ನವದೆಹಲಿ: ದೇಶದ 170 ಜಿಲ್ಲೆಗಳು ಕೋವಿಡ್ 19 ವೈರಸ್ ನ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದ್ದು, 207 ಜಿಲ್ಲೆಗಳನ್ನು ನಿಯಂತ್ರಿತ ಕ್ಲಸ್ಟರ್ ಎಂದು ಗುರುತಿಸಲಾಗಿದೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ದೇಶದ ಜಿಲ್ಲೆಗಳನ್ನು 1) ಹಾಟ್ ಸ್ಪಾಟ್ ಜಿಲ್ಲೆಗಳು 2) ಹಾಟ್ ಸ್ಪಾಟ್ ರಹಿತ ಜಿಲ್ಲೆಗಳು 3) ಹಸಿರು ವಲಯದ ಜಿಲ್ಲೆಗಳು ಎಂದು ಮೂರು ವಿಭಾಗಗಳನ್ನಾಗಿ ಗುರುತಿಸಲಾಗಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಮಾಹಿತಿ ನೀಡಿದ್ದು, ಕೋವಿಡ್ 19 ಸೋಂಕು ದೇಶದಲ್ಲಿ ಸಮುದಾಯ ಹಂತ ತಲುಪಿಲ್ಲ. ಆದರೆ ಕೆಲವು ಸ್ಥಳೀಯ ಪ್ರದೇಶಗಳಲ್ಲಿ ಸೋಂಕು ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ 1,076 ಕೋವಿಡ್ ನ ಹೊಸ ಪ್ರಕರಣಗಳು ಪತ್ತೆಯಾಗಿದೆ. 270 ಮಂದಿ ಗುಣಮುಖರಾಗಿರುವುದಾಗಿ ತಿಳಿಸಿದ್ದಾರೆ.
ದೇಶದಲ್ಲಿ ಹಾಟ್ ಸ್ಪಾಟ್ ಗಳನ್ನು ಎರಡು ಹಂತದಲ್ಲಿ ಆಯ್ಕೆ ಮಾಡಲಾಗುತ್ತಿದೆ. ಅತೀ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾಗುತ್ತಿರುವುದು ಮತ್ತು ಇತರ ಪ್ರದೇಶಕ್ಕಿಂತ ಪ್ರಕರಣ ಹೆಚ್ಚಾಗುತ್ತಿರುವುದರ ಅಂಕಿಸಂಖ್ಯೆ ಮೇಲೆ. ಒಂದು ಪ್ರದೇಶದಲ್ಲಿ 15ಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಕರಣಗಳಿದ್ದರೆ ಇದನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತದೆ.
ಲಾಕ್ ಡೌನ್ ಸಂದರ್ಭದಲ್ಲಿ ಜನರು ಅದನ್ನು ಸಮರ್ಪಕವಾಗಿ ಅನುಸರಿಸಬೇಖಕು ಎಂದು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಗಳಿಂದ ಪ್ರಕರಣ ವರದಿಯಾಗುತ್ತಿದೆ. ಆದರೆ ಅವುಗಳೆಲ್ಲಾ ಹಾಟ್ ಸ್ಪಾಟ್ ಗಳಲ್ಲ. ಅದನ್ನು ತಡೆಯುವ ನಿಟ್ಟಿನಲ್ಲಿ ಹೆಜ್ಜೆಯನ್ನು ಇಡಬೇಕಾಗಿದೆ ಎಂದು ತಿಳಿಸಿದ್ದಾರೆ.