Advertisement

ಲಂಚಕ್ಕೆ ಬೇಡಿಕೆ: ಹೆಲ್ತ್‌ಇನ್‌ಸ್ಪೆಕ್ಟರ್‌ ಲೋಕಾ ಬಲೆಗೆ

11:19 AM Mar 05, 2023 | Team Udayavani |

ಬೆಂಗಳೂರು: ಸ್ಪಾ ಟ್ರೇಡ್‌ ಪರವಾನಗಿ ನವೀಕರಣಕ್ಕೆ 20 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಹೆಲ್ತ್‌ ಇನ್‌ಸ್ಪೆಕ್ಟರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

Advertisement

ಬಿಬಿಎಂಪಿ ಸಿ.ವಿ.ರಾಮನ್‌ನಗರದ ಹೆಲ್ತ್‌ ಇನ್‌ಸ್ಪೆಕ್ಟರ್‌ ರಾಮಯ್ಯ ಬಂಧಿತ. ಸ್ಪಾವೊಂದರ ಟ್ರೇಡ್‌ ಪರವಾನಗಿ ನವೀಕರಣಕ್ಕೆ ಕೋರಮಂಗಲದ ಸುಬ್ರಹ್ಮಣ್ಯ, ರಾಮಯ್ಯ ಅವರನ್ನು ಭೇಟಿಯಾಗಿದ್ದರು. ಈ ಕೆಲಸ ಮಾಡಿಸಿ ಕೊಡಲು ರಾಮಯ್ಯ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಡಲು ಇಚ್ಛಿಸದ ಸುಬ್ರಹ್ಮಣ್ಯ ಲೋಕಾಯುಕ್ತಕ್ಕೆ ಈ ಬಗ್ಗೆ ದೂರು ನೀಡಿದ್ದರು.

ಸಿ.ವಿ. ರಾಮನ್‌ ನಗರದ ಬಿಬಿಎಂಪಿ ಕಚೇರಿಯಲ್ಲಿ ಶನಿವಾರ ದೂರುದಾರರಿಂದ ರಾಮಯ್ಯ 20 ಸಾವಿರ ಪೈಕಿ 18 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್‌ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ರಾಮಯ್ಯನನ್ನು ಬಂಧಿಸಿ ಲಂಚದ ಹಣ ಜಪ್ತಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next