ಬೆಂಗಳೂರು: ಕೋವಿಡ್ 3ನೇ ಅಲೆ ವ್ಯಾಪಕವಾಗಿ ಎಲ್ಲೆಡೆ ಹರಡುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲರೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಖ್ಯಾತ ವೈದ್ಯ ಡಾ: ಎಚ್ ಎಂ ಪ್ರಸನ್ನ ಹೇಳಿದರು.
ಇಂದು (ಆ.08) ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್ ನ ಭೋವಿ ಪಾಳ್ಯದ ಸರ್ಕಾರಿ ಶಾಲೆಯಲ್ಲಿ ಇಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದಕೆ ಗೋಪಾಲಯ್ಯ ನವರ ಮಾರ್ಗದರ್ಶನ ದಲ್ಲಿ ರೋಟರ್ಯಾಕ್ಟ್ ಬೆಂಗಳೂರು ಪಶ್ಚಿಮ, ಸಹಯೋಗದಲ್ಲಿ ಡಾ, ಎಚ್ ಎಂ ಪ್ರಸನ್ನ ಫೌಂಡೇಶನ್ ಮತ್ತು ಪ್ರಿಸ್ಟಿನ್ ಆಸ್ಪತ್ರೆ ಬೆಂಗಳೂರು ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಕ್ಷೇತ್ರದ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರ ನೇತೃತ್ವದಲ್ಲಿ ಎರಡನೇ ಅಲೆಯನ್ನು ಸಮರ್ಪಕವಾಗಿ ಎದುರಿಸಿದ್ದು, ಎಲ್ಲ ರೀತಿಯ ಸುಸಜ್ಜಿತ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ,ಥೈರಾಯ್ಡ್ ಪ್ರೊಫೈಲ್,ಮೂತ್ರ ಪಿಂಡ ಕಾರ್ಯ ಚಿಕಿತ್ಸೆ, ಇಸಿಜಿ, ಸ್ತ್ರೀ ರೋಗ ಹಾಗೂ ಮೂಳೆ ಎಲುಬು ಕೀಲು ಚಿಕಿತ್ಸೆಗಳ ಬಗ್ಗೆ ನುರಿತ ತಜ್ಞ ವೈದ್ಯರ ತಂಡದಿಂದ ಉಚಿತ ಸಲಹೆ ಹಾಗೂ ಚಿಕಿತ್ಸೆ ಪಡೆಯುವುದು ಜೊತೆಗೆ ಅಗತ್ಯವಿರುವ ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಶಸ್ತ್ರ ಚಿಕಿತ್ಸೆ ಸೇರಿದಂತೆ ಹತ್ತು ಹಲವು ಉಚಿತ ತಪಾಸಣೆಗಳನ್ನು ಏರ್ಪಡಿಸಲಾಗಿತ್ತು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ ನೂರಾರು ಶಿಬಿರಾರ್ಥಿಗಳು ಉಚಿತವಾಗಿ ಚಿಕಿತ್ಸೆ ಪಡೆದರು.
ಈ ಸಂದರ್ಭದಲ್ಲಿ ರೋಟರ್ಯಾಕ್ಟ್ ಪಶ್ಚಿಮ ಅಧ್ಯಕ್ಷೆ ದಿಯಾ ಬಂಗೇರ, ಬಿಜೆಪಿ ಮುಖಂಡರಾದ ಶಿವಾನಂದ ಮೂರ್ತಿ, ಎಚ್, ಹೇಮಂತ್ ಕುಮಾರ್, ಬಾಲಕೃಷ್ಣ,ಪ್ರಸನ್ನ ಕುಮಾರ್, ಮಹಿಳಾ ಮೋರ್ಚಾ ಮುಖಂಡರಾದ ರಾಧಮ್ಮ, ಯುವ ಮುಖಂಡರಾದ ಕೆಂಪರಾಜು, ಭರತ್ ಕುಮಾರ್ ಹಾಗೂ ರೋಟರಿ ಸಂಸ್ಥೆ ಹಾಗೂ ಎಚ್ ಎಂ ಪ್ರಸನ್ನ ಫೌಂಡೇಶನ್ ನ ಡಾ, ಅನಿಲ್ ಕುಮಾರ್, ಸಹನಾ, ಸೇರಿದಂತೆ ಪದಾಧಿಕಾರಿಗಳು ಹಾಗೂ ಹಲವರು ಉಪಸ್ಥಿತರಿದ್ದರು.