Advertisement
ಇವೆಲ್ಲವೂ 2022ರಲ್ಲಿ ಜಗತ್ತನ್ನು ಕಾಡಲಿರುವ ಸಮಸ್ಯೆಗಳಂತೆ! ಹೀಗೆಂದು ಹೇಳಿರುವುದು ನಾವಲ್ಲ. ಬಲ್ಗೇರಿಯಾದ ಕಾಲಜ್ಞಾನಿ ಎಂದೇ ಪ್ರಖ್ಯಾತರಾಗಿದ್ದ ಬಾಬಾ ವಂಗಾ. ಇವರನ್ನು “ನೋಸ್ಟ್ರಾಡಾಮಸ್ ಆಫ್ ದಿ ಬಲ್ಕಾನ್ಸ್’ ಎಂದೂ ಕರೆಯುತ್ತಾರೆ. 1996ರಲ್ಲೇ ವಂಗಾ ಅವರು ನಿಧನರಾಗಿದ್ದಾರೆ. ಆದರೆ ತಮ್ಮ ಸಾವಿಗೂ ಮುನ್ನವೇ ಅವರು 5079ನೇ ಇಸವಿಯವರೆಗಿನ ಭವಿಷ್ಯವನ್ನು ಬರೆದಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
Related Articles
Advertisement
2022ರ ಭವಿಷ್ಯವೇನು?
– ಮತ್ತೂಂದು ಅಪಾಯಕಾರಿ ವೈರಸ್ ಅನ್ನು ಸೈಬೀರಿಯಾದ ಸಂಶೋಧಕರು ಪತ್ತೆ ಹಚ್ಚಲಿದ್ದಾರೆ
– ಜಗತ್ತಿನಾದ್ಯಂತ ಹಲವು ನಗರಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುತ್ತದೆ
– ಸುನಾಮಿ ಬರಲಿದ್ದು, ಏಷ್ಯಾ ಮತ್ತು ಆಸ್ಟ್ರೇಲಿಯಾದ ದೇಶ ಗಳಲ್ಲಿ ಭಾರೀ ಪ್ರವಾಹಕ್ಕೆ ನೂರಾರು ಮಂದಿ ಬಲಿಯಾಗುತ್ತಾರೆ.
– ಭಾರತದಲ್ಲಿ ಮಿಡತೆ ದಾಳಿ ಆಗಿ, ಬೆಳೆಹಾನಿ ಸಂಭವಿಸಲಿದೆ. ಬರಗಾಲ ಬರಲಿದೆ. ತಾಪಮಾನ 50 ಡಿ.ಸೆ.ಗೇರಲಿದೆ.
– “ಔಮುವಾಮುವಾ’ ಎಂಬ ಹೆಸರಿನ ಕ್ಷುದ್ರಗ್ರಹವನ್ನು ಅನ್ಯಗ್ರಹಜೀವಿಗಳು ಭೂಮಿಗೆ ಕಳುಹಿಸಲಿದೆ.
– 2022 ವರ್ಚುವಲ್ ರಿಯಾಲಿಟಿಯ ವರ್ಷವಾಗಲಿದೆ. ಜನರು ಹೆಚ್ಚಿನ ಸಮಯವನ್ನು ಪರದೆ ಮೇಲೆ ಕಳೆಯಲಿದ್ದಾರೆ.