ಎಲ್ಲಾ ಕಾಲದಲ್ಲೂ, ಎಲ್ಲಾ ಕಡೆಗಳಲ್ಲೂ ಸುಲಭವಾಗಿ ಸಿಗುವ ಹಣ್ಣೆಂದರೆ ಪಪ್ಪಾಯಿ ಅಥವಾ ಪರಂಗಿ ಹಣ್ಣು. ಈ ಹಣ್ಣು ಔಷಧೀಯ ಗುಣಗಳನ್ನು ಹೊಂದಿದೆ.
ಈ ಹಣ್ಣಿನಲ್ಲಿ “ಪಪ್ಪಾಯಿನ್’ ಎಂಬ ಅಂಶವಿದೆ. ಇದು ಭ್ರೂಣದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಗರ್ಭಿಣಿಯರು ಎಚ್ಚರ ವಹಿಸಲೇಬೇಕು.ವೈದ್ಯರು, ಏನೂ ಸಮಸ್ಯೆ ಆಗಲ್ಲ, ಅಂದರೆ ಮಾತ್ರ ತಿನ್ನಬಹುದು. ಪಪ್ಪಾಯಿ ಹಣ್ಣಿನ ಸೇವನೆಯು ಮುಟ್ಟಿನ ಸಮಸ್ಯೆಯನ್ನು ಹತೋಟಿಯಲ್ಲಿ ಡುತ್ತದೆ.
ಆದರೆ ಮುಟ್ಟಿನ ಸಮಯದಲ್ಲಿ ತೆಗೆದುಕೊಳ್ಳದಿರುವುದು ಒಳ್ಳೆಯದು, ಕಾರಣ, ಪಪ್ಪಾಯ ದೇಹದಲ್ಲಿ ಶಾಖವನ್ನು ಉತ್ಪತ್ತಿ ಮಾಡುವುದರಿಂದ ರಕ್ತಸ್ರಾವ ಜಾಸ್ತಿಯಾಗುವ ಸಾಧ್ಯತೆಯಿರುತ್ತದೆ.
ಉಪಯೋಗಗಳು: ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ನಾರಿನಂಶವಿರುವುದರಿಂದ ಮಲಬದ್ಧತೆ ಯನ್ನು ನಿವಾರಿಸುತ್ತದೆ. ವಿಟಮಿನ್ ಸಿ ಅಂಶ ಇರುವುದರಿಂದ ಕರುಳಿನಹುಳಗಳ ನಾಶವೂ ಸಾಧ್ಯ. ವಿಟಮಿನ್ ಎ, ಇಇದೆ. ಹಾಗಾಗಿ ಹೃದಯದ ಆರೋಗ್ಯಕ್ಕೆಒಳ್ಳೆಯದು. ಪಪ್ಪಾಯ ಎಲೆಯ ರಸ ಡೆಂನಿಯಂತ್ರಿಸುತ್ತದೆ.
ಡಾ.ಶ್ರೀಲತಾ ಪದ್ಯಾಣ