Advertisement

ಕನ್ನಡ ವಿಭಾಗ ಮುಂಬಯಿ ವಿವಿಯ ಮುಖ್ಯಸ್ಥ ಡಾ|ಉಪಾಧ್ಯರಿಗೆ ಅಭಿನಂದನೆ

04:48 PM Feb 10, 2017 | |

ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರ ಐವತ್ತನೆ ಹುಟ್ಟುಹಬ್ಬವನ್ನು ಫೆ. 7ರಂದು ವಿಭಾಗದ ವಿದ್ಯಾರ್ಥಿ ಮಿತ್ರರು ಆಚರಿಸಿ ಅವರನ್ನು ಅಭಿನಂದಿಸಿ ಗೌರವಿಸಿದರು.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಭಾಗದ ಹಿರಿಯ ವಿದ್ಯಾರ್ಥಿ, ಮರಾಠಿ ಲೇಖಕ, ಅನುವಾದಕ ಅಪರ್ಣಾ ನಾಯಾYಂವಕರ ಅವರು ಪಾಲ್ಗೊಂಡು ಮಾತ ನಾಡಿ, ಡಾ| ಉಪಾಧ್ಯ ಅವರು ನಮಗೆ ಕನ್ನಡ ಕಲಿಸಿದ ಗುರುಗಳು. ಅವರ ಪ್ರೇರಣೆ ಪ್ರೋತ್ಸಾಹದಿಂದ ಕನ್ನಡ – ಮರಾಠಿ ಅನುವಾದ ಕಾರ್ಯದಲ್ಲಿ ನಿರತಳಾಗಿದ್ದೇನೆ. ಕನ್ನಡ ವಿಭಾಗದ ವಿದ್ಯಾರ್ಥಿ ಮಿತ್ರರು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇಲ್ಲಿನ ಗುರುಶಿಷ್ಯರ ಸಂಬಂಧವನ್ನು ಕಂಡು ಸಂತೋಷಪಟ್ಟಿದ್ದೇನೆ. ಮುಂದಿನ ವರ್ಷ ಕನ್ನಡೇತರ ವಿದ್ಯಾರ್ಥಿಗಳೂ ಇದರಲ್ಲಿ ಭಾಗವಹಿಸುವಂತೆ ಮಾಡುವೆ. ವಿಭಾಗದ ಮನೆಯ ವಾತಾವರಣವನ್ನು  ಕಂಡು ಸಂತೋಷವಾಗುತ್ತಿದೆ ಎಂದು ನುಡಿದು, ತಮ್ಮ ಅನುವಾದ ಕಾಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.

ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರು ಮಾತನಾಡಿ,  ನಾನು ವ್ಯಕ್ತಿ ಪೂಜೆಯಲ್ಲಿ ನಂಬಿಕೆ ಇಟ್ಟವನಲ್ಲ. ಹುಟ್ಟು ಹಬ್ಬ ಆಚರಿಸಿಕೊಂಡವನೂ ಅಲ್ಲ. ಇಂದಿನ ಕಾರ್ಯಕ್ರಮ ವಿಭಾಗದ ವಿದ್ಯಾರ್ಥಿ ಮಿತ್ರರ ವಿಶ್ವಾಸದ ಪ್ರತೀಕ. ಇದು ಮುಂಬಯಿ ವಿಶ್ವವಿದ್ಯಾಲಯದ 160ರ  ಸಂಭ್ರಮ. ಕನ್ನಡ ವಿಭಾಗದ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ವಿಭಾಗದ ವಿದ್ಯಾರ್ಥಿ ಮಿತ್ರರು ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿರುವುದು ಸಂತಸದ ಸಂಗತಿ. ವಿದ್ಯಾರ್ಥಿಗಳ ಕ್ರಿಯಾಶೀಲತೆ, ಪ್ರೀತಿ ವಿಶ್ವಾಸಕ್ಕೆ ನಾನು ಮೂಕನಾಗಿದ್ದೇನೆ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವಿಭಾಗದ ಸಂಶೋಧನ ವಿದ್ಯಾರ್ಥಿ ಖಾಜಪ್ಪ ಮದಾಳ ಅವರು ಬರೆದು ಸಲ್ಲಿಸಿದ ಎಂ. ಬಿ .ಕುಕ್ಯಾನ್‌ ಜೀವನ ಸಾಧನೆ ಎಂಬ ಎಂ.ಫಿಲ್‌ ಸಂಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು. ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಶೆಟ್ಟಿ ಅವರು ಇವತ್ತಿನ ಕಾರ್ಯಕ್ರಮಕ್ಕೆ ವಿಶೇಷವಾದ ಮಹತ್ವವಿದೆ. ಮುಂಬಯಿ ವಿಶ್ವವಿದ್ಯಾಲಯ 160ನೇ ವರ್ಷದ ಸಂಭ್ರಮದಲ್ಲಿರುವಾಗಲೇ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರ 50ನೇ ಹುಟ್ಟುಹಬ್ಬದ ಸಂಭ್ರಮ. ಎರಡನ್ನೂ ಜೊತೆಯಾಗಿ ಆಚರಿಸುವ ಸದವಕಾಶ ದೊರೆತಿದೆ. ಕನ್ನಡ ವಿಭಾಗದಲ್ಲಿ ವಿದ್ಯಾರ್ಥಿಗಳ ಪ್ರೀತಿಪಾತ್ರಾರಾದ ಗುರುಗಳ 50ನೇ ಹುಟ್ಟುಹಬ್ಬವನ್ನು ಆಚರಿಸುವ ಭಾಗ್ಯ ವಿದ್ಯಾರ್ಥಿಗಳಾದ ನಮಗೆ ಸಿಕ್ಕಿರುವುದು ನಮ್ಮ ಸುದೈವ. ಇದು ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ, ವಿಸ್ತರಿಸಿದ ಗುರುವಂದನ ಕಾರ್ಯಕ್ರಮ ಎಂದು ನುಡಿದು ಡಾ| ಉಪಾಧ್ಯ ಅವರಿಗೆ ಶುಭ ಹಾರೈಸಿದರು.

ವಿಭಾಗದ ಸಹ ಸಂಶೋಧಕ ಶಿವರಾಜ್‌ ಎಂ. ಜಿ. ಹಾಗೂ ರಮಾ ಉಡುಪ, ಪರೀûಾ ವಿಭಾಗದ  ಹಿರಿಯ ಅಧಿಕಾರಿ ವಿಭಾಗದಿಂದ ಇತ್ತೀಚೆಗೆ ಎಂ.ಫಿಲ್‌ ಪದವಿ ಪಡೆದ ಸುಗಂಥಾ ಸತ್ಯಮೂರ್ತಿ, ಕನ್ನಡ ವಿಭಾಗದ ರೂಪೇಶ್‌, ರಮಾಕಾಂತ್‌ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.  ಕಾರ್ಯಕ್ರಮವನ್ನು ಕನ್ನಡ ವಿಭಾಗದ ವಿದ್ಯಾರ್ಥಿಗಳಾದ  ಸುರೇಖಾ ದೇವಾಡಿಗ, ಗೀತಾ ಆರ್‌. ಎಸ್‌., ಅನಿತಾ ಶೆಟ್ಟಿ, ನಳಿನಾ ಪ್ರಸಾದ್‌, ಜ್ಯೋತಿ ಶೆಟ್ಟಿ, ಕುಮುದಾ ಆಳ್ವ, ಸುರೇಖಾ ಶೆಟ್ಟಿ, ದಿನಕರ ನಂದಿ, ಜಯಕರ ಪಾಲನ್‌ ಮೊದಲಾದವರು ಪಾಲ್ಗೊಂಡಿದ್ದರು. ಹೇಮಾ ಸದಾನಂದ ಅಮೀನ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next