ಮಂಡ್ಯ: ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆಸ್ತಿ-ಅಧಿಕಾರಕ್ಕಿಂತ, ಆರೋಗ್ಯವೇ ಅತ್ಯಮೂಲ್ಯ. ಎಲ್ಲವನ್ನೂಸಂಪಾದನೆ ಮಾಡಬಹುದು. ಆರೋಗ್ಯ ಖರೀದಿಸಲು ಮಾತ್ರ ಸಾಧ್ಯವಿಲ್ಲ. ಉತ್ತಮ ಆರೋಗ್ಯವಿದ್ದರೆ ಆಯುಸ್ಸು ಹೆಚ್ಚುತ್ತದೆ ಎಂದು ಎಂ ಶ್ರೀನಿವಾಸ್ ಹೇಳಿದರು.
ನಗರದ ಹೌಸಿಂಗ್ ಬೋರ್ಡ್‌ನ ಉದ್ಯಾನವನದಲ್ಲಿ ಭಾನುವಾರ ಜಿಲ್ಲಾ ನಾಗರಿಕರ ಹಿತರಕ್ಷಣೆ ವೇದಿಕೆ ಆಯೋಜಿಸಿದ್ದ ಉಚಿತ ಆರೋಗ್ಯ ಕಾರ್ಯಾಗಾರ ಮತ್ತು ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಹುಟ್ಟು-ಸಾವುಗಳ ನಡುವೆ ಜೀವನ ನಡೆಸುವಾಗ ಸಮಾಜಮುಖೀಯಾಗಿ ಸಾಧನೆ ಮಾಡಿದರೆ ಸತ್ತ ನಂತರವೂ ಜೀವಂತವಾಗಿ ರುತ್ತಾರೆ.
ವಾರ್ಡಿನ ನಾಗರಿಕರು ಆರೋಗ್ಯ ಕಾಡಿಕೊಳ್ಳಲು ಸ್ವತ್ಛತೆ, ಉತ್ತಮ ಪರಿಸರ, ಪೌಷ್ಟಿಕ ಆಹಾರ, ವ್ಯಾಯಾಮ ಅತ್ಯವಶ್ಯಕ. ವೈದ್ಯರ ಸಲಹೆ ಅನುಸರಿಸಿದರೆ ಆನಾರೋಗ್ಯವಂತರು ಆರೋಗ್ಯ ವಂತರಾಗಿ ಜೀವನ ನಡೆಸಬಹುದು ಎಂದರು.ಸಾಂಜೋ ಆಸ್ಪತ್ರೆಯ ಎಲ್ಲಾ ವಿಭಾಗದ ವೈದ್ಯರು ಮತ್ತು ಸಿಬ್ಬಂದಿ ನಾಗರಿಕರ ಆರೋಗ್ಯ ತಪಾಸಣೆ ನಡೆಸಿ, ಔಷಧ ವಿತರಿಸಿ, ಆರೋಗ್ಯದ ಸಲಹೆ ಸೂಚನೆನೀಡಿದರು. ನಂತರ ವಿವಿಧ ಕ್ಷೇತ್ರಗಳ ಸಾಧಕರಾದ ಮಾಜಿ ಯೋಧರು,ರಾಷ್ಟ್ರೀಯ ಕ್ರೀಡಾಪಟು ಮತ್ತು ಸಮಾಜ ಸೇವಕರನ್ನು ಅಭಿನಂದಿಸಿ ಗೌರವಿಸಿದರು.
ನಗರಸಭೆ ಮಾಜಿ ಸದಸ್ಯೆ ಗೌರಮ್ಮ ವೆಂಕಟೇಶಯ್ಯ, ಸಾಂಜೋ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ನಿರ್ಮಲಾ, ಪಿಆರ್‌ಒ ಸೋಲೂಮನ್, ನಾಗರಿಕರ ಹಿತರಕ್ಷಣೆ ವೇದಿಕೆ ಅಧ್ಯಕ್ಷ ಲಿಂಗೇಗೌಡ, ನಗರಸಭೆ ಮಾಜಿ ಸದಸ್ಯ ಪ್ರಕಾಶ್, ಸಾಹಿತಿ ಡಾ.ಮುದ್ದೇಗೌಡ, ನಗರಸಭಾಸದಸ್ಯ ಎಚ್.ಎಸ್. ಮಂಜುನಾಥ್, ಮಾಜಿ ಸದಸ್ಯ ಕೆ.ಎಲ್.ನಾಗೇಂದ್ರ, ಲಯನ್ಸ್ ಸಂಸ್ಥೆಯ ಪ್ರಧಾನ ಪೋಷಕ ಬಿ.ಎಂ. ಅಪ್ಪಾಜಪ್ಪ, ಪೊ›.ಮರಿಯಯ್ಯ, ವಿಕ್ಕೆರೆ ವೆಂಕಟೇಶ್, ವಿವೇಕ್, ಕೃಷ್ಣಮೂರ್ತಿ ಮತ್ತಿತರರು ಕಾರ್ಯ ಕ್ರಮದಲ್ಲಿ ಹಾಜರಿದ್ದರು.