Advertisement

ಕ್ಷೇತ್ರದ ಮಗನಾಗುವ ಆಸೆಯಿತ್ತು

11:38 AM May 27, 2018 | Team Udayavani |

ಬೆಂಗಳೂರು: ರಾಮಚಂದ್ರ ಅವರ ಪರವಾಗಿ ಶನಿವಾರ ಬೆಳಗ್ಗೆಯಿಂದ ಪ್ರಚಾರ ನಡೆಸಿದ ಪ್ರಜ್ವಲ್‌ ರೇವಣ್ಣ ಭಾಷಣ ಮಾಡದಂತೆ ದೇವೆಗೌಡರು ಸೂಚಿಸಿದ್ದರು. ಹಲವು ಬಡಾವಣೆಗಳಲ್ಲಿ ಕಾರ್ಯಕರ್ತರು ಮಾತನಾಡುವಂತೆ ಒತ್ತಾಯಿಸಿ ಪ್ರಜ್ವಲ್‌ ಪರ ಘೋಷಣೆ ಕೂಗಿ ಅವರು ಎಲ್ಲಿಯೂ ಮಾತನಾಡಿರಲಿಲ್ಲ.

Advertisement

ಆದರೆ, ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಕೆಲ ನಿಮಿಷಗಳ ಮೊದಲು ಮಾತನಾಡಿರುವ ಪ್ರಜ್ವಲ್‌, “ಕ್ಷೇತ್ರದ ಮಗನಾಗಿ ಕೆಲಸ ಮಾಡುವ ಆಸೆಯಿತ್ತು. ಇನ್ನು ಮುಂದೆಯೂ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ,’ ಎಂದರು.

ದಟ್ಟಣೆಯಲ್ಲಿ ಸಿಲುಕಿದ ಎಚ್‌ಡಿಡಿ: ರಾಮಚಂದ್ರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡ ಅವರು ಜಾಲಹಳ್ಳಿಯಿಂದ ಗೊರಗುಂಟೆ ಪಾಳ್ಯದ ಕಡೆಗೆ ಹೋಗುವ ವೇಳೆ ಆ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಹೀಗಾಗಿ ಸುಮಾರು 15 ನಿಮಿಷಗಳ ಕಾಲ ಮಾಜಿ ಪ್ರಧಾನಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದರು.

Advertisement

Udayavani is now on Telegram. Click here to join our channel and stay updated with the latest news.

Next