Advertisement

Heart attack; ಬಸ್‌ನಲ್ಲಿ ಹೃದಯಾಘಾತ; ಚಾಲಕ ಸಾವು

11:32 PM Feb 18, 2024 | Team Udayavani |

ಕುಂಬಳೆ: ಬಸ್‌ ಚಲಾಯಿಸುತ್ತಿದ್ದ ಚಾಲಕ ಬಸ್‌ನಲ್ಲಿಯೇ ಹೃದಯಾಘಾತದಿಂದ ಸಾವೀಗೀಡಾದ ಘಟನೆ ಚೇವಾರು ಕುಂಟಂಗರಡ್ಕದಲ್ಲಿ ನಡೆದಿದೆ.

Advertisement

ಕಾಸರಗೋಡು ಧರ್ಮತ್ತಡ್ಕ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ ಚಾಲಕ ಕುಂಟಗರಡ್ಕದ ಅಬ್ದುಲ್‌ ರಹಿಮಾನ್‌ (42) ರವಿವಾರ ಬೆಳಗ್ಗೆ ಚಾಲಕನಾಗಿ ಕಾಸರಗೋಡಿಗೆ ತೆರಳುತ್ತಿರುವಾಗ ಕುಂಟಗರಡ್ಕಕ್ಕೆ ತಲಪಿದಾಗ ಎದೆನೋವು ಕಾಣಿಸಿಕೊಂಡಿತು. ತತ್‌ಕ್ಷಣ ಬಸ್‌ ಅನ್ನು ರಸ್ತೆ ಬದಿ ನಿಲ್ಲಿಸಿದರು. ಆ ಬಳಿಕ ಅವರು ಕುಸಿದು ಬಿದ್ದರು.

ತತ್‌ಕ್ಷಣ ಬಂದ್ಯೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದರು.ಇವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next