Advertisement

ಮನುಷ್ಯನಿಗೆ ಆರೋಗ್ಯ ಸಂಪತ್ತು ಮುಖ್ಯ: ಪಾಟೀಲ

10:13 PM Jan 17, 2022 | Team Udayavani |

ಬಾಗಲಕೋಟೆ: ಪ್ರಧಾನಿ ಮೋದಿ ಅವರು ಈ ಯೋಗವನ್ನು ದೇಶಕ್ಕೆ ಬಹುದೊಡ್ಡ ಕೊಡುಗೆಯಾಗಿ ನೀಡಿದ್ದಾರೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸಹಿತ ಯೋಗವನ್ನು ಅಭ್ಯಸಿಸುವುದನ್ನು ನೋಡಿದ್ದೇವೆ. ಮನುಷ್ಯನಿಗೆ ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ ಎಂದು ಜಿ.ಎನ್‌. ಪಾಟೀಲ ಹೇಳಿದರು.

Advertisement

ವಿದ್ಯಾಗಿರಿಯ ಸಾಯಿ ಮಂದಿರದಲ್ಲಿ ಸಮಾನ ಮನಸ್ಕ ಹಿರಿಯ ನಾಗರಿಕರ ಸಂಘ ಹಾಗೂ ಜಿಲ್ಲಾ ಯೋಗ ಪತಂಜಲಿ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಗರಸಭೆಯ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಮಾತನಾಡಿ, ಮನುಷ್ಯನ ಇಂದಿನ ಒತ್ತಡದ ಬದುಕಿಗೆ, ಸರ್ವ ರೋಗ ನಿವಾರಣೆಗಾಗಿ ಯೋಗ ಬಹಳ ಮುಖ್ಯವಾಗಿದೆ.

ದೇಶದ ತುಂಬೆಲ್ಲಾ ಇಂತಹ ಯೋಗ ಶಿಬಿರಗಳು ಆಯೋಜನೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು. ಹಿರಿಯ ನಾಗರಿಕ ಸಮಿತಿಯ ಮನವಿಯಂತೆ ಸಮುದಾಯ ಭವನ ನೀಡುವುದು ಹಾಗೂ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next