Advertisement

ಆರೋಗ್ಯ ವೃದ್ಧಿಗೆ ಸೇವಿಸಿ ಬಟರ್‌ ಫ್ರೂಟ್‌

10:03 PM Feb 17, 2020 | mahesh |

ಮಾರುಕಟ್ಟೆಯಲ್ಲಿ ಹಣ್ಣು ಖರೀದಿ ಸಲೆಂದು ತೆರಳಿ ಬಾದಾಮಿ ಬೀಜದಂತಿರು ಹಸುರು ಬಣ್ಣದ ಹಣ್ಣಿನ ರಾಶಿಯನ್ನು ಅಚ್ಚುಕಟಾಗಿ ಜೋಡಿಸಿಟ್ಟಿದ್ದು ಜನರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿತ್ತು. ಏನೋ ಕಂಗೊಳಿಸುತ್ತಿದ್ದು ಕಂಡು ಬೆಲೆ ಕೇಳಿದಾಗ ಬಾಯಮೇಲೆ ಬೆರಳಿಡುವಷ್ಟು ದುಬಾರಿ ಬೆಲೆ ಅನಿರೀಕ್ಷಿತವೆನಿಸಿದರೂ ಅದರ ಪೋಷಕಾಂಶ ತಿಳಿದರೆ ಬೆಲೆಕೊಟ್ಟು ಖರೀದಿಸಿದರೆ ಮೋಸವಿಲ್ಲ ಅನಿಸುತ್ತದೆ. ಶ್ರೀಲಂಕಾ ಮೂಲದ ಈ ಹಣ್ಣು ಭಾರತದಲ್ಲಿ ಬೆಣ್ಣೆ ಹಣ್ಣು(ಬಟರ್‌ ಪ್ರೂಟ್‌) ಎಂದೇ ಚಿರ ಪರಿಚಿತವಾಗಿದೆ. ಹಾಗಿದ್ದರೆ ಇದರ ಸೇವನೆಯಿಂದ ಏನೆಲ್ಲ ಪ್ರಯೋಜನ ನೀವು ಪಡೆಯಬಹುದೆಂದು ಈ ಲೇಖನದಲ್ಲಿ ತಿಳಿಸಲಾಗಿದೆ.

Advertisement

ಅನಗತ್ಯ ಕೊಬ್ಬನ್ನು ಕರಗಿಸಲು
ಇದರಲ್ಲಿ ಫಾಲಿಕ್‌ ಆ್ಯಸಿಡ್‌ ದೇಹದಲ್ಲಿ ಅಡಗಿರುವ ಅನಗತ್ಯ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಕಡಿಮೆ ಮಾಡಿ ದೇಹವನ್ನು ಸಮಸ್ಥಿತಿಯಲ್ಲಿಡಲು ಉಪಯುಕ್ತವಾಗಿದೆ. ಇದನ್ನು ವಾರಕ್ಕೆ 3ರಿಂದ 4 ಬಾರಿ ಜ್ಯೂಸ್‌ ಮಾಡಿ ಸೇವಿಸುವುದು ತೂಕ ಇಳಿಸಲು ಒಳ್ಳೆಯದು. ಆದರೇ ಜ್ಯೂಸ್‌ಗೆ ಕಡಿಮೆ ಸಕ್ಕರೆ ಮತ್ತು ಕಲರ್‌ ಆ್ಯಡ್‌ ಮಾಡದೇ ಸೇವಿಸುವುದರಿಂದ ನೈಸರ್ಗಿಕ ಪೋಷಣೆಯನ್ನು ನಿಮ್ಮದಾಗಿಸಲು ಸಾಧ್ಯವಿದೆ.

ಗರ್ಭಿಣಿಯರಿಗೆ ಸೂಕ್ತ
ಈ ಹಣ್ಣಿನಲ್ಲಿ ಪೊಲಾಟ್‌ ಅಂಶಗಳು ಅಧಿಕವಾಗಿದ್ದು ಬಹುತೇಕ ವೈದ್ಯರು ಇದನ್ನು ಸೇವಿಸಲು ಸಲಹೆ ನೀಡುತ್ತಾರೆ. ಇದರಲ್ಲಿ ಶಿಶುವಿನ ಆರೋಗ್ಯವೃದ್ಧಿಗೆ ಅಗತ್ಯವಾದ ಪೋಷಕಾಂಶಗಳು ಹೇರಳವಾಗಿದ್ದು ತಾಯಿ ಮತ್ತು ಮಗುವಿನ ಆರೋಗ್ಯವೃದ್ಧಿಗೆ ಗರ್ಭಾವಸ್ಥೆಯಲ್ಲಿಯೇ ಈ ಹಣ್ಣಿನ ಸೇವನೆ ಮಾಡುವುದು ತುಂಬಾ ಒಳ್ಳೆಯದು.

