Advertisement
ಅತ್ಯುತ್ತಮ ಆರೋಗ್ಯ ಅಭ್ಯಾಸಗಳನ್ನು ಅನುಸರಸಿದರೆ ಜನ್ಮಜಾತ ವೈಕಲ್ಯಗಳನ್ನು ತಡೆಗಟ್ಟಬಹುದಾಗಿದೆ:
- ಆರೋಗ್ಯಯುತ ದೇಹತೂಕ ಗುರಿಯನ್ನು ತಲುಪಿ, ಕಾಯ್ದಿರಿಸಿಕೊಳ್ಳಲು ಶ್ರಮಿಸಿ: ಗರ್ಭಧಾರಣೆಗೆ ಮುನ್ನ ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿರುವ ಮಹಿಳೆಯರು ಗರ್ಭಧಾರಣೆಯ ಅವಧಿಯಲ್ಲಿ ತೊಂದರೆಗಳಿಗೆ ತುತ್ತಾಗುವ ಮತ್ತು ಶಿಶು ವೈಕಲ್ಯಗಳೊಂದಿಗೆ ಜನಿಸುವ ಸಾಧ್ಯತೆಗಳು ಹೆಚ್ಚು.
- ಮಧುಮೇಹ/ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ: ಗರ್ಭಧಾರಣೆಗೆ ಮುನ್ನ ಮತ್ತು ಗರ್ಭ ಧರಿಸಿದ ಅವಧಿಯಲ್ಲಿ ಮಧುಮೇಹ/ ಅಧಿಕ ರಕ್ತದೊತ್ತಡದ ಮೇಲೆ ನಿಯಂತ್ರಣ ಹೊಂದಿರದೆ ಇದ್ದಲ್ಲಿ ಜನ್ಮಜಾತ ವೈಕಲ್ಯಗಳು ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆಯಲ್ಲದೆ ಗರ್ಭಿಣಿಯಾಗಿರುವ ಸಮಯದಲ್ಲಿಯೂ ಸಂಕೀರ್ಣ ಆರೋಗ್ಯ ಸಮಸ್ಯೆಗೆ ತುತ್ತಾಗುವ ಅಪಾಯವಿರುತ್ತದೆ.
- ಪ್ರತೀ ದಿನ 400 ಮೈಕ್ರೊಗ್ರಾಂ (ಎಂಸಿಜಿ) ಫೋಲಿಕ್ ಆಮ್ಲವನ್ನು ಪಡೆಯಿರಿ: ಮಹಿಳೆಯ ಆಹಾರ ದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೋಲಿಕ್ ಆಮ್ಲ ಒಳಗೊಂಡಿದ್ದಲ್ಲಿ ಅಥವಾ ಗರ್ಭ ಧರಿಸುವುದಕ್ಕೆ 2 ತಿಂಗಳು ಮುಂಚಿತವಾಗಿ ಮತ್ತು ಗರ್ಭ ಧರಿಸಿದ ಅವಧಿಯಲ್ಲಿ ಫೋಲಿಕ್ ಆಮ್ಲದ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಅದರಿಂದ ಶಿಶುವಿನ ಮೆದುಳು ಮತ್ತು ಬೆನ್ನುಹುರಿಗೆ ಸಂಬಂಧಿಸಿದ ಪ್ರಮುಖ ವೈಕಲ್ಯಗಳು ಉಂಟಾಗುವುದು ತಪ್ಪುತ್ತದೆ.
- ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಸಾಮಾನ್ಯ ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ: ಹಿಮೊಗ್ಲೊಬಿನ್, ಥೈರಾಯ್ಡ ಕಾರ್ಯಚಟುವಟಿಕೆ, ರಕ್ತದಲ್ಲಿ ಸಕ್ಕರೆಯ ಅಂಶ, ತಲಸ್ಸೇಮಿಯಾ/ ಸಿಕಲ್ ಸೆಲ್ ಅನೀಮಿಯಾ ಮತ್ತು ರುಬೆಲ್ಲಾ ವಿರುದ್ಧ ರೋಗನಿರೋಧಕ ಶಕ್ತಿಯಂತಹ ತಪಾಸಣೆಗಳನ್ನು ಮಾಡಿಸಿಕೊಳ್ಳಿ.
- ದೀರ್ಘಕಾಲೀನ ಔಷಧ ತೆಗೆದುಕೊಳ್ಳುತ್ತಿದ್ದಲ್ಲಿ ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಸಮಾಲೋಚಿಸಿ: ಮಹಿಳೆಯೊಬ್ಬರು ಗರ್ಭಿಣಿಯಾದಲ್ಲಿ ಅಥವಾ ಗರ್ಭ ಧರಿಸುವುದಕ್ಕೆ ಯೋಜಿಸುತ್ತಿದ್ದಲ್ಲಿ ಆಕೆ ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಸಮಾಲೋಚಿಸದೆ ಈಗಿರುವ ಔಷಧಗಳನ್ನು ಸ್ಥಗಿತಗೊಳಿಸಬಾರದು ಅಥವಾ ಹೊಸ ಔಷಧ ಆರಂಭಿಸ ಬಾರದು.
Related Articles
Advertisement
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ಮತ್ತು ಫೀಟಲ್ ಮೆಡಿಸಿನ್ ವಿಭಾಗ, ಕೆಎಂಸಿ ಮಂಗಳೂರು)