Advertisement
ತಲೆಬುರುಡೆ ಮುರಿತದ ಚಿಹ್ನೆಗಳಲ್ಲಿ ಇವು ಒಳಗೊಂಡಿರಬಹುದು:
– ಮಿದುಳು ದ್ರವ ಸೋರಿಕೆ (ಶುದ್ಧ ದ್ರವ ಮೂಗು, ಬಾಯಿ ಅಥವಾ ಕಿವಿಯಿಂದ ಸೋರುವುದು) ಉಂಟಾಗಬಹುದು ಮತ್ತು ಇದು ಬೇಸಿಲಾರ್ ತಲೆಬುರುಡೆ ಮುರಿತ ಹಆಗೂ ಮಿದುಳಿನ ಸುತ್ತಲಿನ ಪದರಗಳು ಹರಿದಿರುವುದರ ಚಿಹ್ನೆಯಾಗಿರಬಹುದು, ಇದರಿಂದ ಮಿದುಳಿನ ದ್ವಿತೀಯಕ ಸೋಂಕು ಉಂಟಾಗಬಹುದು.
– ತಲೆ ಅಥವಾ ಮುಖದಲ್ಲಿ ಮೇಲ್ನೋಟಕ್ಕೆ ಕಾಣುವ ಗಾಯ/ವೈಕಲ್ಯ/ಜಜ್ಜುವಿಕೆ
– ಅತ್ತಿತ್ತ ಚಲಿಸಲಾಗದ ಒಂದು ಕಣ್ಣು ಅಥವಾ ಒಂದು ಕಡೆಗೆ ವಾಲಿರುವ ಕಣ್ಣು ಮುಖದ ಎಲುಬು ಮುರಿದಿದೆ ಮತ್ತು ಕಣ್ಣಿನ ನರಗಳನ್ನು ಸಂವೇದಿಸುವ ಒಂದು ನರವನ್ನು ಚುಚ್ಚುತ್ತಿದೆ ಎಂಬುದನ್ನು ಸೂಚಿಸುತ್ತದೆ.
– ತಲೆಬುರುಡೆಯ ಚರ್ಮ ಅಥವಾ ಮುಖದಲ್ಲಿ ಗಾಯ ಅಥವಾ ತರಚಿದ ಗಾಯಗಳು.
– ತಲೆಬುರುಡೆಯ ಅಡಿಪಾಯದಲ್ಲಿ ಉಂಟಾಗುವ ಗಾಯಗಳು -ಬೇಸಿಲಾರ್ ಸ್ಕಲ್ ಮುರಿತಗಳು ಬ್ಯಾಟಲ್ಸ್ ಚಿಹ್ನೆಗೆ ಸಂಬಂಧಿಸಿರುತ್ತವೆ – ಇದು ಮಾಸ್ಟಾಯಿಡ್, ಹಿಮೊಟೈಂಪಾನಮ್ ಮತ್ತು ಸೆರೆಬೊÅಸ್ಪೈನಲ್ ರಿನೊರಿಯಾ ಮತ್ತು ಒಟೊರಿಯಾ ಆಗಿರುತ್ತವೆ.
ಸಾಮಾನ್ಯ ಚಿಹ್ನೆಗಳು
– ತಲೆನೋವು
– ತಲೆ ಹಗುರವಾಗಿರುವಂತೆ ಭಾಸವಾಗುವುದು
– ತಲೆ ತಿರುಗುವ ಅನುಭವ
– ಲಘುವಾದ ಗೊಂದಲ
– ಹೊಟ್ಟೆ ತೊಳೆಸುವಿಕೆ
– ಕಿವಿಯಲ್ಲಿ ತಾತ್ಕಾಲಿಕ ಗುಂಯ್‌ಗಾಡುವಿಕೆ ತೀವ್ರ ತಲೆಗಾಯದ
ಚಿಹ್ನೆಗಳು
– ಸ್ಮತಿ ತಪ್ಪುವಿಕೆ
– ನಡುಕಗಳು
– ವಾಂತಿ
– ಸಮತೋಲನದ ಅಥವಾ ಸಂಯೋಜನೆಯ ಸಮಸ್ಯೆಗಳು
– ಕಳೆದುಹೋದಂತಹ ವರ್ತನೆ – ಗಂಭೀರವಾಗಿ
– ಕಣ್ಣುಗಳನ್ನು ಕೇಂದ್ರೀಕರಿಸಲು ಅಸಮರ್ಥತೆ
– ಸ್ನಾಯು ನಿಯಂತ್ರಣ ನಷ್ಟ
– ಸತತ ಅಥವಾ ಹೆಚ್ಚುತ್ತಿರುವ ತಲೆನೋವು
– ನೆನಪು ಶಕ್ತಿ ನಷ್ಟ
Related Articles
Advertisement