Advertisement

ಆರೋಗ್ಯವೇ ಮೊದಲು: ಐಸಿಸಿ

10:50 PM May 23, 2020 | Sriram |

ದುಬಾೖ: ಕೋವಿಡ್-19 ನಿಯಂತ್ರಿಸುವಲ್ಲಿ ಬಹಳಷ್ಟು ದೇಶಗಳು ವಿಫ‌ಲವಾಗಿರುವ ಕಾರಣ ಕ್ರಿಕೆಟ್‌ ಚಟುವಟಿಕೆಯನ್ನು ಮುಂದುವರಿ ಸಲು ಸೂಕ್ತ ಮುನ್ನೆಚ್ಚರಿಕೆ ಅಗತ್ಯ ಎಂಬುದಾಗಿ ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ಹೇಳಿದೆ.

Advertisement

ಈ ಹಿನ್ನೆಲೆಯಲ್ಲಿ ಕೆಲವು ಮಾರ್ಗ ದರ್ಶಿ ಸೂತ್ರಗಳನ್ನೂ ರೂಪಿಸಿದೆ. “ಆರೋಗ್ಯವೇ ಮೊದಲು’ ಎಂಬುದು ಇದರಲ್ಲಿ ಪ್ರಮುಖವಾ ದುದು. ಇದಕ್ಕಾಗಿ ಪ್ರಧಾನ
ವೈದ್ಯಾ ಧಿಕಾರಿ ಅಥವಾ ಜೈವಿಕ ಸುರಕ್ಷಾ ಅಧಿಕಾರಿಯನ್ನು ನೇಮಿಸಬೇಕು ಎಂಬುದಾಗಿ ಹೇಳಿದೆ.

“ಕ್ರಿಕೆಟ್‌ ಪುನರಾರಂಭಿಸಲು ಭಾರೀ ಮುನ್ನೆಚ್ಚರಿಕೆ ವಹಿಸಬೇಕಿದೆ. ಸ್ಥಳೀಯವಾಗಿ ಕೋವಿಡ್-19 ಹಬ್ಬುವುದು ನಿಲ್ಲಬೇಕಾದುದು ಅತ್ಯಗತ್ಯ. ಆರೋಗ್ಯಕ್ಕೆ ನಮ್ಮ ಮೊದಲ ಆದ್ಯತೆ’ ಎಂಬುದಾಗಿ ಐಸಿಸಿ ತಿಳಿಸಿದೆ.

“ಅಭ್ಯಾಸಕ್ಕೆ ಇಳಿಯುವ ಮುನ್ನ ಕ್ರಿಕೆಟ್‌ ಪರಿಸರ, ತರಬೇತಿ ಸ್ಥಳ, ಚೇಂಜಿಂಗ್‌ ರೂಮ್ಸ್‌, ಅಲ್ಲಿನ ಪರಿಕರ, ಪ್ರಯಾಣ ನಿರ್ಬಂಧ… ಇವನ್ನೆಲ್ಲ ಗಮಿಸಬೇಕಾದುದು ಅಗತ್ಯ. ಸ್ಥಳೀಯ ಕ್ರಿಕೆಟ್‌ ಆಡಳಿತ ಸಂಸ್ಥೆಗಳು ಸರಕಾರದ ಆದೇಶವನ್ನು ಸ್ಪಷ್ಟವಾಗಿ ಪಾಲಿಸಬೇಕಿದೆ’ ಎಂದು ಐಸಿಸಿ ಹೇಳಿದೆ.

ಮಾರ್ಗದರ್ಶಿ ಸೂತ್ರಗಳು
ಪ್ರಯಾಣಕ್ಕೂ 14 ದಿನ ಮೊದಲು ನಿರಂತರ ದೇಹದ ಉಷ್ಣಾಂಶ ಪರೀಕ್ಷೆ ನಡೆಸುವುದು, ಅಭ್ಯಾಸದ ವೇಳೆ ಆಟಗಾರರ ನಡುವೆ ಕನಿಷ್ಠ ಒಂದೂವರೆ ಮೀ. ಅಂತರ ಕಾಯ್ದು ಕೊಳ್ಳುವುದು, ಚೆಂಡನ್ನು ಮುಟ್ಟುವ ಮೊದಲು ಕೈಯನ್ನು ಸ್ಯಾನಿಟೈಸ್‌ ಮಾಡುವುದು, ಬೌಲಿಂಗಿಗೂ ಮೊದಲು ತಮ್ಮ ಕ್ಯಾಪ್‌, ಜರ್ಕಿನ್‌, ಇತರ ಪರಿಕರಗಳನ್ನು ಅಂಪಾಯರ್‌ಗೆ ನೀಡದಿರುವುದು, ಅಂಗಳದಲ್ಲಿ ಸಂಭ್ರಮಾಚರಣೆ ನಡೆಸಲು ಗುಂಪುಗೂಡದಿರುವುದು, ಪ್ರಯಾಣಕ್ಕೆ ಬಾಡಿಗೆ ವಿಮಾನ ಬಳಕೆ… ಇವೆಲ್ಲ ಐಸಿಸಿಯ ನೂತನ ಮಾರ್ಗದರ್ಶಿ ಸೂತ್ರಗಳಾಗಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next