Advertisement
ಅರಿವಳಿಕೆಯ ವಿಕಾಸ
Related Articles
Advertisement
1901: ಫ್ರಾನ್ಸ್‌ನ ಡಾ| ಜೀನ್ ಆ್ಯಂಟನೀಸ್ ಸಿಕಾರ್ಡ್ ಮತ್ತು ಡಾ| ಫರ್ಡಿನಂಡ್ ಕ್ಯಾಥಲಿನ್ ಅವರು ಕಾಡಲ್ ಎಪಿಡ್ನೂರಲ್ ಅನಲ್ಜೇಸಿಯಾವನ್ನು ಸ್ವತಂತ್ರವಾಗಿ ವಿವರಿಸಿದರು.
1914: ಡಾ| ಡೆನಿಸ್ ಇ. ಜಾಕ್ಸನ್ ಅವರು ಕಾರ್ಬನ್ ಡಯಾಕ್ಸೈಡ್(ಇO2) ಹೀರುವಿಕೆ ಸಹಿತ ಅರಿವಳಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಇದರಲ್ಲಿ ರೋಗಿಯು ಉಸಿರಿನ ಮೂಲಕ ಹೊರಬಿಟ್ಟ ಅನಸ್ಥೆಟಿಕ್ ಹೊಂದಿರುವ ಗಾಳಿ ಯನ್ನು ಕಾರ್ಬನ್ ಡಯಾಕ್ಸೈಡ್ರಹಿತಗೊಳಿಸಿ ಮರಳಿ ಉಸಿರಾಡುವಂತೆ ಮಾಡಲಾಗುತ್ತಿತ್ತು, ಇದರಿಂದಾಗಿ ಕಡಿಮೆ ಅನಸ್ಥೆಟಿಕ್ ಸಾಕಾಗುತ್ತಿತ್ತು ಮತ್ತು ವ್ಯರ್ಥವಾಗುವುದು ತಪ್ಪುತ್ತಿತ್ತು.
1923: ಡಾ| ಇಸಾಬೆಲ್ಲಾ ಹರ್ಬ್ ಅವರು ಇಥಿಲೀನ್-ಆಕ್ಸಿಜನ್ ಶಸ್ತ್ರಚಿಕಿತ್ಸಾತ್ಮಕ ಅನಸ್ಥೆಟಿಕ್ ಅನ್ನು ಪ್ರಯೋಗಿಸಿದರು. ಮನುಷ್ಯರಲ್ಲಿ ಕಡಿಮೆ ಡೋಸ್‌ನ ಇಥಿಲೀನ್ ಉಂಟುಮಾಡಬಹುದಾದ ಗಮನಾರ್ಹ ಶುಷುಪ್ತಿ ಸದೃಶ ಸ್ಥಿತಿಯನ್ನು ಆಕೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು.
1941: ಡಾ| ರಾಬರ್ಟ್ ಹಿಂಗ್‌ಸನ್ ಅವರು ಕಂಟೀನ್ಯುಯಸ್ ಕಾಡಲ್ ಅನಸ್ಥೇಶಿಯಾವನ್ನು ಅಭಿವೃದ್ಧಿಪಡಿಸಿದರು. ದೀರ್ಘ ಸಮಯದ ಅಥವಾ ಕಷ್ಟಕರವಾದ ಪ್ರಸೂತಿಯ ಸಂದರ್ಭದಲ್ಲಿ ನೋವಿನಿಂದ ನಿರಂತರ ಮುಕ್ತಿಯನ್ನು ಒದಗಿಸುವ ಪ್ರಸೂತಿಶಾಸ್ತ್ರೀಯ ಅರಿವಳಿಕೆಯ ಆವಿಷ್ಕಾರ ಇದಾಗಿತ್ತು.
1942: ಸ್ಕ್ವಿಬ್‌ನ ಲೆವಿಸ್ ಎಚ್. ರೈಟ್ ಅವರು ಫಾರ್ಮಸುಟಿಕಲ್ ದರ್ಜೆಯ ಕ್ಯುರೇರ್ ಅನ್ನು ಡಾ| ಗ್ರಿಫಿತ್ ಮತ್ತು ಡಾ| ಜಾನ್ಸನ್ ಅವರಿಗೆ ಸರಬರಾಜು ಮಾಡಿದರು. ಇದನ್ನು ಜಗತ್ತಿನ ಮೊತ್ತಮೊದಲ ಯಶಸ್ವಿ ಸ್ನಾಯು ರಿಲ್ಯಾಕ್ಸೆಂಟ್ ಆಗಿ ಉಪಯೋಗಿಸಲಾಯಿತು.
