Advertisement
ಇದನ್ನೂ ಓದಿ:Bollywood; ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ ಮದುವೆ ಡೇಟ್ ಫಿಕ್ಸ್
Related Articles
Advertisement
ಓಬಿಸಿಗೆ ಮಾನ್ಯತೆ ಕೊಟ್ಟವರು ಯಾರು?
ಪ್ರಧಾನಿ ನರೇಂದ್ರ ಮೋದಿ ಅವರ ಸಮುದಾಯವನ್ನು ಓಬಿಸಿಗೆ ಸೇರಿಸಬೇಕೆಂದು 1994ರಲ್ಲಿ ಗುಜರಾತ್ ನ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಶಿಫಾರಸು ಮಾಡಿತ್ತು.. ಆ ಸಂದರ್ಭದಲ್ಲಿ ಮೋದಿ ಅವರು ಯಾವುದೇ ಹುದ್ದೆಯಲ್ಲಿ ಇರಲಿಲ್ಲವಾಗಿತ್ತು. ಓಬಿಸಿಗೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ 2,000ನೇ ಇಸವಿಯಲ್ಲಿ ಕೋರಿತ್ತು. ಅದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿತ್ತು. ಮೋದಿಜೀಯವರ (ಜಾಟಿ) ಸಮುದಾಯವನ್ನು ಓಬಿಸಿಗೆ ಸೇರಿಸಬೇಕೆಂದು 1994ರ ಜುಲೈ 25ರಂದು ಶಿಫಾರಸು ಮಾಡಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ನ ಛಬೀಲ್ ದಾಸ್ ಮೆಹ್ತಾ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಆಗ ಮೋದಿಜೀಯವರು ಯಾವ ಚುನಾವಣೆಗೂ ಸ್ಪರ್ಧಿಸಿರಲಿಲ್ಲವಾಗಿತ್ತು. ಬಹುಶಃ ಅವರು ಪಕ್ಷಕ್ಕಾಗಿ ದುಡಿಯುತ್ತಿದ್ದರು. 2001ರಲ್ಲಿ ಮೋದಿಜೀಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು ಎಂದು ಸಚಿವ ಅಮಿತ್ ಶಾ ಪುರಾವೆ ಸಹಿತ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.