Advertisement
ಅವರು ಸಿಆರ್ ಪಿ ಸೇವೆಯಲ್ಲಿ ಲಿಂಗದಳ್ಳಿ, ಹುಲಿಯಾಪುರ, ಮೆಣೆದಾಳ, ಎಂ. ರಾಂಪೂರ, ಹಿರೇಮುಕರ್ತಿನಾಳ, ಸಂಗನಾಳ, ವೀರಾಪೂರ, ಹಿರೇತೆಮ್ಮಿನಾಳ, ಸಿದ್ದಾಪುರ, ಶಾಲೆಗಳಿಗೆ ಗ್ರಾಮಸ್ಥರ ವಂತಿಗೆ ಹಾಗೂ ಶಿಕ್ಷಕರ ವಂತಿಗೆಯ ಸಹಕಾರದಿಂದ ಸದರಿ ಶಾಲೆಗಳು ಸ್ವಂತ ಸ್ಮಾರ್ಟ್ ಕ್ಲಾಸ್ ಹೊಂದಲು ಪ್ರೇರಣೆಯಾಗಿದ್ದು ಹೊಮ್ಮಿನಾಳ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕಾರ್ಯ ಪ್ರಗತಿಯಲ್ಲಿದೆ.
Related Articles
Advertisement
ಈ ಹಿನ್ನೆಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿಗಾಗಿ ಒಂದು ತಿಂಗಳ ವೇತನ ನೀಡಿದ ಮುಖ್ಯ ಶಿಕ್ಷಕರಾದ ಶರಣಪ್ಪ ತುಮರಿಕೊಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಿನಾಕ್ಷಿ ಉಮೇಶ್ ರಾಠೋಡ್ ಸದಸ್ಯರಾದ ಬಂಗಾರಪ್ಪ ಶಿವಲಿಂಗಪ್ಪ ಪೂಜಾರ್, ದೇವೇಂದ್ರಪ್ಪ ಕಾರೆ , ನಿರ್ಮಲ ಚಿದಾನಂದಪ್ಪ ಹೂಗಾರ್ , ಗ್ರಾಮದ ಹಿರಿಯರಾದ ಮಾಸಪ್ಪ ಕಬ್ಬರಗಿ ,ಶಿವನಗೌಡ ಪೊಲೀಸ್ ಪಾಟೀಲ್, ವಿರುಪಾಕ್ಷಪ್ಪ ಹುನಗುಂದ, ಹನುಮಪ್ಪ ಹರಿಜನ್, ಪಾಲಕ ಪೋಷಕರು ಶಾಲಾ ಶಿಕ್ಷಕರಾದ ರಾಮಣ್ಣ ಮೇಟಿ, ಅಶೋಕ ಕಟ್ಟಿಮನಿ ಶಿವ ಲೀಲಾ ಹೂಗಾರ ಇದ್ದರು.
ಸದ್ದಿಲ್ಲದ ಸ್ಮಾರ್ಟ್ ಕ್ರಾಂತಿ :
ಈ ಬೆಳವಣಿಗೆ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿ ಶಾಲೆ ಸ್ಮಾರ್ಟ್ ಕ್ಲಾಸ್ ಹೊಂದಬೇಕೆನ್ನುವ ಸದ್ದಿಲ್ಲದ ಕ್ರಾಂತಿ ಕುಷ್ಟಗಿಯಲ್ಲಿ ಶುರುವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಉಳಿದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಕೊಠಡಿ ಹೊಂದುವ ಯೋಜನೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಇಚ್ಛಾಶಕ್ತಿ ಮೇರೆಗೆ ಚಾಲನೆ ಸಿಕ್ಕಿರುವುದು ಮಹತ್ವದ ಬೆಳವಣಿಗೆ ಆಗಿದೆ ಎನ್ನುವುದು ಇಲ್ಲಿ ಸ್ಮರಿಸಬಹುದಾಗಿದೆ
– ಮಂಜುನಾಥ ಮಹಾಲಿಂಗಪುರ ಕುಷ್ಟಗಿ