Advertisement

ಕರಾವಳಿ ಫಾರ್ಮಸಿ ಕಾಲೇಜಿನಿಂದ ಆರೋಗ್ಯ ಜನ ಜಾಗೃತಿ ಜಾಥಾ

11:19 AM Nov 18, 2017 | |

ಮಹಾನಗರ: ಉತ್ತಮ ಆರೋಗ್ಯಕಾಗಿ ಆರೋಗ್ಯ ಸಂರಕ್ಷಣೆಯ ಸೂತ್ರಗಳನ್ನು ಪರಿಪಾಲಿಸಬೇಕು. ಕೇವಲ ದೈಹಿಕ ಸ್ಥಿತಿ ಉತ್ತಮವಾಗಿರುವುದನ್ನು ಮಾತ್ರ ಆರೋಗ್ಯವೆಂದು ಭಾವಿಸುವುದು ತಪ್ಪು. ದೈಹಿಕವಾಗಿ ಸದೃಢವಾಗಬೇಕಾದರೆ ಮಾನಸಿಕ ಮತ್ತು ಬೌದ್ಧಿಕವಾಗಿ ಆರೋಗ್ಯದಿಂದಿರುವುದು ಮುಖ್ಯ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಹಾಗೂ ಜಿ. ಆರ್‌. ಎಜುಕೇಶನ್‌ ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಎಸ್‌. ಗಣೇಶ್‌ ರಾವ್‌ ಹೇಳಿದರು.

Advertisement

ಅವರು ನಗರದ ಕರಾವಳಿ ಫಾರ್ಮಸಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಫಾರ್ಮಸಿ ಸಪ್ತಾಹದ ಅಂಗವಾಗಿ ಮಂಗಳೂರಿನ ಜ್ಯೋತಿ ವೃತ್ತದಿಂದ ನೆಹರೂ ಮೈದಾನದ ತನಕ ಏರ್ಪಡಿಸಲಾದ ಆರೋಗ್ಯ ಜನ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ವೈಯಕ್ತಿಕ ಆರೋಗ್ಯದ ಕಡೆಗೆ ಗಮನ ಹರಿಸುವುದರ ಜತೆಗೆ ಸಾರ್ವತ್ರಿಕ, ಸಾಮಾಜಿಕ ಆರೋಗ್ಯದ ಕಡೆಗೂ ಗಮನಹರಿಸಬೇಕು. ಅನೇಕ ಉತ್ತಮ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ, ತಿಳಿವಳಿಕೆ ಪಡೆದುಕೊಂಡು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ಔಷಧಗಳ ಬಗ್ಗೆಯೂ ಮಾಹಿತಿ ಪಡೆದು ಕೊಂಡಿರಬೇಕು ಎಂದು ಹೇಳಿದರು. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ| ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ಶಬ್ನಮ್‌ ಸ್ವಾಗತಿಸಿದರು. ಸಲ್ಮಾನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next