1956: ಯುನೈಟೆಡ್ ಕಿಂಗ್‌ಡಮ್‌ನ ಮೈಕೆಲ್ ಜಾನ್ ಸ್ಟನ್ ಅವರು ಹ್ಯಾಲೊಥೇನ್ ಅನ್ನು ವೈದ್ಯಕೀಯವಾಗಿ ಪರಿಚಯಿಸಿದರು. ಇದು ಆಧುನಿಕ ಕಾಲದ ಮೊದಲ ಬ್ರೋಮಿನ್ ಯುಕ್ತ ಸಂಪೂರ್ಣ ಅರಿವಳಿಕೆಯಾಗಿದೆ.
1960: ಡಾ| ಜೋಸೆಫ್ ಆರ್ಟುಸಿಯೊ, ಡಾ| ಅಲನ್ ವಾನ್ ಪೊನಕ್ ಉಸಿರಾಟದ ಮೂಲಕ ನೀಡಬಲ್ಲಂತಹ ಅರಿವಳಿಕೆ ದ್ರವ್ಯ ಮೆಥೊಕ್ಸಿಫ್ಲುರೇನ್‌ನ್ನು ಮಾನವರ ಮೇಲೆ ಪ್ರಯೋಗ ಆರಂಭಿಸಿದರು.
1964: ಡಾ| ಗುಂಥರ್ ಕೋರ್ಸೆನ್ ಅವರು ಡಿಸೊಸೇಟಿವ್ ಇಂಟ್ರಾವೇನಸ್ ಅರಿವಳಿಕೆ ಕೆಟಾಮಿನ್‌ನ್ನು ಮಾನವರ ಮೇಲೆ ಪ್ರಯೋಗ ಆರಂಭಿಸಿದರು.
1966: ಡಾ| ರಾಬರ್ಟ್ ವರ್ಚ್ಯೂ ಅವರು ಉಸಿರಾಟದ ಮೂಲಕ ನೀಡಬಲ್ಲಂತಹ ಅರಿವಳಿಕೆ ಎನ್‌ಫ್ಲುರೇನ್ ನ್ನು ಮನುಷ್ಯರ ಮೇಲೆ ಪ್ರಯೋಗ ಆರಂಭಿಸಿದರು.
1972: ಐಸೊಫ್ಲುರೇನ್ ನ್ನು ಉಸಿರಾಟದ ಮೂಲಕ ನೀಡುವ ಅರಿವಳಿಕೆ ದ್ರವ್ಯವಾಗಿ ವೈದ್ಯಕೀಯವಾಗಿ ಪರಿಚಯಿಸಲಾಯಿತು.
1992: ಉಸಿರಾಟದ ಮೂಲಕ ನೀಡುವ ಅರಿವಳಿಕೆ ದ್ರವ್ಯವಾಗಿ ಡೆಸ್‌ಫ್ಲುರೇನ್ ನ್ನು ವೈದ್ಯಕೀಯವಾಗಿ ಪರಿಚಯಿಸಲಾಯಿತು.
1994: ಉಸಿರಾಟದ ಮೂಲಕ ನೀಡುವ ಅರಿವಳಿಕೆ ದ್ರವ್ಯವಾಗಿ ಸೆವೊಫ್ಲುರೇನ್ ನ್ನು ವೈದ್ಯಕೀಯವಾಗಿ ಪರಿಚಯಿಸಲಾಯಿತು.
- ಆಧುನಿಕ ಅರಿವಳಿಕೆ ಯಂತ್ರವು ಒಂದು ಸಂಕೀರ್ಣ ಉಪಕರಣವಾಗಿದ್ದು, ಉಸಿರಾಟದ ಮೂಲಕ ನೀಡುವ ಅರಿವಳಿಕೆ ದ್ರವ್ಯಗಳನ್ನು ಒದಗಿಸುವುದಕ್ಕೆ ಬೇಕಾದ ವೆಂಟಿಲೇಟರ್‌ನ್ನು ಕೂಡ ಒಳಗೊಂಡಿರುತ್ತದೆ.
- ಇದು ರೋಗಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಒದಗಣೆ ಮತ್ತು ಗಾಳಿಯಾಟವನ್ನು ಖಾತರಿಪಡಿಸುವುದಷ್ಟೇ ಅಲ್ಲದೆ ಅರಿವಳಿಕೆ ಅನಿಲಗಳ ನಿಖರ ಮಿಶ್ರಣವನ್ನು ಹಾಗೂ ಅವು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕಾರ್ಯನಿರತರಾಗಿರುವ ಸಿಬಂದಿ ಈ ಅರಿವಳಿಕೆ ಅನಿಲಗಳಿಗೆ ಒಡ್ಡಿಕೊಳ್ಳುವುದು ಅತೀ ಕನಿಷ್ಠ ಪ್ರಮಾಣದಲ್ಲಿ ಇರುವಂತೆ ಮಾಡುತ್ತವೆ.