Advertisement

ಆರೋಗ್ಯಕರ ಜೀವನಶೈಲಿ ಕ್ರಮಗಳು

01:01 PM Dec 27, 2020 | Suhan S |

ಆರೋಗ್ಯ ಅನ್ನುವುದು ವ್ಯಕ್ತಿಗತ ಹೊಣೆಗಾರಿಕೆ. ಮನಸ್ಸು ಮತ್ತು ದೇಹ- ಎರಡರ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆಹಾರಾಭ್ಯಾಸ, ವ್ಯಾಯಾಮ ಮತ್ತು ಧನಾತ್ಮಕ ಚಿಂತನೆಗಳ ದಾರಿಯನ್ನು ಆರಿಸಿಕೊಳ್ಳುವುದು ಸದೃಢವಾಗಿ, ಆರೋಗ್ಯವಾಗಿ ಮತ್ತು ಸೌಖ್ಯವಾಗಿ ಬದುಕುವುದರ ಮೂಲ. ನಿಮ್ಮ ಜೀವನದಲ್ಲಿ ನೀವು ನಡೆಸಬಹುದಾದ ಅತಿದೊಡ್ಡ ಹೂಡಿಕೆ ಎಂದರೆ ಇದೇ.

  • ಎಲೆಕ್ಟ್ರಾನಿಕ್‌-ಡಿಜಿಟಲ್‌ ತೆರೆ ವೀಕ್ಷಣೆ ಸಮಯವನ್ನು (ಟಿವಿ, ಕಂಪ್ಯೂಟರ್‌, ಸ್ಮಾರ್ಟ್‌ ಫೋನ್‌ ಮತ್ತು ವಿಡಿಯೊಗೇಮ್‌) ಮಿತಗೊಳಿಸಿ. ಪುಸ್ತಕ ಓದುವುದು, ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಪರಿಗಣಿಸಿ.
  • ಹೊರಾಂಗಣ ವೀಕ್ಷಣೆಯನ್ನು ಆನಂದಿಸಿ. ಉದ್ಯಾನವನಕ್ಕೆ ತೆರಳಿ ಅಡ್ಡಾಡಿ, ಸೈಕಲ್‌ ಸವಾರಿ ಮಾಡಿ, ಈಜಾಡಿ, ವಾಕಿಂಗ್‌ ಮಾಡಿ ಅಥವಾ ನೆರೆಹೊರೆಯಲ್ಲಿ ಓಡಾಡಿ.
  • ಹಿತ್ತಿಲಲ್ಲಿ ಕೆಲಸ ಮಾಡಿ.
  • ಕಾರು ತೊಳೆಯಿರಿ.
  • ನೆರೆಕರೆಯ ಮನೆಗಳಿಗೆ ತೆರಳಿ ಹರಟೆ ಹೊಡೆಯಿರಿ.
  • ಟಿವಿ ಆರಿಸಿ, ಯಾವುದಾದರೂ ಸಂಗೀತ ಕೇಳುತ್ತಾ ನರ್ತಿಸಿ.
  • ಉದ್ಯೋಗಕ್ಕೆ ಹೋಗುವಾಗ, ಶಾಲೆಗೆ ತೆರಳುವಾಗ ಅಥವಾ ಇತರ ಕೆಲಸಕಾರ್ಯಗಳಿಗೆ ನಡೆದುಹೋಗಿ ಅಥವಾ ಸೈಕಲ್‌ ಸವಾರಿ ಮಾಡಿ.
  • ಮೆಟ್ಟಿಲು ಹತ್ತಿ, ಲಿಫ್ಟ್ ಬಳಕೆ ಕಡಿಮೆ ಮಾಡಿ.
  • ಭೋಜನ ವಿರಾಮವನ್ನು ನಡಿಗೆಯ ಮೂಲಕ ಸದುಪಯೋಗಪಡಿಸಿ.
  • ಕಚೇರಿಯಲ್ಲಿಯೂ ಕುಳಿತೇ ಇರಬೇಡಿ, ಆಗಾಗ ಎದ್ದು ನಡೆದಾಡಿ.
  • ರಜೆಗಳನ್ನು ದೈಹಿಕವಾಗಿ ಸಕ್ರಿಯರಾಗಿದ್ದು ಕಳೆಯಿರಿ.
Advertisement

ಧನಾತ್ಮಕ ನಡವಳಿಕೆಯ ಮೂಲಕ ನಿಮ್ಮ ದೈಹಿಕ ಆರೋಗ್ಯದ ಕಾಳಜಿ ವಹಿಸುವುದು :

ಧನಾತ್ಮಕವಾಗಿ ಬದುಕುವುದು ಮತ್ತು ಸತ್ಪ್ರೇರಣೆಯಿಂದ ಇರುವುದು ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಆರೋಗ್ಯಯುತ ಆಹಾರಾಭ್ಯಾಸವನ್ನು ಆಯ್ದುಕೊಂಡು ಸಕ್ರಿಯರಾಗಿ ಇರಲು ಸಹಾಯ ಮಾಡುತ್ತದೆ. ಧನಾತ್ಮಕ ಜೀವನಕ್ಕೆ ಕೆಲವು ಸಲಹೆಗಳು:

  • ನೀವು ಸಂತೋಷಪಡುವ ಏನನ್ನಾದರೂ ಮಾಡಿ. ಹಲವರಿಗೆ ನಡಿಗೆ ಇಷ್ಟ. ನೀವು ಹೊರಾಂಗಣದಲ್ಲಿ ನಡೆದಾಡಬಹುದು, ಮನೆಯಲ್ಲಿ ಟ್ರೆಡ್‌ಮಿಲ್‌ ನಡಿಗೆ ಮಾಡಬಹುದು; ಒಬ್ಬರೇ ಮಾಡಬಹುದು ಅಥವಾ ಗೆಳೆಯರನ್ನು ಅಥವಾ ಕುಟುಂಬ ಸದಸ್ಯರನ್ನು ಜತೆ ಸೇರಿಸಿಕೊಳ್ಳಬಹುದು.
Advertisement

Udayavani is now on Telegram. Click here to join our channel and stay updated with the latest news.

Next