Advertisement

ಆರೋಗ್ಯ ತಪಾಸಣಾ ಶಿಬಿರ

04:50 PM Jan 02, 2022 | Shwetha M |

ವಿಜಯಪುರ: ಕೂಡಗಿ ಗ್ರಾಮದಲ್ಲಿ ಜರುಗಿದ ಆರೋಗ್ಯ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡ ರೋಗಿಗಳಿಗೆ ಅಶ್ವಿ‌ನಿ ಆಸ್ಪತ್ರೆಯಲ್ಲಿ ಹೊರ ರೋಗಿ ತಪಾಸಣೆಗೆ ಯಾವುದೇ ಶುಲ್ಕ ತೆಗೆದುಕೊಳ್ಳದೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಚಿಕ್ಕಮಕ್ಕಳ ಖ್ಯಾತ ತಜ್ಞ ವೈದ್ಯರಾದ ರೆಡ್‌ ಕ್ರಾಸ್‌ ಸಂಸ್ಥೆಯ ಚೇರಮನ್‌ ಡಾ| ಎಲ್‌.ಎಚ್‌. ಬಿದರಿ ಹೇಳಿದರು.

Advertisement

ಕೂಡಗಿ ಗ್ರಾಮದಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ, ಅಶ್ವಿ‌ನಿ ಸ್ಕೂಲ್‌ ಆಫ್‌ ನರ್ಸಿಂಗ್‌ ಸೈನ್ಸಸ್‌, ಬಿಎಲ್‌ಡಿಇ ಸಂಸ್ಥೆಯ ಎ.ಎಸ್‌. ಪಾಟೀಲ ಕಾಲೇಜ್‌ ಆಫ್‌ ಕಾಮರ್ಸ್‌, ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಜಂಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಉಳಿದ ವೈದ್ಯಕೀಯ ಪರೀಕ್ಷೆಗಳನ್ನು ರಿಯಾಯ್ತಿ ದರದಲ್ಲಿ ಮಾಡುವುದಾಗಿ ತಿಳಿಸಿದರು.

ಆಜಾದಿ ಕಾ ಅಮೃತ ಮಹೋತ್ಸವ-ಪವರ್‌ಗ್ರಿಡ್‌ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಪವರಗ್ರಿಡ್‌ನ‌ ಜನರಲ್‌ ಮ್ಯಾನೇಜರ್‌ ಪಿ.ವೆಂಕಟಪತಿ ಚಾಲನೆನೀಡಿದರು.

ಮೆಡಿಕಲ್‌ ಆಫೀಸರ್‌ ಡಾ| ಗೋವಿಂದರಾಜ್‌, ಡಾ| ಅಮೃತಾ, ಫಿಜಿಶಿಯನ್‌ ಡಾ| ಸುಷ್ಮಿತಾ ಮನಗೂಳಿ, ಶಸ್ತ್ರ ಚಿಕಿತ್ಸಕ ಡಾ| ಜಸ್ಪಾಲ್‌ಸಿಂಗ್‌, ಡಾ| ಅಭಿಜಿತ್‌ ದೇವಗಿರಕರ್‌, ಎಲಬು-ಕೀಲು ತಜ್ಞರಾದ ಡಾ| ಸಂದೀಪ ನಾಯಕ, ಡಾ| ಪ್ರಶಾಂತ, ಸ್ತ್ರೀರೋಗ ತಜ್ಞರಾದ ಡಾ| ಮನಪ್ರೀತ್‌ಸಿಂಗ್‌, ನೇತ್ರತಜ್ಞೆ ಡಾ| ರಶ್ಮಿ ಚಿತ್ತವಾಡಗಿ ಶಿಬಿರದಲ್ಲಿ 300ಕ್ಕೂ ಅಧಿಕ ರೋಗಿಗಳ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔಷಧ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next