Advertisement

ಲಕ್ಷ್ಮೀಕ್ಯಾಂಪ್‌ನಲ್ಲಿ ಆರೋಗ್ಯ ತಪಾಸಣೆ ಶಿಬಿರ

03:06 PM Jan 25, 2022 | Team Udayavani |

ಬಳಗಾನೂರು: ಸಾರ್ವಜನಿಕರು ಕುಡಿಯಲು ಮತ್ತು ಬಳಸಲು ಅಂತರಜಲ, ನೀರಿನಲ್ಲಿ ಪ್ಲೋರೈಡ್‌ಅಂಶ ಹೆಚ್ಚಾಗಿರುವ ನೀರನ್ನು ಬಳಸುವುದರಿಂದ ಕಾಯಲೆಗಳು ಉಂಟಾಗುತ್ತವೆ ಎಂದು ಜಿಲ್ಲಾ ಪ್ಲೋರೋಸಿಸ್‌ ಸಲಹೆಗಾರ ಗುರುಪ್ರಸಾದ ಹಿರೇಮಠ ಹೇಳಿದರು.

Advertisement

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಲಕ್ಷ್ಮೀ ಕ್ಯಾಂಪ್‌ ನಲ್ಲಿ ರಾಷ್ಟ್ರೀಯ ಪ್ಲೋರೋಸಿಸ್‌ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಪ್ಲೋರೋಸಿಸ್‌ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಮಾತನಾಡಿದರು.

ಮಕ್ಕಳಲ್ಲಿ ಕಂದುಹಲ್ಲು, ವಯಸ್ಕರಲ್ಲಿ ಮೋಳಕಾಲು ನೋವು, ಕೀಲಿನ ಸವಕಳಿ, ರಕ್ತಹೀನತೆ ಉಂಟಾಗುವುದು ಮುಖ್ಯ ಲಕ್ಷಣಗಳಾಗಿವೆ ಎಂದರು.

ವೈದ್ಯಾಧಿಕಾರಿ ಡಾ| ದೌಲಸಾಬ ಮುದ್ದಾಪುರ ಮಾತನಾಡಿ, ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಜನತೆಯು ಕುಡಿಯಲು ಬಳಸುವ ನೀರನ್ನು ಪೊÉàರೈಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಇಲ್ಲಿನ ನೀರಿನಲ್ಲಿ ಅಗತ್ಯಕಿಂತ ನಾಲ್ಕು ಪಟ್ಟು ಪೊÉàರೈಡ್‌ ಅಂಶ ಹೆಚ್ಚಾಗಿರುವುದು ಕಂಡುಬಂದಿದೆ. ಇಲ್ಲಿನ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಘಟಕದ ಅವಶ್ಯಕತೆ ಹೆಚ್ಚಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ಲೋರೋಸಿಸ್‌ ಕಾಯಿಲೆ ಇರುವ ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಉಚಿತ ಔಷಧ, ನಿಕ್ಯಾಪ್ಸ್‌ ಹಾಗೂ ಸಲಕರಣೆಗಳು ವಿತರಿಸಲಾಯಿತು.

ಪ್ರಯೋಗಾಲಯ ತಜ್ಞ ಗಂಗಾಧರ, ಉಪಕೇಂದ್ರದ ಆರೋಗ್ಯ ಸಹಾಯಕಿ ಲಕ್ಷ್ಮೀ ಬುಳ್ಲಾಪುರ ಸೇರಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next