Advertisement

ಚಿನ್ನಾಭರಣ ಧರಿಸುವುದು ಸೌಂದರ್ಯಕ್ಕೆ ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಸಹಕಾರಿ..!

04:08 PM Sep 12, 2022 | ಕಾವ್ಯಶ್ರೀ |

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಾಭರಣಗಳಿಗೆ ವಿಶೇಷವಾದ ಮಹತ್ವವಿದೆ. ಪೂಜೆ, ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣಗಳನ್ನು ಹೆಚ್ಚು ಬಳಸಲಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಚಿನ್ನದ ಆಭರಣಗಳ ಬಗ್ಗೆ ವಿಶೇಷ ಆಸಕ್ತಿ ಇರುತ್ತದೆ. ಭಾರತೀಯ ಮಹಿಳೆಯರು ತಮ್ಮ ಆಭರಣಗಳೊಂದಿಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿರುತ್ತಾರೆ. ಚಿನ್ನದ ಕಿವಿಯೋಲೆಗಳು, ನೆಕ್ಲೆಸ್ ಗಳು, ಚಿನ್ನದ ಸರ ಅಥವಾ ಬಳೆಗಳು… ಹೀಗೆ ವಿವಿಧ ವಿನ್ಯಾಸಗಳಲ್ಲಿ ಮಾಡಿದ ಚಿನ್ನದ ಆಭರಣಗಳನ್ನು ಧರಿಸುವುದೆಂದರೆ ಮಹಿಳೆಯರಿಗೆ ಅಚ್ಚುಮೆಚ್ಚು.

Advertisement

ಚಿನ್ನ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದ್ದರೂ, ಚಿನ್ನವು ಅಂತರರಾಷ್ಟ್ರೀಯ ಹಣದ ಮಾರುಕಟ್ಟೆಯಲ್ಲಿ ವಿದೇಶಿ ವಿನಿಮಯಕ್ಕಾಗಿ ಬಳಸಬಹುದಾದ ಲೋಹ. ಬೆಳ್ಳಿ, ಪ್ಲಾಟಿನಂ, ವಜ್ರ ಹೀಗೆ ಮೊದಲಾದ ಆಭರಣಗಳನ್ನು ತಯಾರಿಸಬಹುದಾದರೂ ಚಿನ್ನಕ್ಕೆ ಅನಾದಿ ಕಾಲದಿಂದ ಇಂದಿನವರೆಗೂ ಅದರದ್ದೇ ಆದ ಪ್ರಾಶಸ್ತ್ಯವಿದೆ.

ಚಿನ್ನಾಭರಣವನ್ನು ಪುರಾತನ ಕಾಲದಿಂದಲೂ ಮಹಿಳೆಯರು ಹೆಚ್ಚಾಗಿ ಬಳಸಿಕೊಂಡು ಬರುತ್ತಿದ್ದಾರೆ. ತಮ್ಮ ಪ್ರತಿಯೊಂದು ಆಭರಣದೊಂದಿಗೆ ಮಹಿಳೆಯರು ಭಾವನಾತ್ಮಕವಾಗಿ ಬೆಸೆದಿರುತ್ತಾರೆ. ಚಿನ್ನಾಭರಣ ಧರಿಸಿದರೆ ಮಹಿಳೆಯರ ಸೌಂದರ್ಯ ಕೂಡಾ ವೃದ್ದಿಯಾಗುತ್ತದೆ. ಆದರೆ ಚಿನ್ನಾಭರಣ ಮಹಿಳೆಯರ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೇ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ.

ಚಿನ್ನದ ಆಭರಣಗಳನ್ನು ಧರಿಸುವುದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಚಿನ್ನದ ಆಭರಣಗಳನ್ನು ಧರಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಏನು ಎಂಬುದನ್ನು ತಿಳಿಯೋಣ.

ರೋಗ ನಿರೋಧಕ ಶಕ್ತಿ ಹೆಚ್ಚಳ: ಶುದ್ಧವಾದ ಚಿನ್ನದ ಆಭರಣಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಗಾಯಗಳಿಗೆ ಚಿಕಿತ್ಸೆ ನೀಡಲು ಚಿನ್ನವನ್ನು ಸಹ ಬಳಸಲಾಗುತ್ತದೆ. ಗಾಯಕ್ಕೆ ಚಿನ್ನವನ್ನು ಹಚ್ಚಿದಾಗ, ಅದು ಸೋಂಕನ್ನು ತಡೆಯುತ್ತದೆ ಮತ್ತು ಸರಿಯಾಗಿ ಚಿಕಿತ್ಸೆ ನೀಡುತ್ತದೆ.