ಚರ್ಮದ ಪೋಷಣೆ
ಈ ಹಣ್ಣು ನಮ್ಮ ಆಂತರಿಕ ಆರೋಗ್ಯವನ್ನು ವೃದ್ಧಿಗೊಳಿಸುವುದರೊಂದಿಗೆ ಬಾಹ್ಯವಾಗಿ ಸಹ ನಮ್ಮನ್ನು ಪೋಷಿಸಲು ಉಪಯುಕ್ತವಾಗಿದೆ. ಇದರ ಎಣ್ಣೆ ಚರ್ಮವನ್ನು ಮೃದುಗೊಳಿಸುವುದ ರೊಂದಿಗೆ ತ್ವಚೆಯ ಕಾಂತಿ ಹೆಚ್ಚಿ ಸುಂದರ ಕೊಮಲ ತ್ವಚೆಯನ್ನು ನೀವು ಪಡೆಯಬಹುದು. ಇದರ ತೈಲವನ್ನು ಮಸಾಜ್‌ ಮಾಡಿ ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನಮಾಡುವುದು ಸುಕ್ಕು ಚರ್ಮದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ.

ಕಣ್ಣಿನ ಆರೋಗ್ಯ
ಇದರಲ್ಲಿರುವ ಔಷಧಿಯ ಗುಣಗಳು ಕಣ್ಣಿನ ಪೋಷಕಾಂಶಗಳಿಗೆ ಅಗತ್ಯವಾದ ವಿಟಮಿನ್‌, ಕಾರ್ಬೋಹೈಡ್ರೇಟ್‌, ಕ್ಯಾಲ್ಸಿಯಂ ಅಂಶವನ್ನು ನೀಡುತ್ತದೆ. ದೃಷ್ಟಿ ಸಮಸ್ಯೆ, ಕಣ್ಣು ತುರಿಸುವಿಕೆ, ಕನ್ಣು ಮಂಜಾಗುವಿಕೆ ಮುಂತಾದ ಸಮಸ್ಯೆಯನ್ನು ನಿವಾರಿಸಲು ಇದನ್ನು ಸೇವಿಸಬಹುದು

Advertisement

ಮೂಳೆ ಸಮಸ್ಯೆ ನಿವಾರಣೆಗೆ
ಮೂಳೆ ನೋವು, ಊತಗೊಳ್ಳುವುದು ಮುಂತಾದ ಸಮಸ್ಯೆಗಳಿಗೆ ನಿವಾರಣೆಗೆ ಇದರ ಸೇವನೆ ಒಳ್ಳೆಯದು. ಇದರಲ್ಲಿ ವಿಟಮಿನ್‌ ಎ ಮತ್ತು ಸಿ ಮೂಳೆ ಆರೋಗ್ಯಕ್ಕೆ ಸಹಕಾರಿ. ಕ್ಯಾಲ್ಸಿಯಂ, ಕಬ್ಬಿಣಾಂಶದಿಂದ ಹೃದಯ ಸಂಬಂಧಿತ ಸಮಸ್ಯೆಯನ್ನು ನಿವಾರಿಸುತ್ತದೆ.
ಒಟ್ಟಾರೆ ಇಷ್ಟೇಲ್ಲ ಪೋಷಕಾಂಶ ಹೊಂದಿರುವ ಬಟರ್‌ ಫ್ರೂಟ್‌ ಬೆಲೆ ದುಬಾರಿ ಎಂದು ದೂರ ಸರಿಯದೇ ಖರೀದಿಸಿ ಸೇವಿಸುವುದರಿಂದ ಆರೋಗ್ಯವನ್ನು ವೃದ್ದಿಗೊಳಿಸಲು ಸಾಧ್ಯವಿದೆ.

- ರಾಧಿಕಾ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next