Advertisement

ಪೌಷ್ಟಿಕ ಆಹಾರದಿಂದ ಆರೋಗ್ಯಕರ ಸಮಾಜ ಸೃಷ್ಟಿ: ಕೃಷ್ಣಮೂರ್ತಿ

10:15 PM Oct 21, 2019 | Lakshmi GovindaRaju |

ದೇವನಹಳ್ಳಿ: ಪ್ರತಿಯೊಬ್ಬರಿಗೂ ಸಮತೋಲನ ಹಾಗೂ ಪೌಷ್ಟಿಕಾಂಶಯುತ ಆಹಾರ ದೊರೆಯುವಂತೆ ಮಾಡಿದಲ್ಲಿ, ಆರೋಗ್ಯಕರ ಸಮಾಜದ ಸೃಷ್ಟಿ ಸಾಧ್ಯ ಎಂದು ಕರ್ನಾಟ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್‌.ಕೃಷ್ಣಮೂರ್ತಿ ಹೇಳಿದರು. ಚಿಕ್ಕಬಳ್ಳಾಪುರಕ್ಕೆ ತೆರಳುವ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 2013 ರಲ್ಲಿ ಎಲ್ಲಾ ರಾಜ್ಯಗಳಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಿ, ಎಲ್ಲಾ ರಾಜ್ಯಗಳಲ್ಲೂ ಆಹಾರ ಆಯೋಗ ರಚನೆ ಮಾಡಲು ಸೂಚಿಸಿತ್ತು.

Advertisement

ಅದರಂತೆ 2016 ರಲ್ಲಿ ರಾಜ್ಯ ಸರ್ಕಾರವು ರಾಜ್ಯಾ ಆಹಾರ ಆಯೋಗ ರಚನೆ ಮಾಡಿದೆ. ಪ್ರತಿಯೊಬ್ಬರಿಗೂ ಉತ್ತಮ ಮತ್ತು ಗುಣ ಮಟ್ಟದ ಪೌಷ್ಠಿಕಾಂಶಯುಕ್ತ ಆಹಾರ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಯಾರೂ ಸಹ ಹಸಿವಿನಿಂದ ಅನಾರೋಗ್ಯ ಕ್ಕೆ ತುತ್ತಾಗಬಾರದು ಎನ್ನುವುದು ಆಹಾರ ಆಯೋಗದ ಧ್ಯೇಯೋದ್ದಶವಾಗಿದೆ ಎಂದು ತಿಳಿಸಿದರು. ಬೆಂಗಳೂರು ಗ್ರಾಮಾಂತ ಜಿಲ್ಲೆಯಲ್ಲಿ ಆಹಾರ ಪೂರೈಕೆ ಯಾವುದೇ ಲೋಪವಿಲ್ಲದೆ ನಿರ್ವಹಿಸಲಾಗುತ್ತಿದೆ.

ಪಡಿತರ ಚೀಟಿಯಲ್ಲಿ ಉಚಿತವಾಗಿ ಅಕ್ಕಿಯನ್ನು ನೀಡಲಾಗುತ್ತಿದೆ ಅದರ ಜೊತೆ ತೊಗರಿ ಬೇಳೆಯನ್ನು 38 ರೂ ಗೆ ನೀಡಲಾಗುತ್ತಿದೆ. ಕೆಲವು ಕಡೆ 40 ರೂ, 50 ರೂ , 100 ರೂ ಗೆ ಪಡೆಯುತ್ತಿದ್ದಾರೆ ಎಂಬುವ ದೂರುಗಳು ಕೇಳಿ ಬರುತ್ತಿವೆ. ಬೆಂಗಳೂರು ಗ್ರಾಮಾಂತ ಜಿಲ್ಲೆಯಲ್ಲಿ ಇಂತಹ ದೂರುಗಳು ಈ ವರೆಗೆ ಬಂದಿಲ್ಲ. ಈ ಭಾಗಗಳಲ್ಲಿ ಅಕ್ಕಿಯ ಜೊತೆಗೆ 2 ಕೆಜಿ ರಾಗಿ ನೀಡಬೇಕು ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಅಕ್ಕಿಯ ಜೊತೆ 2 ಕೆಜಿ ಜೋಳ ಹಾಗೂ ಕರಾವಳಿ ಪ್ರದೇಶಗಳಲ್ಲಿ ಅಕ್ಕಿಯ ಜೊತೆ 2 ಕೆಜಿ ಗೋಧಿ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ.

ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕನುಗುಣವಾಗಿ ಆಹಾರ ಪದಾರ್ಥಗಳನ್ನು ಬಳಸದೆ ಸುಳ್ಳು ದಾಖಲೆಗಳನ್ನು ತೋರಿಸಿ ಹೆಚ್ಚುವರಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಆಹಾರ ಒದಗಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದ್ದು, ಇದರಿಂದಾಗಿ ಹಾಸ್ಟೆಲ್‌ನಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಪ್ರತಿ ಯೊಬ್ಬರಿಗೂ ಆಹಾರ ದೊರೆಯಬೇಕು ಈಗಾಗಲೇ ಕೆಲವು ಜಿಲ್ಲೆಗಳಿಗೆ ಬೇಟಿ ನೀಡಿ ಆಹಾರ ಪದಾರ್ಥಗಳ ಗುಣಮಟ್ಟ ತೂಕ, ಅಳತೆ ಸೇರಿದಂತೆ ವಿವಿಧ ಹಾಸ್ಟಲ್‌ ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.

ವೈದ್ಯರಿಗೆ ಸರ್ಕಾರದಿಂದ ನೀಡಿರುವ ವಾಹನಕ್ಕೆ ಜಿ.ಪಿ.ಎಸ್‌. ಅಳವಡಿಸುವಂತೆ ಸೂಚಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯ ಆಹಾರ ಆಯೋಗದ ಸದಸ್ಯ ಡಿ.ಜಿ ಹಸಿಬಿ ಮಾತನಾಡಿ, ಜಿಲ್ಲೆಯಲ್ಲಿ ಸರಬರಾಜು ಆಗುತ್ತಿರುವ ತೊಗರಿ ಬೇಳೆಯ ಗುಣಮಟ್ಟವು ಕಳಪೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಗಮನಹರಿಸಬೇಕು.

Advertisement

ಜಾಗೃತಿ ಸಮಿತಿಯ ಮಾಹಿತಿಯನ್ನು ದೂರವಾಣಿಯೊಂದಿಗೆ ನಮೂದಿಸಿ ಪ್ರದರ್ಶಿಸುವುದು ಕಡ್ಡಾಯ ಎಂದರು. ಕಳಪೆ ತೊಗರಿ ಬೇಳೆ ಸರಬರಾಜು ಮಾಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ವೈಜ್ಞಾನಿಕ ಆಹಾರ ಪದಾರ್ಥಗಳ ಸಂಗ್ರಹಣೆಗೆ ಆದ್ಯತೆ ನೀಡುವಂತೆ ಸೂಚಿಸಿದರು. ಈ ವೇಳೆ ಆಹಾರ ಆಯೋಗದ ರಾಜ್ಯ ನಿರ್ದೇಶಕರಾದ ಶಿವ ಶಂಕರ್‌, ಮಂಜುಳಾ ಬಾಯಿ ಸೇರಿದಂತೆ ವಿವಿಧ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next