Advertisement

ತ್ವಚೆಗೆ ತುಂಬಾ ಪ್ರಯೋಜನಕಾರಿ: ದೇಹದ ಉಷ್ಣತೆಯನ್ನು ನಿಯಂತ್ರಿಸಲು ಕೂಡಾ ಚಿನ್ನ ಸಹಾಯ ಮಾಡುತ್ತದೆ. ಇದು ತಾಪಮಾನದ ಕಾರಣದಿಂದಾಗಿ ತುಂಬಾ ಶೀತವನ್ನು ಅನುಭವಿಸುವುದು ಅಥವಾ ಹಠಾತ್ ಜ್ವರದ ಶಾಖವನ್ನು ಅನುಭವಿಸುವುದು ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

24 ಕ್ಯಾರೆಟ್ ಚಿನ್ನವು ಚರ್ಮದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಚಿನ್ನವು ದೇಹದ ಜೀವಕೋಶಗಳನ್ನು ಪುನರುತ್ಪಾದಿಸುವಲ್ಲಿಯೂ ಸಹಾಯ ಮಾಡುತ್ತದೆ. ಅಲ್ಲದೆ, ಚಿನ್ನವನ್ನು ಅನೇಕ ತ್ವಚೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಎಸ್ಜಿಮಾ, ಶಿಲೀಂಧ್ರ ಸೋಂಕುಗಳು, ದದ್ದು, ಗಾಯಗಳು, ಕಿರಿಕಿರಿ ಮುಂತಾದ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಚಿನ್ನವನ್ನು ಬಳಸಲಾಗುತ್ತದೆ.

ದೌರ್ಬಲ್ಯ ಸಮಸ್ಯೆ: ಯಾರಿಗೆ ಆಯಾಸ, ದೌರ್ಬಲ್ಯ ಮತ್ತು ರಕ್ತಹೀನತೆಯ ಸಮಸ್ಯೆಗಳಿರುತ್ತವೆಯೋ, ಅವರು ಚಿನ್ನದ ಆಭರಣಗಳನ್ನು ಧರಿಸಬಹುದು. ಚಿನ್ನದ ಆಭರಣಗಳನ್ನು ಧರಿಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಚಿನ್ನದ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ ಮತ್ತು ತೂಕ ಹೆಚ್ಚಾಗಲು ಸಹಾಯ ಮಾಡುತ್ತದೆ.

ಕಿವಿಯೋಲೆ: ಚಿನ್ನದ ಕಿವಿಯೋಲೆ ಧರಿಸುವುದರಿಂದ ಮಹಿಳೆಯರಿಗೆ ಸ್ತ್ರೀ ರೋಗಗಳಿಗೆ ಪರಿಹಾರ ಸಿಗುತ್ತದೆ. ಪುರುಷರು ಕೂಡಾ ಸಣ್ಣ ಕಿವಿಯೋಲೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಕಿವಿಯಲ್ಲಿ ಆಭರಣಗಳನ್ನು ಧರಿಸುವುದರಿಂದ ಕಿವಿಯ ಸೋಂಕುಗಳ ಅಪಾಯ ಕಡಿಮೆಯಾಗುತ್ತದೆ. ಕಿವಿ ಚುಚ್ಚಿದರೆ ಪುಟ್ಟ ಮಕ್ಕಳ ಹಠ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಕಿವಿಗೆ ಆಭರಣ ಧರಿಸುವುದರಿಂದ ಕಿವಿ ರೋಗಗಳು, ಖಿನ್ನತೆ ಮತ್ತು ಒತ್ತಡದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಮಾನಸಿಕ ಆರೋಗ್ಯವನ್ನು ಕೂಡಾ ಸುಧಾರಿಸುತ್ತದೆ.

ತೋರು ಬೆರಳಿಗೆ ಚಿನ್ನ ಧರಿಸುವುದರಿಂದ ಮನಸ್ಸಿನ ಏಕಾಗ್ರತೆಯೂ ಹೆಚ್ಚುತ್ತದೆ. ಚಿನ್ನದ ಬಳಕೆಯು ಮಾದಕ ವ್ಯಸನವನ್ನು ತೊಡೆದುಹಾಕಲು ಸಹ ಸಹಾಯ ಮಾಡುತ್ತದೆ. ಮಾದಕ ವ್ಯಸನವನ್ನು ಕಡಿಮೆ ಮಾಡಲು ಚಿನ್ನವನ್ನು ಔಷಧಿಗಳಲ್ಲಿ ಬಳಸಲಾಗುತ್ತದೆ.

ಋತುಬಂಧಕ್ಕೆ ಒಳಗಾಗುವ ಮಹಿಳೆಯರಿಗೆ ಚಿನ್ನದ ಆಭರಣಗಳನ್ನು ಧರಿಸುವುದು ತುಂಬಾ ಪ್ರಯೋಜನಕಾರಿ. ಆ  ದಿನಗಳಲ್ಲಿ ಸಂಭವಿಸುವ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.

ಶುದ್ಧ ಚಿನ್ನದಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ ಎಂದು ಕೆಲವು ಅಧ್ಯಯನಗಳು ಧೃಡಪಡಿಸಿದೆ. ಅಕ್ಯುಪಂಕ್ಚರ್ ತಜ್ಞರು ನೋವನ್ನು ಕಡಿಮೆ ಮಾಡಲು ಚಿನ್ನದ ತುದಿಯ ಸೂಜಿಗಳನ್ನು ಸಹ ಬಳಸುತ್ತಾರೆ. ಇದಕ್ಕಾಗಿ ಸಾಕಷ್ಟು ಆಭರಣಗಳನ್ನು ಧರಿಸಬೇಕು ಎಂದಲ್ಲ, ನಿತ್ಯ ಜೀವನದಲ್ಲಿ ಕಿವಿಯೋಲೆಗಳು, ಉಂಗುರಗಳು ಇತ್ಯಾದಿ ಆಭರಣಗಳನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next