಿಂದ ಶೇ. 15 ರಷ್ಟು ಇದ್ದರೂ, ಈ ಯೋಜನೆಯಲ್ಲಿ ಮಾತ್ರ ಶೇ. 2 ರಷ್ಟಿರಲಿದೆ. 

ತಮ್ಮ ಮಕ್ಕಳ ಹೃದಯ ಸರ್ಜರಿಗೆಂದು ಹಣ ಸಹಾಯ ಪಡೆಯಲು ಬಯಸುವ ಬಡ ಪೋಷಕರು 09343260001ಗೆ ಕರೆ ಮಾಡುವ ಮೂಲಕ ಟ್ರಸ್ಟನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next