Advertisement

ಮನೆಯಲ್ಲೇ ಇದೆ ಆರೋಗ್ಯದ ಗುಟ್ಟು

09:40 PM Sep 30, 2019 | mahesh |

ನಮ್ಮ ದಿನನಿತ್ಯದ ಆಹಾರದಲ್ಲಿ ಮಸಾಲ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತೇವೆ. ಅವು ತನ್ನದೇ ಆದ ಸುವಾಸನೆಯನ್ನು ಹೊಂದಿವೆ. ಇವು ಆಹಾರವನ್ನು ರುಚಿಯಾಗಿಸುವುದು ಮಾತ್ರವಲ್ಲದೆ ಆರೋಗ್ಯವನ್ನು ಸುಧಾರಿಸುವಲ್ಲೂ ಮುಖ್ಯ ಪಾತ್ರವಹಿಸುತ್ತವೆ ಎಂಬುದು ಹಲವು ಸಂಶೋಧನೆಗಳಿಂದ ಈಗಾಗಲೇ ಸಾಬೀತಾಗಿದೆ. ಅಡುಗೆ ಮನೆಯಲ್ಲೇ ದೊರೆಯುವ ಈ ಮಸಾಲೆ ಪದಾರ್ಥಗಳಿಂದ ಆರೋಗ್ಯವನ್ನು ಕಾಪಡಿಕೊಳ್ಳಬಹುದು. ಯಾವ ಮಸಾಲ ಪದಾರ್ಥಗಳಲ್ಲಿ ಯಾವ ಪ್ರಯೋಜನವಿದೆ ಎಂಬ ಮಾಹಿತಿ ಇಲ್ಲಿದೆ.

Advertisement

1 ಸೋಂಪು
ಪ್ರತಿ ದಿನ ಮನೆಯಲ್ಲಿ ಬಳಸುವ ಮಸಾಲ ಪದಾರ್ಥಗಳಲ್ಲಿ ಒಂದು ಸೋಂಪು. ಇದು ಆಹಾರದಲ್ಲಿ ಪರಿಮಳವನ್ನು ಹೆಚ್ಚಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲದೇ ಇದು ಉರಿಯೂತವನ್ನು ಕಡಿಮೆ ಮಾಡಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.

2 ಕರಿಮೆಣಸು
ಮನೆಯಲ್ಲಿ ಹೆಚ್ಚಾಗಿ ಬಳಸುವ ಕರಿಮೆಣಸು ಕೂಡ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಒಂದು ಚಿಟಿಕೆ ಕರಿಮೆಣಸು ನಾವು ಸೇವಿಸುವ ಆಹಾರದಲ್ಲಿ ಇದ್ದಲ್ಲಿ ಶೀತ, ಕೆಮ್ಮಿನಿಂದ ದೂರವಿರಬಹುದು. ಅಷ್ಟೇ ಅಲ್ಲ. ಕರಿಮೆಣಸು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಚರ್ಮದ ಅನೇಕ ಸಮಸ್ಯೆಗಳಿಗೂ ಇದು ರಾಮಬಾಣ

3 ಕಪ್ಪು ಜೀರಿಗೆ
ಕಪ್ಪು ಜಿರಿಗೆಯ ಎಣ್ಣೆ ಆಸ್ತಮಾ, ಅಲರ್ಜಿ ಮತ್ತು ಇನ್ನಿತರ ಉಸಿರಾಟದ ಸಮಸ್ಯೆಗಳನ್ನು ತಡೆಹಿಡಿಯುವಲ್ಲಿ ಮುಖ್ಯ ಪಾತ್ರ ವಹಿಸುವುದಲ್ಲದೆ ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ಇದರ ಬೀಜಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೆಚ್ಚಿದ್ದು, ಅಸ್ವಸ್ಥವಾಗುವುದನ್ನು ತಡೆಯಲು ಉಳಿದ ಮಸಾಲ ಪದಾರ್ಥಗಳಿಗಿಂತ ಉತ್ತಮ. ಜೀರಿಗೆ ಕೂಡ ಜೀರ್ಣಕ್ರಿಯೆಗೆ ಸಹಾಯ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

4 ಲವಂಗ
ಲವಂಗ ಸಾಮಾನ್ಯವಾಗಿ ಎಲ್ಲ ರೋಗಕ್ಕೂ ಮದ್ದಾಗಿದ್ದು, ನಂಜು ನಿರೋಧಕವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಉತ್ಕೃಷ್ಟವಾದ ರೋಗ ನಿರೋಧಕಗಳಿದ್ದು, ಖನಿಜಗಳು, ಕೊಬ್ಬಿನಾಮ್ಲಗಳು, ಫೈಬರ್‌, ಜೀವಸತ್ವಗಳನ್ನು ಹೊಂದಿದೆ. ಲವಂಗ ವಿಶೇಷವಾಗಿ ನೋವು ನಿರೋಧಕವಾಗಿ ಕೆಲಸ ಮಾಡುತ್ತದೆ. ಹಲ್ಲು ನೋವು, ಹೊಟ್ಟೆ ನೋವಿಗೆ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

Advertisement

5 ದಾಲ್ಚಿನ್ನಿ
ಇದು ಎಲ್ಲರ ನೆಚ್ಚಿನ ಮಸಾಲವಾಗಿದ್ದು ದೇಹಕ್ಕೆ ಬರುವ ಕಾಯಿಲೆಗಳನ್ನು ತಡೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಊರಿಯೂತ ನಿವಾರಣೆಗೆ ಇದು ಸಹಕಾರಿ ಮತ್ತು ಹೊಟ್ಟೆ ಉಬ್ಬುವುದನ್ನು ಕೂಡ ಕಡಿಮೆ ಮಾಡುತ್ತದೆ.

- ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next