Advertisement
ಜಿಲ್ಲೆಗೆ ಆಗಮಿಸುವವರಿಗಿಂತ, ಜಿಲ್ಲೆ ಯಿಂದ ಹೊರಹೋಗುವವರ ಸಂಖ್ಯೆ ಹೆಚ್ಚಾಗಿತ್ತು. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಸಿಬಂದಿ ಜತೆ ಶಿಕ್ಷಣ ಇಲಾಖೆ ಹಾಗೂ ಪಂ. ಇಲಾಖೆ ಸಿಬಂದಿಯನ್ನು ಗೇಟ್‌ನ ಉಸ್ತುವಾರಿಗೆ ನಿಯೋಜಿಸಲಾಗಿದೆ. ವಾಹನಗಳ ಪಾಸ್ ಅನ್ನು ಪರಿಶೀಲನೆ ನಡೆಸಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.
ಚಾರ್ಮಾಡಿ ಘಾಟಿ ಮೂಲಕ ಹೊರ ಜಿಲ್ಲೆಗಳಿಂದ ಆಗಮಿಸಿದ 81 ಮಂದಿಗೆ ಸೋಮವಾರ ಹಾಗೂ 43 ಮಂದಿಗೆ ಮಂಗಳವಾರ ಸೀಲ್ ಹಾಕಿ, ಕ್ವಾರಂಟೇನ್‌ಗೆ ಸೂಚಿಸಲಾಗಿದೆ. ಕ್ವಾರಂಟೈನ್ ಅವರ ಮನೆ ಮಂದಿಗೂ ಅನ್ವಯಿಸುತ್ತದೆ ಎಂದು ಆರೋಗ್ಯ ಇಲಾಖೆ ಸ್ವತಂತ್ರ ರಾವ್ ತಿಳಿಸಿದ್ದಾರೆ. ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬಳ್ಳಾರಿ ಮತ್ತು ಬೆಂಗಳೂರಿನಿಂದ ಆಗಮಿಸಿದ ಇಬ್ಬರು ಮತ್ತು ಅವರ 10 ಮನೆ ಮಂದಿಗೆ, ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ, ಹಾಸನ ಹಾಗೂ ಬೆಂಗಳೂರಿನಿಂದ ಆಗಮಿಸಿದ ಇಬ್ಬರು ಹಾಗೂ ಅವರ 5 ಮಂದಿಯನ್ನು 14 ದಿನಗಳ ಕಡ್ಡಾಯ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
Related Articles
ಒಂದು ಕಾರ್‌ನಲ್ಲಿ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶವಿದ್ದರೂ ಒಂದೇ ವಾಹನ ಸಂಖ್ಯೆಗೆ ಇಬ್ಬರಿಗಿಂತ ಹೆಚ್ಚು ಮಂದಿ ಪ್ರಯಾಣಿಸಲು ಪಾಸ್ ಕೊಟ್ಟಿರುವ ಕೆಲವು ಪ್ರಕರಣಗಳು ಕಂಡು ಬಂದಿವೆ. ಇದು ಚೆಕ್ ಪೋಸ್ಟ್ ನಲ್ಲಿ ಒಂದಿಷ್ಟು ಗೊಂದಲಕ್ಕೂ ಕಾರಣವಾಗುತ್ತಿದೆ.
Advertisement