Advertisement

ಲಾಕ್ ಡೌನ್ ಇದ್ದರೂ ಲಸಿಕೆ ಕೊಡುವುದನ್ನು ಮುಂದುವರೆಸುತ್ತೇವೆ: ಕೆ ಸುಧಾಕರ್

12:09 PM Apr 27, 2021 | Team Udayavani |

ಬೆಂಗಳೂರು: ಮಾರ್ಗಸೂಚಿ ಬಿಡುಗಡೆ ಬಳಿಕ, ಕೆಲವು ಚಟುವಟಿಕೆಗಳ ಮೇಲೆ ನಿರ್ಬಂಧವಿದೆ. ಲಸಿಕೆ ಕೊಡುವುದರ ಬಗ್ಗೆ ಅನೇಕ ಊಹಾಪೂಹಗಳಿವೆ. ಲಸಿಕೆ ಸಿಗುವುದಿಲ್ಲ ಎಂದು ಕೆಲವರು ಸುಳ್ಳು ಹೇಳಿದ್ದಾರೆ. ಆದರೆ ಲಸಿಕೆ ಪಡೆಯೋದೆಲ್ಲ,ಅಗತ್ಯ ಸೇವೆಗೆ ಒಳಪಡಲಿದೆ. ಅಗತ್ಯ ಸೇವೆಗಳು ಅಬಾಧಿತವಾಗಿರಲಿದೆ. ಲಸಿಕೆ ಕೊಡುವುದನ್ನ ಮುಂದುವರೆಸುತ್ತೇವೆ ಎಂದು ಡಾ.ಕೆ. ಸುಧಾಕರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಜಿಸ್ಟರ್ ಮಾಡಿಕೊಂಡು ಲಸಿಕೆ ಕೊಡುತ್ತೇವೆ. ಲಸಿಕೆ ಒಂದೇ ನಮಗೆ ಇರುವ ಉಪಾಯ ಎಂದರು.

ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಪಡೆಯಿರಿ. 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ. ಇಲ್ಲಿವರೆಗೂ ಲಸಿಕೆ ಕೊರತೆಯಿಲ್ಲ. ಎಲ್ಲಾ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಸಮಾನವಾಗಿ, ಜನಸಂಖ್ಯೆ ಆಧಾರದ ಮೇಲೆ ಲಸಿಕೆ ಪೂರೈಸುತ್ತಿದೆ ಎಂದರು.

ಲಸಿಕೆ ಪಡೆಯುವುದರಿಂದ ಮುಂದೆ ಸೋಂಕಿನಿಂದ ತಪ್ಪಿಸಿಕೊಳ್ಳಬಹುದು. ಮೂರನೇ ಅಲೆ ಬರುವುದನ್ನು ತಡೆಯಲು ದೊಡ್ಡ ಮಟ್ಟದ ಸಿದ್ಧತೆಯಾಗಬೇಕು. ಯಾವುದೋ ಹಂತದಲ್ಲಿ ನಾವು ಸ್ವಲ್ಪ ಪ್ರಮಾಣದ ತ್ಯಾಗಕ್ಕೆ ಸಿದ್ಧವಾಗಬೇಕು. ಸಂಪೂರ್ಣ 14 ದಿನ ಚೈನ್ ಬ್ರೇಕ್ ಹಾಕಲು ಈ ಕ್ರಮ ಅನಿವಾರ್ಯ. ಜನರು ಸರ್ಕಾರದ ಜೊತೆ ಸಹಕರಿಸಬೇಕು ಎಂದು ಸುಧಾಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next