Advertisement

“ಆರೋಗ್ಯ ಜಾಗೃತಿ ನಮ್ಮಿಂದಲೇ ಆಗಲಿ’

11:31 AM Apr 12, 2020 | sudhir |

ಉಪ್ಪುಂದ: ಪೊಲೀಸರು, ವೈದ್ಯರು ಸಾರ್ವಜನಿಕರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಜಾಗೃತಿ ನಮ್ಮಿಂದಲೇ ಆಗಬೇಕಿದೆ ಎಂದು ಬೈಂದೂರು ಪೊಲೀಸ್‌ ಠಾಣಾಧಿಕಾರಿ ಸಂಗೀತಾ ಹೇಳಿದರು.

Advertisement

ಅವರು ಲಯನ್ಸ್‌ ಕ್ಲಬ್‌ ಬೈಂದೂರು -ಉಪ್ಪುಂದ ಹಾಗೂ ರೋಟರಿ ಮಿಡ್ಲ್ ಟೋನ್‌ ಕುಂದಾಪುರ, ಕೊಕ್ಕೇಶ್ವರೀ ಭಜನ ಮಂಡಳಿ ವತಿಯಿಂದ ಹಳಗೇರಿಯ ನಿವಾಸಿಗಳಿಗೆ ನೀಡಲಾದ ಆಹಾರದ ಕಿಟ್‌ಗಳನ್ನು ಹಸ್ತಾಂತರಿಸಿ ಮಾತನಾಡಿದರು. ಹಳಗೇರಿ ಹಾಗೂ ಸುತ್ತುಮುತ್ತಲಿನ ಪ್ರದೇಶ ಸುಮಾರು 60 ಬಡ ಮಹಿಳೆಯರಿಗೆ 60 ಸಾವಿರ ರೂ. ಮೌಲ್ಯದ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪ್ರಭಾಕರ ಶೆಟ್ಟಿ, ರೋಟರಿ ಮಿಡ್ಲ್ ಟೋನ್‌ ಕುಂದಾಪುರ ಅಧ್ಯಕ್ಷ ನಳಿನ್‌ ಕುಮಾರ್‌ ಶೆಟ್ಟಿ, ಲಯನ್ಸ್‌ ಕ್ಲಬ್‌ ಕೋಶಾಧಿಕಾರಿ ಸುನೀಲ್‌ ಪೂಜಾರಿ, ಜಯಶೀಲ ಶೆಟ್ಟಿ, ಗೋಪಾಲ ಶೆಟ್ಟಿ, ರಾಜೇಂದ್ರ ಹಳಗೇರಿ, ರವಿರಾಜ್‌ ಶೆಟ್ಟಿ, ರಾಮಕೃಷ್ಣ ಕಾರಂತ ಉಪಸ್ಥಿತರಿದ್ದರು. ಶಿಕ್ಷಕ ವಿಶ್ವನಾಥ ಶೆಟ್ಟಿ ಸ್ವಾಗತಿಸಿ, ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next