Advertisement
ಹಣ -ಆಸ್ತಿ ಸಂಪಾದನೆ, ಉಳಿತಾಯ ಮುಂತಾದ ವಿಚಾರಗಳತ್ತ ಗಮನ ಹರಿಸುವಂತೆಯೇ, ಆರೋಗ್ಯದತ್ತಲೂ ಗಮನ ಹರಿಸುವುದರಿಂದ, ಆರ್ಥಿಕ ಸಮಸ್ಯೆಗಳೂ ಪರಿಹಾರ ಕಾಣುತ್ತವೆ. ಭಾರತದ ಪಾರಂಪರಿಕ ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳು ವುದರಿಂದ, ಆರೋಗ್ಯ ಸಮಸ್ಯೆಗಳು ದೂರವಾಗು ತ್ತವೆ. ಜೊತೆಗೆ, ದೇಹ- ಮನಸ್ಸೂ ಸುಸ್ಥಿತಿಯಲ್ಲಿರುತ್ತದೆ. ಪ್ರಾಕೃತಿಕ ಆರೋಗ್ಯ ವನ್ನು ದಯಪಾಲಿಸುವ ಆಯುರ್ವೇದ ಕೇಂದ್ರಗಳಲ್ಲಿ ಮೈಸೂರಿನ ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಯೂ ಒಂದು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಆಸ್ಪತ್ರೆ, ದಶಕಗಳಿಂದ ಕಾರ್ಯಾಚರಿಸುತ್ತಿದೆ. ಸಂಶೋಧನೆಗಳನ್ನೂ ಕೈಗೊಳ್ಳುತ್ತಾ, ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಚಿಕಿತ್ಸೆ ನೀಡುವುದು ಸಂಸ್ಥೆಯ ವೈಶಿಷ್ಟ್ಯ. ಆಯುರ್ವೇದದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಂಸ್ಥೆ ನಿರತವಾಗಿದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಕಾಯಿಲೆಗಳಿಂದ ಪಾರಾಗುವ ಅತ್ಯುತ್ತಮ ವಿಧಾನ. ವೈರಲ್ ಸೋಂಕುಗಳು ವರ್ಷದಲ್ಲಿ ಒಂದು ನಿರ್ದಿಷ್ಟ
ಕಾಲದಲ್ಲಿ ಮಾತ್ರವೇ ಕ್ರಿಯಾಶೀಲವಾಗಿರುತ್ತದೆ. ಆ ಕಾಲ ವೈರಾಣುಗಳ ಪ್ರಸರಣಕ್ಕೆ ಹೇಳಿ ಮಾಡಿಸಿದಂತಿರುತ್ತದೆ, ಆ ಕಾಲದಲ್ಲಿ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭಗಳಲ್ಲಿ ಆಯುರ್ವೇದ ಸಲಹೆಗಳಿಗೆ ಮೊರೆ ಹೋಗುವುದರಿಂದ, ಪ್ರಾಕೃತಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ಬೇವಿನ ಎಲೆ, ಕರ್ಪೂರ ಮತ್ತಿತರ ಪ್ರಾಕೃತಿಕ ವಸ್ತುಗಳಿಗೆ ಬೆಂಕಿಯ ಸ್ಪರ್ಶ ನೀಡಿ, ಧೂಮ
ಹಬ್ಬಿಸಿಯೂ ರಕ್ಷಣೆ ಪಡೆಯಬಹುದಾಗಿದೆ. ಈ ರೀತಿಯ ಹಲವು ಮಾರ್ಗಗಳು ಆರ್ಯುವೇದದಲ್ಲಿ ಲಭ್ಯ.