ಕಲಬುರಗಿ: ದಿನೇ-ದಿನೇ ಹೆಚ್ಚಳವಾಗುತ್ತಿರುವ ಹಾಗೂ ನಿಯಂತ್ರಣಕ್ಕೆ ಬಾರದೇ ಹಲವರು ಸಂಕಷ್ಟಕ್ಕೆ ಒಳಗಾಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ| ಅಮೊಲ ಪತಂಗೆ ಹೇಳಿದರು.
ಅಫಜಲಪುರ ತಾಲೂಕಿನ ಕರ್ಜಗಿಯಯಲ್ಲಾಲಿಂಗ ಮಹಾರಾಜ ಮಠದಲ್ಲಿ ಹಾಗೂ ಕಲಬುರಗಿ ತಾಲೂಕಿನ ಫರಹತಾಬಾದ್‌ನ ಶರಣಬಸವೇಶ್ವರ ದೇವಸ್ಥಾನದಲ್ಲಿ ರೈತ ನಾಯಕ ದಿ| ಸಾಯಬಣ್ಣಗೌಡ ಪಾಟೀಲ್ ಭಾಸಗಿ ಸ್ಮರಣಾರ್ಥ ವೈದ್ಯರಾದ ಡಾ| ಸುಭಾಷ ಪಾಟೀಲ್ ಭಾಸಗಿ ನೇತೃತ್ವದಲ್ಲಿ ಹಾಗೂ ಜಿಪಂ ಮಾಜಿ ಸದಸ್ಯ ತುಕಾರಾಮ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕೋವಿಡ್ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಕೋವಿಡ್ ಗೆ ಗ್ರಾಮೀಣ ಭಾಗದಲ್ಲಿ ಎಚ್ಚರಿಕೆ ವಹಿಸದಿರುವುದು ಕಂಡು ಬರುತ್ತಿದೆ. ಹೀಗಾಗಿ ಜಾಗೃತಿ ವಹಿಸುವುದು ಮುಖ್ಯವಾಗಿದೆ. ಕೋವಿಡ್ ಗೆ ಹೆದರಿ ಇತರ ರೋಗಗಳಿಗೂ ಚಿಕಿತ್ಸೆಗೆಂದು ಜನರು ಹೋಗ್ತಾ ಇಲ್ಲ. ಹೋದರೆ ಮೊದಲಿಗೆ ಕೋವಿಡ್-19 ಪರೀಕ್ಷೆ ಮಾಡಿಸಲಾಗುತ್ತಿದೆ ಎಂಬ ಭಯದಿಂದ ಆಸ್ಪತ್ರೆಗೆ ಬಾರದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿವರಣೆ ನೀಡಿದರು.
ಅಫಜಲಪುರ ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೆರಿ ಶಿಬಿರ ಉದ್ಘಾಟಿಸಿ, ಡಾ| ಸುಭಾಷ ಪಾಟೀಲ್ ಅವರು ಗ್ರಾಮೀಣ ಜನರ ಆರೋಗ್ಯ ಕಾಳಜಿ ಹೊಂದಿ ಶಿಬಿರ ಆಯೋಜಿಸಿರುವುದು ಮಾದರಿಯಾಗಿದೆ ಎಂದು ಶ್ಲಾ ಸಿದರು. ಜಿಪಂ ಮಾಜಿ ಸದಸ್ಯ ಸಿದ್ದಯ್ಯ ಹಿರೇಮಠ, ಕರ್ಜಗಿ ಗ್ರಾಪಂ ಪೊನ್ನಪ್ಪ ಡಾಳೆ, ಉಪಾಧ್ಯಕ್ಷ ಮಲ್ಲು ಕಿಣಗಿ, ಪ್ರಮುಖರಾದ ಸೋಮಶೇಖರ್ ಬಾಡಗಿಹಾಳ, ಪೀರು ನಾಯಕೊಡಿ, ಇರ್ಪಾನ ಜಮಾದಾರ, ಚಿದಾನಂದ ತಳವಾರ, ಅಣ್ಣಾರಾಯ ಗೌಡ ಪಾಟೀಲ,ಶಿವೂರ ಸಿದ್ದಣಗೌಡ ಪಾಟೀಲ ಭಾಸಗಿ, ಬೀರಪ್ಪ ಪೂಜಾರಿ ಇದ್ದರು. ಶಿಬಿರದ ಆಯೋಜಕ ಡಾ| ಸುಭಾಷ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.
ಫರಹಾತಾಬದ್‌ದಲ್ಲಿ ನಡೆದ ಶಿಬಿರಕ್ಕೆ ಪಿಎಸ್‌ಐ ಯಶೋಧಾ ಕಟಕೆ ಅವರು ತಮ್ಮ ರಕ್ತದೊತ್ತಡ ತಪಾಸಣೆ ಮಾಡುವ ಮೂಲಕ ಚಾಲನೆ ನೀಡಿದರು. ಡಾ| ಪ್ರಭಾಕರ ಗೋಕಲೆ, ಡಾ| ಚೇತನ ಸಿಂಗೆ ಇತರರು ತಪಾಸಣೆ ನಡೆಸಿದರು. ಸಿದ್ದು ತಳವಾರ,ಸಂತೋಷ ತಳವಾರ, ಅಹ್ಮದ ಇರ್ಫಾನ್ ಸೇರಿದಂತೆ ಮುಂತಾದವರಿದ್ದರು.
ಇಷ್ಟು ದಿನ ಹೇಗೋ ದಿನಗಳನ್ನು ಕಳೆಯಲಾಗಿದೆ. ಆದರೆ ಈಗ ಸಾಮಾಜಿಕವಾಗಿ ಕೈಲಾದಷ್ಟು ಸೇವೆ ಸಲ್ಲಿಸಬೇಕೆಂಬ ಹಂಬಲದಿಂದ ಉಚಿತ ಆರೋಗ್ಯ ಶಿಬಿರ ಸೇರಿದಂತೆ ಇತರ ನಿಟ್ಟಿನ ಕಾರ್ಯಕ್ರಮಗಳಿಗೆ ಮುಂದಾಗಲಾಗಿದೆ. ಇದನ್ನು ಮುಂದುವರೆಸಿಕೊಂಡು ಬರಲಾಗುವುದು.
– ಡಾ| ಸುಭಾಷ ಟಿ. ಪಾಟೀಲ್, ವೈದ್ಯರು