Advertisement

ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು: ಚರಂತಿಮಠ 

04:42 PM Jun 27, 2018 | Team Udayavani |

ಬಾಗಲಕೋಟೆ: ಬಿವಿವಿ ಸಂಘದ ಹೈಸ್ಕೂಲ್‌ ಆಡಳಿತ ಮಂಡಳಿ, ಎಸ್‌. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹಾನಗಲ್‌ ಕುಮಾರೇಶ್ವರ ಆಸ್ಪತ್ರೆಯ ಆಶ್ರಯದಲ್ಲಿ ಬಿವಿವಿ ಸಂಘದ 111ನೇ ವಾರ್ಷಿಕೋತ್ಸವದ ಪ್ರಯುಕ್ತವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 3000 ವಿದ್ಯಾರ್ಥಿ-ವಿದ್ಯಾರ್ಥಿನಿಯರ ಉಚಿತ-ರಕ್ತ ತಪಾಸಣಾ ಶಿಬಿರ ನಗರದ ದಂತ ವೈದ್ಯಕೀಯ ಕಾಲೇಜಿನ ನಗರ ಆರೋಗ್ಯ ತರಬೇತಿ ಕೇಂದ್ರದಲ್ಲಿ ಮಂಗಳವಾರ ಜರುಗಿತು.

Advertisement

ಬಿವಿವಿ ಸಂಘದ ಕಾರ್ಯಾಧ್ಯಕ್ಷ ಹಾಗೂ ಶಾಸಕ ಡಾ| ವೀರಣ್ಣ ಸಿ. ಚರಂತಿಮಠ ಅವರು ಶಿಬಿರ ಉದ್ಘಾಟಿಸಿ, ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಇಂದಿನ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಈ ದಿಸೆಯಲ್ಲಿ ಮಕ್ಕಳ ರಕ್ತದ ಗುಂಪಿನ ಪರೀಕ್ಷೆ ಇಂದು ಅನಿವಾರ್ಯವಾಗಿದೆ. ಇದು ತುರ್ತು ಸಂದರ್ಭದಲ್ಲಿ ಮಕ್ಕಳಿಗೆ ನೆರವಾಗಲಿದೆ ಎಂದರು.  ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಅಂತಹ ಸದೃಢ, ಆರೋಗ್ಯವಂತ ಮಕ್ಕಳು ದೇಶಕ್ಕೆ ಬೇಕಾಗಿದ್ದಾರೆ ಎಂದು ಹೇಳಿದರು.

ಶಿಬಿರದಲ್ಲಿ ಮೊದಲ ದಿನ 25 ವಿದ್ಯಾರ್ಥಿ-ವಿದ್ಯಾರ್ಥಿನಿಯರ ರಕ್ತದ ಗುಂಪು ಪರೀಕ್ಷಿಸಲಾಯಿತು. ಪ್ರತಿ ದಿನ 50 ರಿಂದ 75 ವಿದ್ಯಾರ್ಥಿಗಳ ರಕ್ತದ ಗುಂಪು ಪರೀಕ್ಷೆ ನಡೆಯಲಿದೆ ಎಂದು ಹೇಳಿದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್‌. ಅಥಣಿ, ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್‌. ಸಜ್ಜನ (ಬೇವೂರ), ಸದಸ್ಯರಾದ ಎನ್‌.ಎಸ್‌. ದೇವನಗಾವಿ, ಆರ್‌.ಎಂ. ಪಾಟೀಲ, ಬಿ.ಎಸ್‌. ಹಿರೇಗೌಡರ, ಎಸ್‌.ವಿ. ಬೆಂಬಳಗಿ, ಎಂ.ಎಸ್‌. ಶೆಟ್ಟರ, ಎಸ್‌.ಬಿ. ಪಲ್ಲೇದ, ಎಸ್‌.ಎ. ನಾವಲಗಿ, ಆಡಳಿತಾಧಿಕಾರಿ ಪ್ರೊ | ಎನ್‌.ಜಿ. ಕರೂರ, ಬಿ.ಎಚ್‌.ಆರ್‌.ಡಿ. ನಿರ್ದೇಶಕ ಎಸ್‌.ಆರ್‌. ಮನಹಳ್ಳಿ, ಶಿಕ್ಷಣ ವಿಸ್ತರಣಾಧಿಕಾರಿ ಬಿ.ಆರ್‌. ಬೋಳಿಶೆಟ್ಟಿ, ಹಾನಗಲ್ಲ ಕುಮಾರೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಅಶೋಕ ಮಲ್ಲಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next