Advertisement

ಪಾಸಿಟಿವ್‌ ಮಾಹಿತಿಗೆ ಆರೋಗ್ಯ ಸೇತು ಆ್ಯಪ್

10:45 AM May 12, 2020 | Lakshmi GovindaRaj |

ಚಾಮರಾಜನಗರ: ದೃಢೀಕೃತ ಕೊರೊನಾ ವೈರಸ್‌ ಪಾಸಿಟಿವ್‌ ಪ್ರಕರಣಗಳ ಮಾಹಿತಿ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಕೋವಿಡ್‌-19  ಆ್ಯಪ್‌ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್‌.ರವಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್‌19 ಮುಂಜಾಗ್ರತಾ ಕ್ರಮಗಳು, ಆರೋಗ್ಯ ಸೇವೆಗಳ ಯೋಜನೆ ಅನುಷ್ಠಾನ  ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

Advertisement

ಕೊರೊನಾ ಸೋಂಕಿಗೆ ತುತ್ತಾಗಿರುವ ವ್ಯಕ್ತಿ ಮೇಲೆ ನಿಗಾ ಇರಿಸುವ ಮತ್ತು ವೈಯಕ್ತಿಕ ಅಲರ್ಟ್‌ ಸಂದೇಶದ ಮೂಲಕ ಎಚ್ಚರಿಕೆ ನೀಡುವ ವಿಶೇಷತೆಯುಳ್ಳ ಆರೋಗ್ಯ  ಸೇತು ಆ್ಯಪ್‌ ಉಪಯೋಗವಾಗಲಿದೆ. ಆ್ಯಪ್‌ ಅನ್ನು ಅಳವಡಿಸಿಕೊಂಡಲ್ಲಿ ಕೊರೊನಾ ಪಾಸಿಟಿವ್‌ ದೃಢಪಟ್ಟ ವ್ಯಕ್ತಿ ಸಮೀಪದಲ್ಲಿ ಇದ್ದಲ್ಲಿ ಕೂಡಲೇ ಆ್ಯಪ್‌ ಅಲರ್ಟ್‌ ಎಚ್ಚರಿಸುತ್ತದೆ ಎಂದರು.

ಈ ಆ್ಯಪ್‌ ಅನ್ನು  ಸಾರ್ವಜನಿಕರು, ಸರ್ಕಾರಿ ನೌಕರರು, ಬ್ಯಾಂಕ್‌, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ನೌಕರರು, ಖಾಸಗಿ ವಲಯದ ನೌಕರರು ಡೌನ್‌ ಲೋಡ್‌ ಮಾಡಿಕೊಂಡು ಅಧಿಕಾರಿಗಳು ಜಾಗೃತಿ  ಮೂಡಿಸಬೇಕೆಂದು ತಿಳಿಸಿದರು. ಔಷಧ ಮಾರಾಟ ಅಂಗಡಿಗಳು ಅಂಗಡಿಗೆ ಬರುವವರಿಗೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ತಿಳಿವಳಿಕೆ ನೀಡಬೇಕು.

ಮನೆ ಬಾಗಿಲಿಗೆ ಔಷಧ ತಲುಪಿಸುವ ಔಷಧ ಮಿತ್ರ  ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಟೆಲಿ ಮೆಡಿಸನ್‌ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಮಹತ್ವ, ಬಳಕೆಗೆ ಪ್ರೋತ್ಸಾಹಿಸಲು ಕರಪತ್ರ, ಪೋಸ್ಟರ್‌, ವಾಯ್ಸ ಮೆಸೇಜ್‌ ವಿವಿಧ  ಮಾಧ್ಯಮಗಳ ಮುಖೇನ ಹೆಚ್ಚು ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿ ರವಿ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ವೈದ್ಯಕೀಯ  ಕಾಲೇಜಿನ ಡೀನ್‌ ಡಾ.ಸಂಜೀವ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next