Advertisement
ಈಗಾಗಲೇ ಬೇಸಿಗೆ ಶುರುವಾಗಿದ್ದು, ತಾಪಮಾನ ಹೆಚ್ಚುತ್ತಾ ಹೋಗುತ್ತಿದೆ. ಈ ವೇಳೆಯಲ್ಲಿ ನಾವು ಯಾವೆಲ್ಲ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಬೇಕು, ಆರೋಗ್ಯವಾಗಿರಲು ಏನೆಲ್ಲ ಮಾಡಬೇಕು ಎಂಬುದನ್ನ ಧರ್ಮಶಿಲಾ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾಕ್ಟರ್ ಸುಮನ್ ತಲಾ ಸಲಹೆ ನೀಡಿದ್ದಾರೆ. ಹಾಗಾದ್ರೆ ಬನ್ನಿ ನಾವು ಕಿಡ್ನಿಯನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯವಾಗಿಡಲು ಏನು ಮಾಡಬೇಕು ಎಂಬುದನ್ನ ನೋಡೋಣ .
Related Articles
Advertisement
ಫೈಬರ್ ಅಂಶವುಳ್ಳ ಆಹಾರಗಳ ಸೇವನೆ : ಫೈಬರ್ ಯುಕ್ತ ಆಹಾರ ಕಿಡ್ನಿ ಸಂಬಂಧಿ ಕಾಯಿಲೆ ಇರುವ ವ್ಯಕ್ತಿಗಳಿಗೆ ತುಂಬಾ ಉತ್ತಮ ಎಂದು ವೈದ್ಯರು ಸಲಹೆ ಮಾಡುತ್ತಾರೆ. ಕಿಡ್ನಿ ಸಮಸ್ಯೆ ಎದುರಿಸುತ್ತಿರುವವರು ಬೀನ್ಸ್, ಬಟಾಣಿ, ಹಣ್ಣುಗಳು, ಕಲ್ಲಂಗಡಿಯಂತಹ ಹಣ್ಣುಗಳನ್ನು ಸೇವಿಬೇಕು.
ಹೊರಗಿನ ಆಹಾರಕ್ಕೆ ಕಡಿವಾಣ : ಪುರುಸೊತ್ತಿಲ್ಲದ ಈ ಕಾಲದಲ್ಲಿ ಏನಾದ್ರೂ ಪರವಾಗಿಲ್ಲ ಒಂಚೂರು ಹೊಟ್ಟೆಗೆ ಬಿದ್ರೆ ಸಾಕಪ್ಪ ಅಂತ ಜನ ಹೋಟೆಲ್, ಪಾಸ್ಟ್ ಫುಡ್ ಸೆಂಟರ್ ಗಳಲ್ಲಿ ಆಹಾರ ಸೇವನೆ ಮಾಡುತ್ತಾರೆ. ಇಲ್ಲಿ ಅತಿ ಹೆಚ್ಚು ಸಕ್ಕರೆ, ಉಪ್ಪು ಸೇರಿದಂತೆ ಮಸಾಲೆ ಪದಾರ್ಥಗಳನ್ನು ಹಾಕಿದ್ದು, ಫುಡ್ ಪಾಯಿಸನ್ ಸೇರಿದಂತೆ ಕಿಡ್ನಿಗೂ ಹೊಡೆತ ಬೀಳುತ್ತದೆ.
ಸ್ನಾಯುಗಳಿಗೆ ಅತಿಯಾಗಿ ಒತ್ತಡ ಕೊಡಬೇಡಿ : ಮೂತ್ರಪಿಂಡ ಆನಾರೋಗ್ಯಕ್ಕೆ ಸ್ನಾಯುವಿನ ಬಳಲಿಕೆ ಅಪಾಯಕಾರಿ ಎಂದು ಕೆಲವೇ ಜನರಿಗೆ ತಿಳಿದಿದೆ. ತೀವ್ರವಾದ ಸ್ನಾಯು ನೋವಾದರೆ ರಕ್ತ ಪ್ರವಾಹದಲ್ಲಿ ಪ್ರೋಟೀನ್ ಸೋರಿಕೆಗೆ ಕಾರಣವಾಗುತ್ತದೆ. ಇದು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ಇದನ್ನು ರಾಬ್ಡೋಮಿಯೊಲಿಸಿಸ್ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ ನಿಯಮಿತವಾಗಿ ವ್ಯಾಯಾಮ, ಜಿಮ್ ತಾಲೀಮು ಮಾಡುವ ಮೂಲಕ ದೇಹದ ಒತ್ತಡವನ್ನು ಕಡಿಮೆ ಮಾಡಿ.
ಈ ಮೇಲಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಮೂತ್ರಪಿಂಡ ವೈಫಲ್ಯತೆಯನ್ನು ತಡೆಯಬಹುದು. ಈ ಕೆಳಕಂಡ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ
- ಮೂತ್ರದ ಬಣ್ಣ ಬದಲಾವಣೆ
- ದುರ್ವಾಸೆ ಮೂತ್ರ
- ಮೂತ್ರವನ್ನು ವಿಸರ್ಜಿಸುವಾಗ ಸುಟ್ಟಂತಹ ಅನುಭವ
- ವಾಕರಿಕೆ, ವಾಂತಿಯ ಲಕ್ಷಣಗಳು
- ರಕ್ತ ಹೀನತೆ
- ಚರ್ಮದ ತುರಿಕೆ
- ಬೆನ್ನು ನೋವು ಹಾಗೂ ಹೊಟ್ಟೆ ನೋವು